More

    3ನೇ ದಿನವೂ ಷೇರುಪೇಟೆ ತಲ್ಲಣ

    ಮುಂಬೈ: ಸತತ ಮೂರನೇ ದಿನವೂ ಭಾರತದ ಷೇರುಪೇಟೆಯಲ್ಲಿ ತಲ್ಲಣ ಮುಂದುವರಿದಿತ್ತು. ಶುಕ್ರವಾರ ಬಿಎಸ್​ಇ ಸೆನ್ಸೆಕ್ಸ್, ಎನ್​ಎಸ್​ಇ ನಿಫ್ಟಿ ಆರಂಭಿಕ ಚೇತರಿಕೆ ತೋರಿದರೂ ಬಳಿಕ ಜಾಗತಿಕ ವಿದ್ಯಮಾನಗಳಿಗೆ ಅನುಗುಣವಾಗಿ ಕುಸಿತ ಕಂಡಿದೆ. ಸೆನ್ಸೆಕ್ಸ್ ಬೆಳಗ್ಗೆ 60,000ದ ಗಡಿದಾಟಿದರೂ, ಬಳಿಕ 677.77 ಅಂಶ (1.13%) ಕುಸಿದು 59,306.93 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ. ಇದೇ ರೀತಿ ನಿಫ್ಟಿ 185.60 ಅಂಶ (1.04%) ಕುಸಿದು 17,671.65 ಅಂಶದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ.

    ಐಆರ್​ಸಿಟಿ ಷೇರು ಮೌಲ್ಯ ಕುಸಿತ: ಐಆರ್​ಸಿಟಿಯು ಕನ್ವಿನೆನ್ಸ್ ಫೀಸ್ ಮೂಲಕ ಸಂಗ್ರಹಿಸುತ್ತಿದ್ದ ಆದಾಯದಲ್ಲಿ ಶೇಕಡ 50 ಕೇಂದ್ರ ಸರ್ಕಾರಕ್ಕೆ ನೀಡಬೇಕೆಂಬ ನಿರ್ಧಾರವನ್ನು ರೈಲ್ವೆ ಸಚಿವಾಲಯ ತೆಗೆದುಕೊಂಡಿತ್ತು. ಇದರಿಂದ ಐಆರ್​ಸಿಟಿ ಷೇರು ಮೌಲ್ಯ 820 ರೂಪಾಯಿಯಲ್ಲಿದ್ದುದು ದಿಢೀರ್ 685 ರೂಪಾಯಿಗೆ ಕುಸಿದಿತ್ತು. ಬಳಿಕ ಸರ್ಕಾರ ಆದೇಶ ಹಿಂಪಡೆದ ಕಾರಣ ಷೇರುಮೌಲ್ಯ ಚೇತರಿಕೆ ಕಂಡು 905ರ ಗಡಿದಾಟಿತ್ತು.

    ಚಿನ್ನ, ಬೆಳ್ಳಿ ಕುಸಿತ: ಚಿನ್ನದ ದರ 10 ಗ್ರಾಮಿಗೆ 271 ರೂಪಾಯಿ ಕುಸಿದು 46,887 ರೂಪಾಯಿ ಆಗಿತ್ತು. ಬೆಳ್ಳಿಯ ದರ ಒಂದು ಕಿಲೋಕ್ಕೆ 687 ರೂಪಾಯಿ ಕುಸಿದು 63,210 ರೂಪಾಯಿ ಆಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts