More

    ಎಂ.ಪಿ.ರವೀಂದ್ರ ಜನರ ಹೃದಯದಲ್ಲಿ ಶಾಶ್ವತ

    ಹರಪನಹಳ್ಳಿ: ಕ್ಷೇತ್ರದಲ್ಲಿ ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರ ಅಭಿವೃದ್ದಿ ಕಾರ್ಯಗಳ ಹೆಜ್ಜೆ ಗುರುತು ಶಾಶ್ವತವಾಗಿ ಉಳಿದಿವೆ ಎಂದು ಪುರಸಭೆ ಸದಸ್ಯ ಎಂ.ವಿ.ಅಂಜಿನಪ್ಪ ಹೇಳಿದರು.

    ಅಭಿವೃದ್ದಿ ಕಾರ್ಯಗಳ ಹೆಜ್ಜೆ ಗುರುತು ಶಾಶ್ವತ

    ಪಟ್ಟಣದ ಶಾಸಕರ ಗೃಹ ಕಚೇರಿಯ ಸಭಾಂಗಣದಲ್ಲಿ ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರ ಐದನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗುರುವಾರ ಮಾತನಾಡಿದರು. ರವೀಂದ್ರ ಅವರು 371ಜೆ ಸೌಲಭ್ಯ, ಕೆರೆಗಳಿಗೆ ನದಿ ನೀರು ಹರಿಸುವ ಯೋಜನೆ ಸೇರಿದಂತೆ ಅನೇಕ ಜನ ಪರ ಕೆಲಸಗಳಿಂದ ಜನರ ಹೃದಯಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.

    ಇದನ್ನೂ ಓದಿ: ಚೆಟ್ಟಳ್ಳಿಯಲ್ಲಿ ವಿವಾಹಿತ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿ

    ಎಂ.ಪಿ.ಪ್ರಕಾಶ್ ಅವರು 2008ರಲ್ಲಿ ಸೋತ ನಂತರ ಎಂಪಿ.ರವೀಂದ್ರ ಅವರು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಂಡರು. ನಂತರ ಕ್ಷೇತ್ರದಲ್ಲಿ ಪಕ್ಷಕ್ಕೆ ಪುನಶ್ಚೇತನ ನೀಡಿದರು. ರವೀಂದ್ರ ಅವರು ಜಾತ್ಯಾತೀತ ಹಾಗೂ ಹೃದಯ ಶ್ರೀಮಂತಿಕೆಯ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

    ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಕಲ್ಮಠ ಮಾತನಾಡಿ, ಎಂ.ಪಿ.ರವೀಂದ್ರ ಅವರು ತಂದೆ ಎಂಪಿ.ಪ್ರಕಾಶ್ ಅವರಂತೆ ರಾಜಕಾರಣದ ಜತೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದರು. ಅವರು ಅಭಿವೃದ್ಧಿಯ ಹರಿಕಾರ ಎಂದರು.

    ತಾಪಂ ಮಾಜಿ ಅಧ್ಯಕ್ಷ ಮೈದೂರು ಕುಬೇರಪ್ಪ, ಸಾಹಿತಿ ಇಸ್ಮಾಯಿಲ್ ಎಲಿಗಾರ್, ಕಂಚಿಕೇರಿ ಜಯಲಕ್ಷ್ಮೀ, ಎ.ಎಂ.ವಿಶ್ವನಾಥ್ ಮಾತನಾಡಿದರು. ವಕೀಲ ಜಗದಪ್ಪ, ಪ್ರಮುಖರಾದ ನಿಟ್ಟೂರು ಸಣ್ಣಹಾಲಪ್ಪ, ಪಿ.ರಾಮಪ್ಪ, ವನಜಾಕ್ಷಿ ಶಿವಯೋಗಿ, ನೇತ್ರಾವತಿ, ರತ್ನಮ್ಮ ಸೋಮಣ್ಣ, ಕವಿತಾ ಸುರೇಶ್, ಉಮಾ ಶಂಕರ್, ಹರಿಯಮ್ಮನಹಳ್ಳಿ, ಶಿವರಾಜ್, ಸಾಸ್ವಿಹಳ್ಳಿ ನಾಗರಾಜ್, ಶಂಕರ್, ಉದಯ್ ಶಂಕರ್, ಒ.ಮಹಾಂತೇಶ್ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts