More

    ಏಕಸ್​ನಿಂದ 3,540 ಕೋಟಿ ರೂ. ಹೂಡಿಕೆ

    ಹುಬ್ಬಳ್ಳಿ: ಏಕಸ್ ಪ್ರೖೆವೇಟ್ ಕಂಪನಿಯು ನಗರದಲ್ಲಿ ಇಲೆಕ್ಟ್ರಾನಿಕ್ ಮತ್ತು ಗ್ರಾಹಕ ವಸ್ತುಗಳ ಉತ್ಪಾದನೆ ಕ್ಲಸ್ಟರ್ ಆರಂಭಿಸಲು ಯೋಜಿಸಿದ್ದು, ಅದಕ್ಕಾಗಿ 3540 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ.

    ಕಂಪನಿ ಚೇರ್ಮನ್ ಅರವಿಂದ ಮೆಳ್ಳಿಗೇರಿ, ಎಂಡಿ ಹಾಗೂ ಸಿಇಓ ರಾಜೀವ ಗೌಲ್ ಅವರು ದೆಹಲಿಯಲ್ಲಿ ಈ ಬಗ್ಗೆ ಸಚಿವ ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾಗಿ ಕಂಪನಿ ಸ್ಥಾಪನೆಯ ಸವಿವರಗಳನ್ನು ರ್ಚಚಿಸಿದರು.

    ಸಚಿವ ಜೋಶಿ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಲ್ಲದೆ, ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹಾಗೂ ಇನ್ವೆಸ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಬಾಗ್ಲಾ ಅವರನ್ನು ಕೂಡಾ ಭೇಟಿಯಾಗಿ ಹೂಡಿಕೆಗೆ ಸಂಬಂಧಿಸಿದಂತೆ ಅಗತ್ಯ ನೆರವಿನ ಭರವಸೆ ಪಡೆದುಕೊಂಡರು.

    ಈ ಹೂಡಿಕೆಯು ಭಾರತದ ಮೊದಲ ವಲಯ ನಿರ್ದಿಷ್ಟ ಹೂಡಿಕೆಯಾಗಲಿದೆ. ಅಲ್ಲದೇ ಪ್ರಧಾನಿ ಮೋದಿ ಅವರ ಕನಸಿನ ಕೂಸಾದ ಆತ್ಮನಿರ್ಭರ ಭಾರತ ಯೋಜನೆಗೆ ಅನುಗುಣವಾಗಿರಲಿದೆ. ಈ ಹೂಡಿಕೆಯು 20 ಸಾವಿರಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸಚಿವ ಜೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.

    ಇತ್ತೀಚೆಗಷ್ಟೆ ಈ ಹೂಡಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ ಸಮ್ಮತಿ ಸೂಚಿಸಿತ್ತು ಎಂದು ಸ್ಮರಿಸಿದ ಜೋಶಿ, ಸಿಎಂ ಯಡಿಯೂರಪ್ಪ, ಸಚಿವ ಜಗದೀಶ ಶೆಟ್ಟರ ಹಾಗೂ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts