More

    337 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ನ್ಯಾಕ್‌ ಮಾನ್ಯತೆ

    ಬೆಂಗಳೂರು: ರಾಜ್ಯದಲ್ಲಿರುವ ಒಟ್ಟು 400 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 337 ಕಾಲೇಜುಗಳು ನ್ಯಾಕ್‌ ಮಾನ್ಯತೆ ಪಡೆದಿದ್ದು, ಸದ್ಯದಲ್ಲೇ ಇನ್ನೂ 15 ಕಾಲೇಜುಗಳಿಗೆ ಈ ಮನ್ನಣೆ ಸಿಗಲಿದೆ. ಉಳಿದ 47 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಕೂಡ ಈ ವವರ್ಷದಲ್ಲೇ ಈ ಸ್ಥಾನಮಾನ ಲಭ್ಯವಾಗಲಿದೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್‌ ತಿಳಿಸಿದ್ದಾರೆ.

    ಈ ಬಗ್ಗೆ ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ವರ್ಷದಲ್ಲಿ 307 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ನ್ಯಾಕ್‌ ಮಾನ್ಯತೆ ಸಿಕ್ಕಿರುವುದು ದಾಖಲೆಯಾಗಿದೆ. ದೇಶದ ಬೇರೆ ಯಾವ ರಾಜ್ಯಗಳಲ್ಲೂ ಸರ್ಕಾರಿ ಡಿಗ್ರಿ ಕಾಲೇಜುಗಳು ಇಂತಹ ಸಾಧನೆಯನ್ನು ಮಾಡಿಲ್ಲ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದ ಆಮೂಲಾಗ್ರ ಸುಧಾರಣೆಗೆ ಕೈಗೊಂಡ ಹತ್ತಾರು ಉಪಕ್ರಮಗಳಿಂದ ಇದು ಸಾಧ್ಯವಾಗಿದೆ” ಎಂದಿದ್ದಾರೆ.

    ಇದನ್ನೂ ಓದಿ: ಮಾತೃ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಿ; ವಿವಿಗಳಿಗೆ UGC ಸೂಚನೆ

    ದೇಶದಲ್ಲೇ ದಾಖಲೆ

    ಸದ್ಯಕ್ಕೆ ರಾಜ್ಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ ಶೇಕಡ 85ರಷ್ಟು ಕಾಲೇಜುಗಳು ನ್ಯಾಕ್‌ ಮಾನ್ಯತೆ ಹೊಂದಿವೆ. ಇದು ಕೂಡ ಅಖಿಲ ಭಾರತ ಮಟ್ಟದ ಇನ್ನೊಂದು ದಾಖಲೆಯಾಗಿದೆ. ಇವುಗಳಲ್ಲಿ 23 ಕಾಲೇಜುಗಳು ಇದೇ ಮೊದಲ ಬಾರಿಗೆ ‘ಎ’ ಮತ್ತು ಅದಕ್ಕಿಂತ ಹೆಚ್ಚಿನ ಸ್ಥಾನಮಾನವನ್ನು ಕಂಡಿವೆ. ಹಾಗೆಯೇ 255 ಕಾಲೇಜುಗಳು ಬಿ, ಬಿ+ ಮತ್ತು ಬಿ++ ಶ್ರೇಣಿಯನ್ನು ಪಡೆದುಕೊಂಡಿವೆ ಎಂದು ಅವರು ತಿಳಿಸಿದ್ದಾರೆ.

    ಈ ಪೈಕಿ ಬೆಂಗಳೂರು ವಲಯದಲ್ಲಿ 56, ಧಾರವಾಡ ವಲಯದಲ್ಲಿ 67, ಕಲಬುರಗಿ ವಲಯದಲ್ಲಿ 42, ಮಂಗಳೂರು ವಲಯದಲ್ಲಿ 24, ಮೈಸೂರು ವಲಯದಲ್ಲಿ 58 ಮತ್ತು ಶಿವಮೊಗ್ಗ ವಲಯದಲ್ಲಿ 42 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ ಎಂದು ಪ್ರದೀಪ್‌ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts