More

    ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ನಾಲ್ವರು ಮಕ್ಕಳು ಸೇರಿ ಒಂಬತ್ತು ಮಂದಿ ಮೃತ

    ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್ ನಗರದ ಹೊರವಲಯದಲ್ಲಿ ಸಿಲಿಂಡರ್ ಗ್ಯಾಸ್ ಸೋರಿಕೆಯುಂಟಾಗಿ ಸ್ಫೋಟಗೊಂಡಿದ್ದರಿಂದಾಗಿ ನಾಲ್ವರು ಮಕ್ಕಳು ಸೇರಿ ಒಟ್ಟು ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ.

    ಜುಲೈ 20ರ ರಾತ್ರಿ ಈ ಘಟನೆ ಸಂಭವಿಸಿದೆ. ಮಧ್ಯ ಪ್ರದೇಶ ಗುಣ ಜಿಲ್ಲೆಯ ಮೂಲದ ಕುಟುಂಬವೊಂದು ಅಹಮದಾಬಾದ್ ನಗರದಲ್ಲಿ ಕಾರ್ಮಿಕರಾಗಿ ದುಡಿಯುತ್ತಿತ್ತು, ಅಬರ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿದೆ. ಗ್ಯಾಸ್ ಸೋರಿಕೆಯಾಗಿ ಸ್ಫೋಟಗೊಂಡಿದ್ದು, ಬೆಂಕಿ ಹತ್ತಿ ಉರಿದಿದೆ. ಘಟನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿ ಒಟ್ಟು 10 ಮಂದಿ ಗಂಭೀರ ಗಾಯಾಳುಗಳಾಗಿದ್ದರು. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಗುರುವಾರ ಚಿಕಿತ್ಸೆಯ ಸಮಯದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ನಂತರ ಐದು ಮಂದಿ ಶುಕ್ರವಾರ ಮತ್ತು ಇನ್ನೊಬ್ಬರು ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಅಸ್ಲಾಲಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಿಆರ್ ಜಡೇಜಾ ಹೇಳಿದ್ದಾರೆ.

    ಮೃತಪಟ್ಟವರನ್ನು ರಾಂಪ್ಯಾರಿ ಅಹಿರ್ವಾರ್ (56), ರಾಜುಭಾಯ್ ಅಹಿರ್ವಾರ್ (31), ಸೋನು ಅಹಿರ್ವಾರ್ (21), ಸೀಮಾ ಅಹಿರ್ವಾರ್ (25), ಸರ್ಜು ಅಹಿರ್ವಾರ್ (22), ವೈಶಾಲಿ (7), ನಿತೇಶ್ (6), ಪಾಯಲ್ (4) ಮತ್ತು ಆಕಾಶ್ (2) ಎಂದು ಗುರುತಿಸಲಾಗಿದೆ.

    ಸಿಲಿಂಡರ್ ಸೋರಿಕೆಯಾಗುತ್ತಿದ್ದಾಗ ಕುಟುಂಬಸ್ಥರು ಮನೆಯಲ್ಲಿ ಮಲಗಿದ್ದರು. ಸೋರಿಕೆಯ ಬಗ್ಗೆ ಎಚ್ಚರಿಕೆ ನೀಡಲು ಅವರ ನೆರೆಹೊರೆಯವರು ಅವರ ಮನೆ ಬಾಗಿಲು ಬಡಿದಾಗ ಮನೆ ಸದಸ್ಯರಲ್ಲಿ ಒಬ್ಬರು ಎದ್ದು, ಲೈಟ್ ಸ್ವಿಚ್ ಆನ್ ಮಾಡಿದ್ದಾರೆ. ಅದರಿಂದ ಉಂಟಾದ ಕಿಡಿಯಿಂದಾಗಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಉರಿದಿದೆ ಎಂದು ಅವರು ತಿಳಿಸಿದ್ದಾರೆ. ಸದ್ಯ ಕುಟುಂಬದ ಓರ್ವ ಸದಸ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. (ಏಜೆನ್ಸೀಸ್)

    ‘ನನ್ನ ಗಂಡ ಅಶ್ಲೀಲ ವಿಡಿಯೋ ಹಾಕುತ್ತಿರಲಿಲ್ಲ, ಶೃಂಗಾರದ ವಿಡಿಯೋ ಚಿತ್ರೀಕರಿಸ್ತಿದ್ರು’

    ಒಲಿಂಪಿಕ್ಸ್​: ಮೆಡಲ್ ರೌಂಡ್​​ಗೆ ಭಾರತದ ಸೌರಭ್ ಚೌಧರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts