More

    ಮದ್ಯವಾಗಿ 10 ಜನರ ಬಲಿ ಪಡೆದ ಸ್ಯಾನಿಟೈಸರ್​; ವಿಷಪೂರಿತ ಮದ್ಯಕ್ಕೆ ಮತ್ತೊಂದೆಡೆ 21 ಜನ ಜೀವ ತೆತ್ತರು..!

    ಆಂಧ್ರಪ್ರದೇಶ/ ಪಂಜಾಬ್​: ಮದ್ಯ ಸಿಗದೆ ಪರಿತಪಿಸಿದ ಜನರು, ಅಮಲಿಗಾಗಿ ನಾನಾ ದಾರಿ ಕಂಡುಕೊಳ್ಳುತ್ತಿದ್ದಾರೆ. ಪರಿಣಾಮವಾಗಿ 31 ಜನರು ಮೃತಪಟ್ಟಿದ್ದಾರೆ.

    ಆಂಧ್ರದ ಪ್ರಕಾಶಂ ಜಿಲ್ಲೆಯ ಕುರಿಚೇಡು ಎಂಬ ಹಳ್ಳಿಯಲ್ಲಿ ಸ್ಯಾನಿಟೈಸರ್​ ಸೇವಿಸಿ ಈವರೆಗೆ 10 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಂಭಿರ ಸ್ಥಿತಿಯಲ್ಲಿದ್ದಾರೆ. ಇನ್ನೊಂದೆಡೆ, ಪಂಜಾಬ್​ನಲ್ಲಿ ಕಳೆದ 48 ಗಂಟೆಗಳಲ್ಲಿ ಕಳ್ಳಭಟ್ಟಿ ಕುಡಿದು ಕನಿಷ್ಠ 21 ಜನರು ಪ್ರಾಣ ಕಳೆದುಕೊಂಡಿದ್ದಾರೆ.

    ಕುರಿಚೇಡು ಹಳ್ಳಿಯಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗಿರುವುದರಿಂದ ಲಾಕ್​ಡೌನ್​ ಮಾಡಲಾಗಿದೆ. ಇಲ್ಲಿ ಮದ್ಯದ ಅಂಗಡಿಗಳು ಬಂದ್​ ಆಗಿವೆ. ಹೀಗಾಗಿ ಜನರು ಕಳೆದ 8-10 ದಿನಗಳಿಂದ ಆಲ್ಕೋಹಾಲ್​ ಆಧಾರಿತವಾಗಿರುವ ಸ್ಯಾನಿಟೈಸರ್​ ಸೇವಿಸುತ್ತಿದ್ದರು. ದೇವಸ್ಥಾನದ ಹಿಂಬದಿಯಲ್ಲಿ ಸೇರಿಕೊಂಡು ನೀರು ಅಥವಾ ಸಾಫ್ಟ್​ ಡ್ರಿಂಕ್​ನೊಂದಿಗೆ ಸ್ಯಾನಿಟೈಸರ್​ ಸೇರಿಸಿಕೊಂಡು ಕುಡಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ; ಕರೊನಾ ಚಿಕಿತ್ಸೆಗೆ ಬೆಡ್​ಗಳಿವೆ ; ರೋಗಿಗಳೇ ಇಲ್ಲ; ಒಂದೇ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಏನಿದು ಬದಲಾವಣೆ?

    ಇವರಲ್ಲಿ ಬಹುತೇಕರು, ಕೂಲಿ ಕೆಲಸದವರು ಸೇರಿದ್ದಾರೆ. ಇಲ್ಲಿನ 20ಕ್ಕೂ ಹೆಚ್ಚು ಮನೆಗಳಲ್ಲಿ ಸ್ಯಾನಿಟೈಸರ್​ ಬಾಟಲುಗಳು ಸಿಕ್ಕಿವೆ. ಬುಧವಾರ ರಾತ್ರಿ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡು ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಈತ ಮೃತಪಟ್ಟರೆ, ಗುರುವಾರ ಮತ್ತಿಬ್ಬರು ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಬೆಳಗ್ಗೆ ಏಳು ಜನರು ಮೃತಪಟ್ಟಿದ್ದಾರೆ. ಈವರೆಗೆ ಮೃತರ ಸಂಖ್ಯೆ 10ಕ್ಕೆ ಏರಿದೆ. ಸಿಎಂ ಜಗನ್​ಮೋಹನ್​ ರೆಡ್ಡಿ ಪ್ರಕರಣದ ವಿಶೇಷ ತನಿಖೆಗೆ ಆದೇಶಿಸಿದ್ದಾರೆ.

    ಇನ್ನು, ಪಂಜಾಬ್​ನ ಮೂರು ಜಿಲ್ಲೆಗೆಳಲ್ಲಿ ವಿಷಪೂರಿತ ಸಾರಾಯಿ ಕುಡಿದು ಕಳೆದ 48 ಗಂಟೆಗಳಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ.
    ಅಮೃತಸರ್​, ಬಟಾಲಾ, ತರನ್​ ತರನ್​ ಜಿಲ್ಲೆಯಲ್ಲಿ ಈ ಸಾವುಗಳು ಸಂಭವಿಸಿವೆ. ಎರಡು ತಿಂಗಳ ಹಿಂದಷ್ಟೇ ಪಂಜಾಬ್​ ಸಿಎಂ ಅಮರಿಂದರ್​ ಸಿಂಗ್​ ಕಳ್ಳಭಟ್ಟಿ ತಯಾರಿಕೆಯನ್ನು ನಿಗ್ರಹಿಸಲು ಆದೇಶಿಸಿದ್ದರು.

    ಇದನ್ನೂ ಓದಿ; ಕರೊನಾ ಪಾಸಿಟಿವ್​ ಆದಾಗ ಆಸ್ಪತ್ರೆಗೆ ದಾಖಲಾಗಬೇಕೇ? ಬೇಡವೇ? ನೆರವಾಗಲಿದೆ ತಂತ್ರಜ್ಞಾನ 

    ಅಮೃತಸರದ ಗ್ರಾಮೀಣ ಪ್ರದೇಶದಲ್ಲಿ 5 ಜನರು ಮೃತಪಟ್ಟಿದ್ದಾರೆ. ಇನ್ನು, ಬಟಾಲಾ ನಗರದಲ್ಲಿ ಇಬ್ಬರು ಸೇರಿ ಜಿಲ್ಲೆಯಲ್ಲಿ ಏಳು ಜನರು ಬಲಿಯಾಗಿದ್ದಾರೆ. ತರನ್​ತರಣ್​ ಪ್ರದೇಶದಲ್ಲಿ ಶುಕ್ರವಾರ ಮತ್ತೆ ನಾಲ್ಕು ಜನರು ವಿಷಪೂರಿತ ಸಾರಾಯಿ ಸೇವಿಸಿ ಅಸುನೀಗಿದ್ದಾರೆ.

    ಮರಣೋತ್ತರ ಪರೀಕ್ಷೆ ನಡೆಸದೇ ಹಲವರ ಅಂತ್ಯಕ್ರಿಯೆ ನಡೆಸಲಾಗಿದೆ. ಹೀಗಾಗಿ ಸಾವಿನ ನಿಖರ ಕಾರಣ ತಿಳಿದುಕೊಳ್ಳಲು ನಾಲ್ಕು ಶವಗಳ ಪೋಸ್ಟ್​ಮಾರ್ಟಂ ಮಾಡಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.

    ಕರೊನಾ ಪಾಸಿಟಿವ್​ ಆದಾಗ ಆಸ್ಪತ್ರೆಗೆ ದಾಖಲಾಗಬೇಕೇ? ಬೇಡವೇ? ನೆರವಾಗಲಿದೆ ತಂತ್ರಜ್ಞಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts