More

    4 ಲಕ್ಷ ರೂ., 9392 ಲೀಟರ್ ಲಿಕ್ಕರ್ ವಶ

    ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ಮತ್ತು ಬಾದಾಮಿ ಮತಕ್ಷೇತ್ರಗಳಲ್ಲಿ ಸ್ಥಾಪಿಸಲಾದ ವಿವಿಧ ಚೆಕ್‌ಪೋಸ್ಟ್‌ಗಳಿಗೆ ಶುಕ್ರವಾರ ರಾತ್ರಿ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ನವನಗರದ ಎಪಿಎಂಸಿ, ಗದ್ದನಕೇರಿ ಕ್ರಾಸ್ ಹಾಗೂ ಕುಳಗೇರಿ ಕ್ರಾಸ್‌ನಲ್ಲಿ ಸ್ಥಾಪಿಸಿದ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯವೈಖರಿ, ತಪಾಸಣೆ ಮಾಡಲಾದ ವಾಹನಗಳ ಮಾಹಿತಿಯನ್ನು ಪಡೆದುಕೊಂಡರು.
    ಯುಕೆಪಿ ಮಹಾವ್ಯವಸ್ಥಾಪಕ ಭಂವರ ಸಿಂಗ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಪ್ರೊಬೇಷನರಿ ಐಎಎಸ್ ಅಧಿಕಾರಿ ಕನಿಷ್ಕ ಸೇರಿ ಇತರರು ಇದ್ದರು.

    4 ಲಕ್ಷ ರೂ., 9392 ಲೀಟರ್ ಲಿಕ್ಕರ್ ಜಪ್ತಿ: ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 4 ಲಕ್ಷ ನಗದು ಮತ್ತು 9392 ಲೀಟರ್ ಲಿಕ್ಕರ ಜಪ್ತಿ ಮಾಡಲಾಗಿದೆ. ಮುಧೋಳ ಕ್ಷೇತ್ರದಲ್ಲಿ 3028.14 ರೂ. ಮೌಲ್ಯದ 7.68 ಲೀಟರ್ ಲಿಕ್ಕರ್, ತೇರದಾಳ ಕ್ಷೇತ್ರದಲ್ಲಿ 2539 ರೂ. ಮೊತ್ತದ 6.12 ಲೀಟರ್ ಲಿಕ್ಕರ್, ಜಮಖಂಡಿ ಕ್ಷೇತ್ರದಲ್ಲಿ 4 ಲಕ್ಷ ರೂ. ನಗದು, ಬೀಳಗಿ ಕ್ಷೇತ್ರದಲ್ಲಿ 8654 ರೂ. ಮೊತ್ತದ 25.12 ಲೀಟರ್ ಲಿಕ್ಕರ್, ಬಾದಾಮಿ ಕ್ಷೇತ್ರದಲ್ಲಿ 2 ಲಕ್ಷ ರೂ. ನಗದು, 3659 ರೂ. ಮೊತ್ತದ 18.3 ಲೀಟರ್ ಲಿಕ್ಕರ್, ಬಾಗಲಕೋಟೆ ಕ್ಷೇತ್ರದಲ್ಲಿ 15.37 ಲಕ್ಷ ರೂ.ಮೊತ್ತದ 9317.5 ಲೀಟರ್ ಲಿಕ್ಕರ್ ಹಾಗೂ ಹುನಗುಂದ ಕ್ಷೇತ್ರದಲ್ಲಿ 10620 ರೂ. ಮೊತ್ತದ 17.7 ಲೀಟರ್ ಲಿಕ್ಕರ್ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts