More

    ತೆಲಂಗಾಣದಲ್ಲಿ ಭೀಕರ ಮಳೆಗೆ 30 ಸಾವು: ಹೈದರಾಬಾದಿನಲ್ಲೇ ಅರ್ಧಕ್ಕೂ ಅಧಿಕ ಮಂದಿ ಮೃತ

    ಹೈದರಾಬಾದ್​: ತೆಲಂಗಾಣದಾದ್ಯಂತ ಸುರಿದ ಭೀಕರ ಮಳೆಗೆ ಸಂಭವಿಸಿದ ಅನಾಹುತಗಳಲ್ಲಿ 30 ಮಂದಿ ಮೃತಪಟ್ಟಿರುವುದಾಗಿ ಬುಧವಾರ ರಾತ್ರಿ ವರದಿಯಾಗಿದ್ದು, ಅರ್ಧಕ್ಕೂ ಅಧಿಕ ಮಂದಿ ರಾಜಧಾನಿ ಹೈದರಾಬಾದಿನಲ್ಲೇ ಅಸುನೀಗಿದ್ದಾರೆ.

    ಮಳೆಯ ಹೊಡೆತಕ್ಕೆ ರಸ್ತೆಗಳೆಲ್ಲ ನದಿಯಂತಾಗಿದ್ದು, ಕಾರುಗಳು ಸಂಪೂರ್ಣ ಮುಳುಗಡೆಯಾಗಿ ನೀರಿನಲ್ಲಿ ಕೊಚ್ಚಿಹೋದ ಮತ್ತು ಕಟ್ಟಡಗಳು ಸಂಪೂರ್ಣ ಜಲಾವೃತಗೊಂಡ ದೃಶ್ಯ ಭೀಕರವಾಗಿತ್ತು.

    ಹೈದರಾಬಾದ್​ವೊಂದರಲ್ಲೇ ಎರಡು ತಿಂಗಳ ಮಗು ಸೇರಿದಂತೆ 19 ಮಂದಿ ಮೃತಪಟ್ಟಿದ್ದಾರೆ. ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ಹಾನಿ ಸಂಭವಿಸಿದೆ. ರಾತ್ರಿಯಿಡಿ ಸುರಿದ ಮಳೆಗೆ ಕಾಂಪೌಂಡ್​ ಗೋಡೆ ಕುಸಿದು 10 ಮನೆಗಳ ಮೇಲೆ ಬಿದ್ದ ಪರಿಣಾಮ 9 ಮಂದಿ ಸಾವಿಗೀಡಾಗಿದ್ದಾರೆ.

    ಇದನ್ನೂ ಓದಿ: ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್​ಐಆರ್​ ದಾಖಲು..!

    ರಸ್ತೆಯಲ್ಲಿ ಉಂಟಾದ ಪ್ರವಾಹದ ನೀರಿನಲ್ಲಿ ವ್ಯಕ್ತಿಯೊಬ್ಬ ಕೊಚ್ಚಿ ಹೋದ ಭಯಾನಕ ದೃಶ್ಯ ಹೈದರಾಬಾದ್​ನ ಬರ್ಕಾಸ್​ ಏರಿಯಾದಲ್ಲಿ ಕಂಡುಬಂತು. ರಸ್ತೆ ಪಕ್ಕದಲ್ಲೇ ಇಬ್ಬರು ವ್ಯಕ್ತಿಗಳು ಆಶ್ರಯ ಪಡೆದುಕೊಂಡಿದ್ದರೂ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಉಳಿಸಲಾಗಸದೇ ಅಸಹಾಯಕತೆಯಿಂದ ನೋಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

    ತೆಲಂಗಾಣದಲ್ಲಿ ಉಂಟಾಗಿರುವ ಪ್ರವಾಹದ ಬೆನ್ನಲ್ಲೇ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಮತ್ತು ಆಂಧ್ರ ಸಿಎಂ ಜಗನ್​ ಮೋಹನ್​ ರೆಡ್ಡಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಮಾಹಿತಿ ಪಡೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದಿಂದ ಸಾಧ್ಯವಾದಷ್ಟು ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

    ಎತ್ತರದ ಕಟ್ಟಡದಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಯುವಕನಿಗೆ ಎದುರಾಯ್ತು ಸಂಕಷ್ಟ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts