More

    ನಾಯಕತ್ವ ರೂಪಿಸುವ ರೀಪ್ ಬೆನಿಫಿಟ್ ಸಂಸ್ಥೆಯ ಕಾರ್ಯಾಗಾರದಲ್ಲಿ 36 ಕ್ಕೂ ಹೆಚ್ಚು ಪ್ರತಿಭಾವಂತರು ಭಾಗಿ

    ಬೆಂಗಳೂರೂ: ನಗರದಲ್ಲಿದಂದು ರೀಪ್ ಬೆನಿಫಿಟ್ ಸಂಸ್ಥೆ ನಡೆಸಿದ ನಾಯಕತ್ವ ಕಾರ್ಯಾಗಾರದಲ್ಲಿ ದೇಶದ ವಿವಿಧ ಭಾಗಗಳಿಂದ 36ಕ್ಕೂ ಪ್ರತಿಭಾವಂತ ಯುವಜನರು ಭಾಗಿಯಾಗಿ ತಮ್ಮ ಕೆಲಸ ಮತ್ತು ಕಥೆಗಳನ್ನು ಹಂಚಿಕೊಂಡರು.

    ಬೆಂಗಳೂರಿನ ಏನ್ಷಿಯಂಟ್ ವಿಸ್ಡಮ್ ಸ್ಕೂಲ್‌ನಲ್ಲಿ ಒಟ್ಟುಗೂಡಿದ ಯುವ ನಾಯಕರು, ಹೆಸರಾಂತ ತಜ್ಞರಾದ ಸಚಿನ್ ಮಹಾಲೆ, ಸಂಸ್ಥಾಪಕ ಅಗಾಮಿ, ದೇವ್ ತಾಯ್ಡೆ, ಅಶ್ವಿತಾ ಶೆಟ್ಟಿ ಮತ್ತು ಇತರರಿಂದ ಮಾರ್ಗದರ್ಶನ ಪಡೆದರು.

    ರೀಪ್ ಬೆನಿಫಿಟ್ ಸಂಸ್ಥೆ ಕಳೆದ ಹತ್ತು ವರ್ಷಗಳಿಂದ ನಾಗರಿಕ ಕ್ರಿಯೆ, ಪರಿಸರದ ಪ್ರಭಾವ ಮತ್ತು ಹವಾಮಾನ ಬದಲಾವಣೆಯ ಮೇಲೆ 50,0000 ಯುವಕರೊಂದಿಗೆ ಕೆಲಸ ಮಾಡಿದೆ. ‘ಸಾಲ್ವ್ ನಿಂಜಾ’ ಎಂದು ಕರೆಯಲ್ಪಡುವ ಈ ಯುವಜನರು ತಮ್ಮ ನೆರೆಹೊರೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಈ ಯುವಜನರಿಗೆ ಇನ್ನಷ್ಟು ಪ್ರೋತ್ಸಾಹ ಮತ್ತು ಪ್ರೇರಣೆ ನೀಡಲು ಹಾಗೂ ತಮ್ಮ ಸಮುದಾಯಗಳಲ್ಲಿ ನಾಯಕರಾಗಲು, ರೀಪ್ ಬೆನಿಫಿಟ್ ‘ಸಾಲ್ವ್ ನಿಂಜಾ ಲೀಡರ್‌ಶಿಪ್ ಆಕ್ಸಿಲರೇಟರ್’ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದೆ.

    ಈ ಕಾರ್ಯಕ್ರಮವು ಯುವಕರಿಗೆ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು, ಅವರದ್ದೇ ಸಂಸ್ಥೆಯನ್ನು ಸ್ಥಾಪಿಸಲು, ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಸಮಾನ ಮನಸ್ಕ ಗೆಳೆಯರ ಸಮುದಾಯವನ್ನು ರೂಪಿಸಲು ಸಹಾಯ ಮಾಡುತ್ತಿದೆ. ಈ ಯುವಕರು ಸಂರಕ್ಷಣೆ, ಶುದ್ಧ ನೀರು, ತ್ಯಾಜ್ಯ ನಿರ್ವಹಣೆ, ಶಿಕ್ಷಣ ಮತ್ತು ಮಹಿಳೆಯರ ಆರೋಗ್ಯ ಮುಂತಾದ ಸಮಸ್ಯೆಗಳ ಮೇಲೆ ಕೆಲಸ ಮಾಡುತ್ತಿದ್ದಾರೆ.

    ನಾಯಕತ್ವ ರೂಪಿಸುವ ರೀಪ್ ಬೆನಿಫಿಟ್ ಸಂಸ್ಥೆಯ ಕಾರ್ಯಾಗಾರದಲ್ಲಿ 36 ಕ್ಕೂ ಹೆಚ್ಚು ಪ್ರತಿಭಾವಂತರು ಭಾಗಿ

    ಸಾಗರದಲ್ಲಿ ಕೃಷಿ ಪ್ರವಾಸೋದ್ಯಮದ ಸಂಸ್ಥೆ ಪ್ರಾರಂಭ ಮಾಡಬೇಕೆಂದಿರುವ ಸಂತೋಷ್ ಕುಮಾರ್, “ನನ್ನ ದೇಶಕ್ಕಾಗಿ ನನ್ನ ಒಂದು ಕನಸಿದೆ, ಮತ್ತು ಅದು ತುಂಬಾ ದೊಡ್ಡದಾಗಿದೆ, ಈ ಕಾರ್ಯಕ್ರಮವು ನನಗೆ ಈ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತಿದೆ” ಎಂದು ಹಂಚಿಕೊಂಡರು.

    ರೀಪ್ ಬೆನಿಫಿಟ್‌ನಿಂದ ಆಶಿಶ್ ಎಂಬುವರು ಮಾತನಾಡಿ “ಈ ಕಾರ್ಯಕ್ರಮವು ಬೇರೆ ಬೇರೆ ಹಿನ್ನೆಲೆಯ ಯುವಜನರಿಗೆ ಅವಕಾಶವನ್ನು ಒದಗಿಸುತ್ತಿದೆ. ಇಲ್ಲಿನ ಯುವಕರು 7 ವಿವಿಧ ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದಾರೆ. ನಮ್ಮಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಯುವಕರಿದ್ದಾರೆ. ವೈವಿಧ್ಯತೆ ಇದ್ದರೂ ನಮ್ಮ ಸಮಾಜವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಉತ್ಸಾಹವು ಅವರಲ್ಲಿ ಏಕತೆಯನ್ನು ಮೂಡಿಸುತ್ತಿದೆ” ಎಂದು ಹಂಚಿಕೊಂಡರು.

    ರೀಪ್ ಬೆನಿಫಿಟ್ ಬಗ್ಗೆ:
    ಭಾರತವು ಎದುರಿಸುತ್ತಿರುವ ಎರಡು ಅತ್ಯಂತ ತುರ್ತು ಸಮಸ್ಯೆಗಳಾದ ಸ್ಥಳೀಯ ಮಟ್ಟದ ಆಡಳಿತ ಮತ್ತು ಹವಾಮಾನ ಬದಲಾವಣೆ ಮೇಲೆ ರೀಪ್ ಬೆನಿಫಿಟ್ ಸಂಸ್ಥೆ ಕೆಲಸ ಮಾಡುತ್ತಿದೆ. ಯುವಜನರಿಗೆ ಈ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗದರ್ಶನ ನೀಡುತ್ತಿದೆ. ಯುವಜನರು ತಮ್ಮ ಸೃಜನಶೀಲತೆ ಮತ್ತು ನಾಯಕತ್ವದ ಮೂಲಕ, ಈ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ. ಕಳೆದ 9 ವರ್ಷಗಳಲ್ಲಿ, 50 ಸಾವಿರಕ್ಕೂ ಹೆಚ್ಚು ಯುವಜನರಿಗೆ ಸಂಸ್ಥೆ ಮಾರ್ಗದರ್ಶನ ನೀಡಿದೆ. ಈ ಯುವಜನರು 94 ಸಾವಿರ ನಾಗರಿಕ ಸಮಸ್ಯೆಗಳ ಮೇಲೆ ಕೆಲಸ ಮಾಡಿದ್ದಾರೆ, 3143 ಅಭಿಯಾನಗಳನ್ನು ಪ್ರಾರಂಭಿಸಿದ್ದಾರೆ ಮತ್ತು ದೇಶಾದ್ಯಂತ ಸ್ಥಳೀಯ ನಾಗರಿಕ ಸಮಸ್ಯೆಗಳನ್ನು ಪರಿಹರಿಸಲು 552 ನಾಗರಿಕ ಆವಿಷ್ಕಾರಗಳನ್ನು ನಿರ್ಮಿಸಿದ್ದಾರೆ. ಯುವಕರು 54.3 ಮಿಲಿಯನ್ ಲೀಟರ್ ನೀರು ಮತ್ತು 1.7 ಮಿಲಿಯನ್ ಯೂನಿಟ್ ವಿದ್ಯುತ್ ಉಳಿಸಿದ್ದಾರೆ ಹಾಗೆಯೇ 187 ಟನ್ ತ್ಯಾಜ್ಯವನ್ನು ಮರುಬಳಕೆ ಮಾಡಿ ಪರಿಸರ ಸಂರಕ್ಷಿಸಲು ಕೆಲಸ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts