More

    4 ತಿಂಗಳ ವೇತನ ನೀಡಲು ಒತ್ತಾಯಿಸಿ ಪ್ರತಿಭಟನೆ

    ಸವಣೂರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕ ಸಿಬ್ಬಂದಿ, ಅಕ್ಷರ ದಾಸೋಹ ಬಿಸಿಯೂಟ ತಯಾರಿಕರ ಫೆಡರೇಷನ್ (ಎಐಟಿಯುಸಿ) ತಾಲೂಕು ಸಮಿತಿ ಪದಾಧಿಕಾರಿಗಳು ತಾಲೂಕು ಪಂಚಾಯಿತಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ‘ಕಳೆದ 16 ವರ್ಷಗಳಿಂದ ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಪಿಂಚಣಿ ಸೇರಿದಂತೆ ಇತರ ಸರ್ಕಾರಿ ಸೌಲಭ್ಯಗಳು ಇಲ್ಲದೆ ಅಲ್ಪ ಸಂಭಾವನೆ ಪಡೆದು ಕೆಲಸ ನಿರ್ವಹಿಸುತ್ತಿದ್ದೇವೆ. ರಜಾದಿನಗಳಲ್ಲಿ ವೇತನ ಕಡಿತಗೊಳಿಸಲಾಗುತ್ತಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಬಿಸಿಯೂಟ ತಯಾರಿಕರು ವೇತನ ಇಲ್ಲದೆ ಪರದಾಡುವಂತಾಗಿದೆ. ಆದ್ದರಿಂದ, ಕೂಡಲೆ ಅಸಂಘಟಿತ ಕಾರ್ವಿುಕರಿಗೆ ನೀಡಿರುವ ಪ್ರೋತ್ಸಾಹ ಧನ ಹಾಗೂ ಆಹಾರ ಧಾನ್ಯಗಳ ಕಿಟ್ ವಿತರಿಸಬೇಕು. ಬಾಕಿ ಇರುವ 4 ತಿಂಗಳ ವೇತನ ಹಾಗೂ ಶಾಲೆಗಳು ಆರಂಭವಾಗುವವರೆಗೂ ಪ್ರತಿ ತಿಂಗಳು ವೇತನ ನೀಡಬೇಕು’ ಎಂದು ಒತ್ತಾಯಿಸಿದರು.

    ಬೇಡಿಕೆಗಳ ಮನವಿಯನ್ನು ತಾ.ಪಂ ಇಒ ಮುನಿಯಪ್ಪ ಪಿ. ಸ್ವೀಕರಿಸಿ, ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಲಾಗುವುದು ಎಂದರು. ಎಡಿ ಎಸ್.ಎಚ್. ಅಮರಾಪೂರ, ಅಕ್ಷರ ದಾಸೋಹ ತಾಲೂಕು ನಿರ್ದೇಶಕ ಕಲ್ಮೇಶ ಸುಣದೊಳ್ಳಿ ಹಾಗೂ ಸಿಬ್ಬಂದಿ ಇದ್ದರು.

    ಎಐಟಿಯುಸಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಮರಿಯಮ್ಮನವರ, ಜಿಲ್ಲಾಧ್ಯಕ್ಷ ಜಿ.ಡಿ. ಪೂಜಾರ, ಪದಾಧಿಕಾರಿಗಳಾದ ನಾಗರತ್ನ ಕುಲಕರ್ಣಿ, ಲಲಿತಾ ಬುಶೆಟ್ಟಿ, ಜರೇರಾಬಾನು ರಾಯಚೂರ, ಶಶಿಕಲಾ ಮಠಪತಿ, ಪಾರ್ವತಿ ಆಪ್ಟೆ, ಅಕ್ಕಮ್ಮ ಆರಾಧ್ಯಮಠ, ರೇಖಾ ತಳವಾರ, ಸಾವಿತ್ರಿ ಮೈಲಮ್ಮನವರ, ಮಾದೇವಿ ಕುರಬರ, ಎಸ್.ಡಿ. ಇಜಂತಕರ, ಸುಜಾತಾ ರಸಾಳಕರ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts