More

    ನಿಜಾಮುದ್ದಿನ್ ರೈಲಿನಲ್ಲಿ ಬಂದಿಳಿದ 35 ಮಂದಿ ; ಹೊರ ರಾಜ್ಯಗಳಿಂದ ತುಮಕೂರು ನಗರಕ್ಕೆ ಬಂದ 12 ಜನರ ಕ್ವಾರಂಟೈನ್

    ತುಮಕೂರು: ನಗರಕ್ಕೆ ಭಾನುವಾರ ಬೆಳಗಿನ ಜಾವ ಆಗಮಿಸಿದ ನಿಜಾಮುದ್ದಿನ್ ಎಕ್ಸ್‌ಪ್ರೆಸ್ ರೈಲಿನಲ್ಲಿ 35 ಮಂದಿ ಬಂದಿಳಿದಿದ್ದಾರೆ. ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿರುವ ಈ ಪ್ರಯಾಣಿಕರನ್ನು ಸಂಬಂಧಪಟ್ಟ ತಾಲೂಕಿನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲು ಜಿಲ್ಲಾಡಳಿತ ಕ್ರಮವಹಿಸಿದೆ.

    ನಗರದ ರೈಲ್ವೆ ನಿಲ್ದಾಣಕ್ಕೆ ಭಾನುವಾರ 4.30ಕ್ಕೆ ಆಗಮಿಸಿದ ನಿಜಾಮುದ್ದಿನ್ ರೈಲಿನಲ್ಲಿ ಒಟ್ಟು 35 ಮಂದಿ ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದಿಳಿದಿದ್ದಾರೆ. ಇವರಲ್ಲಿ ತುಮಕೂರು-12, ಚಿಕ್ಕನಾಯಕನಹಳ್ಳಿ -7 , ಗುಬ್ಬಿ- 4, ತುರುವೇಕೆರೆ -4 ಹಾಗೂ ಶಿರಾಕ್ಕೆ ಹೋಗಲು 4 ಮಂದಿ ಬಂದಿಳಿದಿದ್ದರು. ಇವರ ಜತೆಯಲ್ಲಿ ಮಂಡ್ಯಕ್ಕೆ ತೆರಳಲು 4 ಮಂದಿ ತುಮಕೂರಿನಲ್ಲೇ ಬಂದು ಇಳಿದಿದ್ದಾರೆ.

    ಹೊರ ರಾಜ್ಯಗಳಿಂದ ನಗರಕ್ಕೆ ಬಂದ 12 ಜನರನ್ನು ಅವರ ಸಂಪೂರ್ಣ ಮಾಹಿತಿ ಪಡೆದು ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಉಳಿದ ಕಡೆ ತೆರಳುವವರಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿದ್ದಲ್ಲದೆ ಸಂಬಂಧಪಟ್ಟ ತಾಲೂಕು ತಹಸೀಲ್ದಾರ್‌ಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಹಸೀಲ್ದಾರ್ ಮೋಹನ್‌ಕುಮಾರ್ ತಿಳಿಸಿದರು. ಈಗಾಗಲೇ ಜಿಲ್ಲಾಧಿಕಾರಿ ಹೊರ ರಾಜ್ಯದಿಂದ ಬರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಗ್ಯ ತಪಾಸಣೆ ನಡೆಸುವಂತೆ ಆದೇಶಿಸಿದ್ದು, ಅದರಂತೆ ಭಾನುವಾರ ಬೆಳಗ್ಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

    ಇದೇ ರೈಲಿನಲ್ಲಿ ಮಂಡ್ಯಕ್ಕೆ ತೆರಳಲು ಬಂದಿಳಿದಿದ್ದ 4 ಮಂದಿಯನ್ನೂ ಸಹ ಪ್ರತ್ಯೇಕವಾಗಿ ಮಂಡ್ಯಕ್ಕೆ ತೆರಳುವ ವ್ಯವಸ್ಥೆ ಮಾಡಿ, ಅಲ್ಲಿನ ತಹಸೀಲ್ದಾರ್‌ಗೂ ಮಾಹಿತಿ ನೀಡಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ ಎಂದರು. ಹೊರ ರಾಜ್ಯದಿಂದ ಬಂದವರನ್ನು ಪೊಲೀಸರ ಸಹಕಾರದೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್ ಕೇಂದ್ರಗಳತ್ತ ಕರೆದೊಯ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts