ಎತ್ತರದ ಕಟ್ಟಡದಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಯುವಕನಿಗೆ ಎದುರಾಯ್ತು ಸಂಕಷ್ಟ..!

ಮುಂಬೈ: ಎತ್ತರದ ಕಟ್ಟಡವೊಂದರ ಇಕ್ಕಟ್ಟಾದ ಸ್ಥಳದಲ್ಲಿ ಯುವಕನೊಬ್ಬ ಅಪಾಯಕಾರಿ ಸಾಹಸ ಪ್ರದರ್ಶನ ಮಾಡಿದ್ದ ವಿಡಿಯೋ ಇತ್ತೀಚೆಗಷ್ಟೇ ವೈರಲ್​ ಆಗಿತ್ತು. ಇದೀಗ ವಿಡಿಯೋ ಮುಂಬೈ ಪೊಲೀಸರ ಗಮನಕ್ಕೆ ಬಂದಿದ್ದು, ಸಾಹಸ ಪ್ರದರ್ಶಿಸಿದ ಯುವಕ ಮತ್ತು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿದ ಇಬ್ಬರು ಸ್ನೇಹಿತರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಯುವಕನೊಬ್ಬ ಎನರ್ಜಿ ಡ್ರಿಂಕ್​ ಕುಡಿಯುತ್ತಾ 22 ಅಂತಸ್ತಿನ ಕಟ್ಟಡದಲ್ಲಿನ ಇಕ್ಕಟ್ಟಿನ ಜಾಗದಲ್ಲಿ ಕೈಯನ್ನು ನೆಲಕ್ಕೂರಿ ತನ್ನೆರಡು ಕಾಲ್ಗಳನ್ನು ಆಕಾಶಕ್ಕೆ ಚಾಚಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ್ದ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ … Continue reading ಎತ್ತರದ ಕಟ್ಟಡದಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ ಯುವಕನಿಗೆ ಎದುರಾಯ್ತು ಸಂಕಷ್ಟ..!