More

    ಕರೊನಾ ಲಸಿಕೆಯ ಮೇಲೂ ಕಳ್ಳರ ಕಣ್ಣು ? ಆಸ್ಪತ್ರೆಯಿಂದ 32 ಕೋವಾಕ್ಸಿನ್ ವಯಲ್​ಗಳು ಕಾಣೆ !

    ಜೈಪುರ : 320 ಡೋಸ್​ಗಳನ್ನು ಹೊಂದಿದ್ದ ಒಂದು ಬ್ಯಾಚ್ ಪೂರ್ತಿ ಕೋವಾಕ್ಸಿನ್ ಕರೊನಾ ಲಸಿಕೆಗಳು ಆಸ್ಪತ್ರೆಯಿಂದ ಕಾಣೆಯಾಗಿರುವ ಪ್ರಸಂಗ ರಾಜಸ್ಥಾನದಿಂದ ವರದಿಯಾಗಿದೆ. ಆಸ್ಪತ್ರೆಯ ಕೋಲ್ಡ್​ ಸ್ಟೋರೇಜ್​ನಿಂದ ಲಸಿಕಾ ಕೇಂದ್ರಕ್ಕೆ ಸಾಗಿಸುವ ಸಮಯದಲ್ಲಿ ಈ ಕಳವು ನಡೆದಿದೆ ಎಂದು ಶಂಕಿಸಲಾಗಿದೆ.

    ಜೈಪುರದ ಶಾಸ್ತ್ರಿನಗರದಲ್ಲಿರುವ ಕಾನ್ವಟಿಯಾ ಸರ್ಕಾರಿ ಆಸ್ಪತ್ರೆಯಲ್ಲಿ ಈ ಕಳ್ಳತನದ ಪ್ರಸಂಗ ವರದಿಯಾಗಿದೆ. ಏಪ್ರಿಲ್ 12 ರ ಸಂಜೆ ಲಸಿಕೆಯ ದಾಸ್ತಾನು ಪರಿಶೀಲಿಸಿದಾಗ, ಕೋವಾಕ್ಸಿನ್​​ನ 32 ವಯಲ್​ಗಳು ಕಾಣೆಯಾಗಿರುವುದು ಕಂಡುಬಂತು. ಒಂದು ವಯಲ್​ನಲ್ಲಿ 10 ಡೋಸ್​​ ಲಸಿಕೆ ಇರುತ್ತದೆ. ಹೀಗಾಗಿ 320 ಡೋಸ್​ಗಳ ಲಸಿಕೆ ನಷ್ಟವಾಗಿದೆ ಎಂದು ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ವಸಂತಕುಮಾರ್ ತಿಳಿಸಿದ್ದಾರೆ.

    ಇದನ್ನೂ ಓದಿ: ಬಿಜೆಪಿ ಲಸಿಕೆ ಹಾಕಿಸಿಕೊಳ್ಳಲ್ಲ ಎಂದ ಮಾಜಿ ಸಿಎಂಗೆ ಕರೊನಾ ಪಾಸಿಟಿವ್‌- ಟ್ವೀಟ್‌ ಮೂಲಕ ಹೀಗೆ ಹೇಳಿದ್ರು…

    ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಸೂಕ್ತ ತನಿಖೆ ನಡೆಸಲು ಕೋರಲಾಗಿದೆ ಎಂದು ಜೈಪುರ ಮುಖ್ಯ ಆರೋಗ್ಯಾಧಿಕಾರಿ ನರೋತ್ತಮ ಶರ್ಮ ಹೇಳಿದ್ದಾರೆ.

    ರಾಜಸ್ಥಾನದಲ್ಲಿ ಈಗಾಗಲೇ ಹತ್ತು ಮಿಲಿಯನ್ ಡೋಸ್​​ಗಳಿಗಿಂತ ಹೆಚ್ಚು ಲಸಿಕೆ ನೀಡಲಾಗಿದ್ದು, ರಾಜ್ಯವು ಲಸಿಕಾ ಅಭಿಯಾನದಲ್ಲಿ ದೇಶದಲ್ಲೇ ಎರಡನೇ ಸ್ಥಾನ ಹೊಂದಿದೆ. ಕಳೆದ ವಾರ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ರಾಜ್ಯದಲ್ಲಿ ಲಸಿಕೆಯ ಅಭಾವ ಉಂಟಾಗುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ಅಹವಾಲು ಸಲ್ಲಿಸಿದ್ದರು. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಲಸಿಕೆಯ ಸಮರ್ಪಕ ಉಪಯೋಗ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದರು. (ಏಜೆನ್ಸೀಸ್)

    ಸಿಬಿಎಸ್​ಇ : 12 ನೇ ತರಗತಿ ಪರೀಕ್ಷೆ ಮುಂದಕ್ಕೆ, 10ನೇ ತರಗತಿ ಪರೀಕ್ಷೆ ರದ್ದು

    “ಸಂಸ್ಕೃತವನ್ನು ಅಧಿಕೃತ ರಾಷ್ಟ್ರೀಯ ಭಾಷೆ ಮಾಡಲು ಅಂಬೇಡ್ಕರ್ ಉದ್ದೇಶಿಸಿದ್ದರು”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts