More

    ಶಿಕ್ಷಕಿಗೆ 37.15 ಲಕ್ಷ ರೂ. ಪಂಗನಾಮ

    ರಾಣೆಬೆನ್ನೂರ: ಪ್ರಾಥಮಿಕ ಶಾಲೆ ಶಿಕ್ಷಕಿಯೊಬ್ಬರಿಗೆ ಸೈಬರ್ ಖದೀಮರು 4.80 ಕೋಟಿ ರೂ. ಆಸೆ ಹುಟ್ಟಿಸಿ 37.15 ಲಕ್ಷ ರೂ. ಪಂಗನಾಮ ಹಾಕಿದ್ದಾರೆ.

    ಇಲ್ಲಿಯ ಬೀರೇಶ್ವರ ನಗರದ ನಿವಾಸಿ ಹಾಗೂ ತಾಲೂಕಿನ ಚಿಕ್ಕಮಾಗನೂರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಮೋಸ ಹೋದವರು.

    ಇವರಿಗೆ ಮೊಬೈಲ್​ಗೆ ವಾಟ್ಸ್​ಆಪ್ ಗ್ಲೋಬಲ್ ಅವಾರ್ಡ್ ಕಂಪನಿಯ ಪ್ರೊಸೆಸಿಂಗ್ ಮ್ಯಾನೇಜರ್ ಡಾ. ಥಾಮಸ್ ವಿಲಿಯಮ್್ಸ ಮತ್ತು ಅಲೆಕ್ಷಾಂಡರ್ ಜೈನ್ ಎಂದು ಹೇಳಿಕೊಂಡ ಇಬ್ಬರು ‘ನೀವು ವಾಟ್ಸ್​ಆಪ್ ಗ್ಲೋಬರ್ ಅವಾರ್ಡ್ ವಿನ್ನರ್ ಆಗಿದ್ದೀರಿ. ನಿಮಗೆ 4.80 ಕೋಟಿ ರೂ. ದೊರೆತಿದೆ’ ಎಂದು ಮೆಸೇಜ್ ಕಳುಹಿಸಿದ್ದರು.

    ಶಿಕ್ಷಕಿ ಮೆಸೇಜ್​ಗೆ ಮರು ಉತ್ತರ ನೀಡುತ್ತಿದ್ದರಿಂದ ಖದೀಮರು ಬಹುಮಾನ ಕೊಡುವ ಬಗ್ಗೆ ಹಲವು ಬಾರಿ ಇ-ಮೇಲ್ ಮಾಡಿ ನಂಬಿಕೆ ಹುಟ್ಟಿಸಿದ್ದರು. ನಂತರ ಅವರಿಗೆ ಫೋನ್ ಮಾಡಿ ‘ಯುಎಸ್​ಎ ಡಾಲರ್​ಅನ್ನು ರೂಪಾಯಿಯಲ್ಲಿ ವಿನಿಮಯ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಹಲವು ಸರ್ವೀಸ್ ಚಾರ್ಜ್​ಗಳನ್ನು ಕಟ್ಟಬೇಕು’ ಎಂದು ನಂಬಿಸಿ ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ 37.15 ಲಕ್ಷ ರೂ. ಹಾಕಿಸಿಕೊಂಡಿದ್ದಾರೆ.

    ಇದಾದ ನಂತರ ತಿಂಗಳು ಕಳೆದರೂ ಶಿಕ್ಷಕಿಯ ಖಾತೆಗೆ ಯಾವುದೇ ಹಣ ಜಮಾ ಆಗಲಿಲ್ಲ. ಇದರಿಂದ ಅನುಮಾನಗೊಂಡು ವಾಪಸ್ ಅವರಿಗೆ ಕಾಲ್ ಮಾಡಿದರೆ, ಫೋನ್ ಕನೆಕ್ಟ್ ಆಗಿಲ್ಲ. ಇದರಿಂದ ತಾನು ಮೋಸ ಹೋಗಿದ್ದೇನೆ ಎಂದು ತಿಳಿದ ಶಿಕ್ಷಕಿ ಇದೀಗ ಹಾವೇರಿ ಸೈಬರ್ ಕ್ರೖೆಂ ಠಾಣೆಗೆ ದೂರು ನೀಡಿದ್ದಾರೆ.

    ಕಣ್ಣೀರು ಹಾಕುತ್ತಿರುವ ಶಿಕ್ಷಕಿ: ಶಿಕ್ಷಕಿಯು ಹೆಚ್ಚಿನ ಹಣ ಬರುವ ಆಸೆಯಿಂದ 37 ಲಕ್ಷ ರೂ.ಅನ್ನು ಬೇರೆ ಬೇರೆ ಕಡೆ ಸಾಲ ತೆಗೆದುಕೊಂಡು ಖದೀಮರಿಗೆ ನೀಡಿದ್ದಾಳೆ. ಆದರೆ, ಖದೀಮರ ಕೈಚಳಕಕ್ಕೆ ಸಿಲುಕಿ ಸಂಪೂರ್ಣ ಹಣ ನೀರು ಪಾಲಾದಂತಾಗಿದೆ. ಶಿಕ್ಷಕಿ ಈಗ ಕಣ್ಣೀರು ಹಾಕುತ್ತಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡ ಸೈಬರ್ ಕ್ರೖೆಂ ಪೊಲೀಸರು, ಆರೋಪಿಗಳನ್ನು ಪತ್ತೆ ಮಾಡಿ ಶಿಕ್ಷಕಿಗೆ ನ್ಯಾಯ ಒದಗಿಸಿಕೊಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts