More

    ರಷ್ಯಾದಲ್ಲಿ ಮೃತಪಟ್ಟ ತಮಿಳುನಾಡಿನ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು; ಇಲ್ಲಿ ಕುಟುಂಬದವರ ಗೋಳಾಟ

    ಚೆನ್ನೈ: ರಷ್ಯಾದ ವೋಲ್ಗೋಗ್ರಾಡ್​ ಸ್ಟೇಟ್​ ವೈದ್ಯಕೀಯ ವಿಶ್ವ ವಿದ್ಯಾನಿಲಯದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಭಾರತದ ನಾಲ್ವರು ವಿದ್ಯಾರ್ಥಿಗಳು ಭಾನುವಾರ ವೋಲ್ಗಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇವರೆಲ್ಲರೂ ತಮಿಳುನಾಡಿನವರು ಎಂದು ವರದಿಯಾಗಿದೆ.

    ಆಶಿಕ್ ಮೊಹಮ್ಮದ್, ಮನೋಜ್ ಆನಂದ್, ಆರ್ ವಿಘ್ನೇಶ್, ಮತ್ತು ಸ್ಟೀಫನ್ ಲೆಬಾಕು ಮೃತ ವಿದ್ಯಾರ್ಥಿಗಳು. ಇವರ ವಯಸ್ಸು ಅಜಮಾಸು 22-24 ಎಂದು ಅಂದಾಜಿಸಲಾಗಿದೆ.

    ಈ ನಾಲ್ವರೂ ಭಾನುವಾರ ನದಿಗೆ ವಿಹಾರಕ್ಕೆ ಹೋಗಿದ್ದರು. ಮೊದಲು ಓರ್ವ ನೀರಿನಲ್ಲಿ ಇಳಿದ. ಆದರೆ ನಂತರ ಮುಳುಗಲು ಶುರು ಮಾಡಿದ್ದಲ್ಲದೆ, ಸಹಾಯಕ್ಕಾಗಿ ಕೂಗಲು ಶುರು ಮಾಡಿದ. ಆಗ ಉಳಿದ ಮೂವರೂ ಅವನ ಸಹಾಯಕ್ಕಾಗಿ ನೀರಿಗೆ ಇಳಿದಿದ್ದರ ಪರಿಣಾಮ ಎಲ್ಲರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಮೃತರಲ್ಲಿ ಓರ್ವನಾದ ಮೊಹಮ್ಮದ್​ ಆಶಿಕ್​ ಮೆಡಿಕಲ್​ ಕೊನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದ. ಈ ಬಾರಿ ವಿದ್ಯಾಭ್ಯಾಸ ಮುಗಿಯುತ್ತಿತ್ತು. ವೈದ್ಯನಾಗುವ ಕನಸು ಹೊತ್ತಿದ್ದ ಎಂದು ಆತನ ತಂದೆ ಹೇಳಿದ್ದಾರೆ. ಅಷ್ಟೇ ಅಲ್ಲ, ಹೇಗಾದರೂ ಅವನ ಮೃತದೇಹವನ್ನು ಇಲ್ಲಿಗೆ ಕರೆತರಲು ಸಹಾಯ ಮಾಡಿ. ನಾವೇ ಅಂತ್ಯಕ್ರಿಯೆ ಮಾಡುತ್ತೇವೆ ಎಂದೂ ಕೇಳಿಕೊಂಡಿದ್ದಾರೆ.
    ಇನ್ನು ಸ್ಟೀಪನ್​ ಲೇಬಾಕು ಅವರ ತಂದೆ-ತಾಯಿ ತಮಿಳುನಾಡಿನ ಮುಖ್ಯಮಂತ್ರಿಯವರ ಬಳಿ ಕೂಡ ಮನವಿ ಮಾಡಿಕೊಂಡಿದ್ದಾರೆ. ರಷ್ಯಾದಲ್ಲಿರುವ ಭಾರತೀಯ ರಾಯಭಾರಿಯ ಜತೆ ಮಾತುಕತೆ ನಡೆಸಿದ್ದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕಗ್ಗಂಟಾಗುತ್ತಿದೆ ಸುಶಾಂತ್​ ಸಿಂಗ್​ ಕೇಸ್: ಶವ ಸಾಗಿಸಿದ ಆಂಬುಲೆನ್ಸ್​ ಸಿಬ್ಬಂದಿಯಿಂದ ಸ್ಫೋಟಕ ಮಾಹಿತಿ ಬಹಿರಂಗ

    ಹಾಗೇ ಇನ್ನೋರ್ವ ಮೃತ ವಿದ್ಯಾರ್ಥಿ ಆರ್​.ವಿಘ್ನೇಶ್​ ತಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ತಿಟ್ಟಕುಡಿಯಲ್ಲಿ ನೆಲೆಸಿದ್ದಾರೆ. ಸೋದರಿ ಕೊಯಂಬತ್ತೂರಿನಲ್ಲಿ ಓದುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ವಿಘ್ನೇಶ್​ ಕುಟುಂಬದವರು ಕಡಲೂರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ವಿಘ್ನೇಶ್​ ಮೃತದೇಹ ವಾಪಸ್​ ಬೇಕು ಎನ್ನುತ್ತಿದ್ದಾರೆ.

    ಇನ್ನು ಮನೋಜ್​ ಆನಂದ್​ ಅವರ ತಂದೆ ಸಬ್​ ಇನ್ಸ್​ಪೆಕ್ಟರ್​. ಇವರೂ ಕೂಡ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ. (ಏಜೆನ್ಸೀಸ್)

    ಕೋವಿಡ್​-19 ಪಿಡುಗು ತಂದಿಟ್ಟ ಪೇಚು; 247 ದಶಲಕ್ಷ ಮಕ್ಕಳ ವಿದ್ಯಾಭ್ಯಾಸದ ಮೇಲೆ ಕರಿನೆರಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts