More

    ಕರೊನಾ ಮಹಾಮಾರಿಗೆ ನಾಲ್ಕು ತಿಂಗಳ ಶಿಶು ಬಲಿ!

    ಕೋಝಿಕೋಡ್‌ (ಕೇರಳ): ಮೊದಲೆಲ್ಲಾ ವೃದ್ಧರನ್ನು ಬಲಿ ಪಡೆಯುತ್ತಿದ್ದ ಕರೊನಾ ವೈರಸ್‌, ನಿಧಾನವಾಗಿ ಯುವಕರನ್ನೂ ಸೆಳೆಯತೊಡಗಿತ್ತು. ಇದೀಗ ನವಜಾತ ಶಿಶುಗಳ ದೇಹವನ್ನೂ ಆಕ್ರಮಿಸಿ ಅವರನ್ನು ಸಾವಿನ ದವಡೆಗೆ ನೂಕುತ್ತಿದೆ!

    ಇಂಥದ್ದೊಂದು ವರದಿ ಕೇರಳದ ಕೋಝಿಕೋಡ್‌ನಲ್ಲಿ ನಡೆದಿದೆ. ನಾಲ್ಕು ತಿಂಗಳ ಶಿಶು ಕರೊನಾ ಸೋಂಕಿಗೆ ಬಲಿಯಾಗಿದೆ.

    ಉಸಿರಾಟದ ಸಮಸ್ಯೆಯಿದ್ದ ಮಗುವನ್ನು ಇಲ್ಲಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಗುವಿನ ಗಂಟಲ ದ್ರವದ ಪರೀಕ್ಷೆ ಮಾಡಲಾಗಿತ್ತು. ಕರೊನಾ ಸೋಂಕು ಮಗುವಿನಲ್ಲಿ ದೃಢಪಟ್ಟಿತ್ತು. ಅದಾದ ಕೆಲವೇ ದಿನಗಳಲ್ಲಿ ಮಗು ಇಂದು ಬೆಳಗ್ಗೆ ಮೃತಪಟ್ಟಿದೆ.

    ಮಗುವಿಗೆ ಹೃದಯ ಸಂಬಂಧಿ ಸಮಸ್ಯೆ ಇತ್ತು. ಇದೇ ಕಾರಣಕ್ಕೆ ಸೋಂಕು ಬಲು ಬೇಗನೆ ಮಗುವಿನ ದೇಹವನ್ನು ಆಕ್ರಮಿಸಿದೆ. ಈ ರೀತಿ ಯಾವುದಾದರೂ ಸಮಸ್ಯೆಗಳು ಇದ್ದರೆ ಕರೊನಾ ಅಂಥವರಿಗೆ ಬೇಗನೆ ಹರಡಿ ಬಿಡುತ್ತದೆ. ಇದೇ ಕಾರಣಕ್ಕೆ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿರುವ ವೃದ್ಧರಿಗೆ ಬೇಗನೆ ಸೋಂಕು ತಗಲಲು ಕಾರಣ ಅದೇ ರೀತಿಯ ಯುವಕರು ಯಾವುದಾದರೂ ಚಟಕ್ಕೆ ದಾಸರಾಗಿದ್ದು, ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇಲ್ಲದೇ ಹೋದಲ್ಲಿ ಅಂಥವರಿಗೆ ಬಹು ಬೇಗನೆ ವೈರಸ್‌ ದೇಹ ಪ್ರವೇಶಿಸಿಬಿಡುತ್ತದೆ ಎಂದು ಇಲ್ಲಿ ವೈದ್ಯಕೀಯ ಅಧಿಕಾರಿ ಹೇಳಿದ್ದಾರೆ.

    ಈ ಮಗುವಿನ ಪ್ರಕರಣದಲ್ಲಿಯೂ ಹೀಗೆಯೇ ಆಗಿದೆ. ಮೂರು ತಿಂಗಳ ಹಿಂದೆ ಹೃದಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗಿತ್ತು. ಮಗು ಚೇತರಿಸಿಕೊಂಡಂತೆ ಕಂಡುಬಂದಿದ್ದರೂ, ವೈರಸ್‌ ಬೇಗನೇ ದೇಹವನ್ನು ಸೇರಿಬಿಟ್ಟಿದೆ ಎಂದು ಅವರು ಹೇಳಿದ್ದಾರೆ.

    ಕೇರಳದಲ್ಲಿ ಇದುವರೆಗೆ 438 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬರೂ ಆಸ್ಪತ್ರೆಯಿಂದ ಬಿಡುಗಡೆಯಾಗಿಲ್ಲ. ಈಗಾಗಲೇ ಇದು ಮೂವರ ಪ್ರಾಣವನ್ನು ಪಡೆದುಕೊಂಡಿದೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts