More

    ರಾಮ ಪಾದಸ್ಪರ್ಶ ಅನುಭವಕ್ಕೆ 3ಡಿ ಎಫೆಕ್ಟ್

    ಉಡುಪಿ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಮಮಂದಿರದಲ್ಲಿ ಪ್ರಮುಖ ಎರಡು ರಚನೆಗಳನ್ನು ನಿರ್ಮಿಸಲು ಸಾಧ್ಯವೇ ಎಂದು ಪರಿಶೀಲಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಜ್ಞರಿಗೆ ಸೂಚನೆ ನೀಡಿದ್ದಾರೆ.
    ನವದೆಹಲಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಭೆಯಲ್ಲಿ ಈ ಅಂಶಗಳನ್ನು ಮಂದಿರ ನಿರ್ಮಾಣ ಕುರಿತ ಅಜೆಂಡಾಕ್ಕೆ ಸೇರಿಸಲಾಗಿದೆ.

    ಏನು ಸೂಚನೆ?: 1. ರಾಮನವಮಿಯ ದಿನ ಸೂರ್ಯನ ಕಿರಣಗಳು ನೇರವಾಗಿ ಶ್ರೀ ರಾಮ ದೇವರ ಮೂರ್ತಿಯ ಮೇಲೆ ಬೀಳುವಂತೆ ಗರ್ಭಗುಡಿ ವಿನ್ಯಾಸ ಮಾಡುವಂತೆ ಕೌನ್ಸಿಲ್ ಫಾರ್ ಇಂಡಸ್ಟ್ರೀಯಲ್ ರೀಸರ್ಚ್ (ಸಿಎಸ್‌ಐಆರ್)ಗೆ ನಿರ್ದೇಶನ.

    2. ರಾಮ ದೇವರಿಗೆ ನಮಸ್ಕಾರ ಮಾಡುವಾಗ ಎಲ್ಲರಿಗೂ ರಾಮ ದೇವರ ಪಾದ ಮುಟ್ಟಲು ಅವಕಾಶ ಸಿಗುವುದಿಲ್ಲ. ಆದರೆ, ಭಕ್ತರು ಗರ್ಭಗುಡಿಯ ಮುಂದೆ ನಮಸ್ಕರಿಸುವಾಗ ದೇವರ ಪಾದವನ್ನು ಮುಟ್ಟಿದ ಅನುಭವ ನೀಡುವಂತೆ 3ಡಿ ತಂತ್ರಜ್ಞಾನದ ರಚನೆ ಸಾಧ್ಯವೇ ಎಂದು ಪರಿಶೀಲಿಸಲು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಸೂಚನೆ.

    ಈ ಎರಡೂ ಅಂಶಗಳಿಗೆ ಸಭೆಯಲ್ಲಿ ಅನುಮೋದನೆ ದೊರೆತಿದೆ. ಇದಲ್ಲದೆ, ಇತ್ತೀಚೆಗೆ ನಡೆದಿದ್ದ ಸಭೆಯ ಪ್ರಮುಖ ಪ್ರಸ್ತಾವನೆಗಳಿಗೂ ಅನುಮೋದನೆ ನೀಡಲಾಯಿತು. ಅಯೋಧ್ಯೆ ರಾಮಮಂದಿರ ನಿರ್ಮಾಣ ಟ್ರಸ್ಟ್‌ಗೆ ಭಾರತೀಯ ಸ್ಟೇಟ್ ಬ್ಯಾಂಕ್‌ನ ಅಯೋಧ್ಯೆ ಶಾಖೆಯ ಖಾತೆಯನ್ನು ಮಾತ್ರ ಬಳಸುವುದು ಮತ್ತು ಜನವರಿ 14ರಿಂದ 45 ದಿನ ರಾಮಜನ್ಮಭೂಮಿಗೆ ನಿಧಿ ಸಂಗ್ರಹ ಅಭಿಯಾನ ನಡೆಸುವುದು ಪ್ರಮುಖ ಪ್ರಸ್ತಾವನೆಗಳು.

    ಸಭೆಯಲ್ಲಿ ಟ್ರಸ್ಟ್ ಸದಸ್ಯರಾದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಗೋವಿಂದ ಗಿರಿದಾಸ್, ಕಾರ್ಯದರ್ಶಿ ಚಂಪತ್‌ರಾಯ್, ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮತ್ತಿತರರು ಉಪಸ್ಥಿತರಿದ್ದರು.

    ಮಾತೃಮಂಡಳಿಯಿಂದ ಲವ್‌ಜಿಹಾದ್ ತಡೆ
    ಉಡುಪಿ: ಹದಿಹರೆಯದ ಹಿಂದು ಧರ್ಮೀಯ ಬಾಲಕಿಯರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಪರಿಹಾರ ಕಂಡುಕೊಳ್ಳಲು ಮಾತೃಮಂಡಳಿಗಳ ಮೂಲಕ ಕ್ರಮ ತೆಗೆದುಕೊಳ್ಳಬೇಕು. ಇದರಿಂದ ಲವ್ ಜಿಹಾದ್, ಅತ್ಯಾಚಾರ ಮುಂತಾದ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.
    ಬುಧವಾರ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿಂದೂ ಪರಿಷತ್ ಮಾರ್ಗದರ್ಶಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸಾಧು ಸಂತರ ಮೇಲೆ ಹಲ್ಲೆ ಅಥವಾ ಹತ್ಯೆ ನಡೆದರೆ ಕೂಡಲೆ ನೂರಾರು ಸಂತರು ಸೇರಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡಬೇಕು. ದೇಶದಲ್ಲಿ ಮತಾಂತರ ಸಮಸ್ಯೆ ಜತೆಗೆ ಶಾಸ್ತ್ರಾಂತರದ ಸಮಸ್ಯೆಯೂ ಕಾಡುತ್ತಿದೆ. ಭಗವದ್ಗೀತೆಯನ್ನು ಕೃಷ್ಣ ಹೇಳಿದ್ದಲ್ಲ, ಕ್ರಿಸ್ತ ಹೇಳಿದ್ದು ಎಂದು ಅನೇಕ ಭಾಗಗಳಲ್ಲಿ ಹಿಂದುಗಳನ್ನು ನಂಬಿಸುವ ಕೆಲಸ ಆಗುತ್ತಿದೆ. ಇವುಗಳನ್ನೂ ಗಂಭೀರವಾಗಿ ಪರಿಗಣಿಸಬೇಕಾದ ಸಮಯ ಬಂದಿದೆ ಎಂದು ಶ್ರೀಗಳು ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸಂಘಚಾಲಕ ಭಯ್ಯಜಿ ಜೋಶಿ, ವಿವಿಧ ಸಾಧು ಸಂತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts