More

    ರಾಷ್ಟ್ರಧ್ವಜ ಅವಮಾನಿಸಿದ ಮುಫ್ತಿ ಬಗ್ಗೆ ಬೇಸರ; ಪಿಡಿಪಿಯನ್ನು ತೊರೆದ ಮೂವರು ನಾಯಕರು

    ಶ್ರೀನಗರ: ಬಂಧನದಿಂದ ಬಿಡುಗಡೆಯಾಗುತ್ತಿದ್ದಂತೆ ರಾಷ್ಟ್ರ ಧ್ವಜದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪೀಪಲ್ಸ್​ ಡೆಮಾಕ್ರಟಿಕ್​ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ವಿರುದ್ಧ ಅವರದ್ದೇ ಪಾರ್ಟಿಯ ಮುಖಂಡರು ತಿರುಗಿಬಿದ್ದಿದ್ದಾರೆ. ಇಂದು ಪಿಡಿಪಿಯ ಮೂವರು ಹಿರಿಯ ನಾಯಕರು ರಾಜೀನಾಮೆ ನೀಡಿದ್ದು, ಪಕ್ಷವನ್ನು ತೊರೆದಿದ್ದಾರೆ.

    ಪಕ್ಷದ ಮುಖ್ಯಸ್ಥೆ ಮೆಹಬೂಬಾ ಅವರು ತ್ರಿವರ್ಣ ಧ್ವಜವನ್ನು ಟೀಕಿಸಿದ್ದೇ ನಾವು ರಾಜೀನಾಮೆ ನೀಡಲು ಕಾರಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವೇದ ಮಹಾಜನ್, ಟಿ.ಎಸ್. ಬಜ್ವಾ ಮತ್ತು ಹುಸೇನ್ ಅಲಿ ವಾಫಾ ಪಿಡಿಪಿಯಿಂದ ದೂರ ಸರಿದ ನಾಯಕರಾಗಿದ್ದು, ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನನ್ನ ಪಾಲಿಗೆ ಧ್ವಜವೆಂದರೆ ಜಮ್ಮು-ಕಾಶ್ಮೀರದ್ದು. ಇಲ್ಲಿನ ಧ್ವಜಕ್ಕೆ ಮಾನ್ಯತೆ ಸಿಕ್ಕಿ, ಮತ್ತೆ ಹಾರುವಂತಾದರೆ ಮಾತ್ರ ನಾನು ರಾಷ್ಟ್ರಧ್ವಜವನ್ನು ಹಾರಿಸುತ್ತೇನೆ. ಅಲ್ಲಿಯವರೆಗೆ ನಾನು ರಾಷ್ಟ್ರಧ್ವಜ ಹಿಡಿಯುವುದಿಲ್ಲ ಎಂದು ಮೆಹಬೂಬಾ ಹೇಳಿದ್ದಲ್ಲದೆ, ತಮ್ಮ ಪತ್ರಿಕಾ ಗೋಷ್ಠಿಯ ಟೇಬಲ್​ ಮೇಲೆ ಜಮ್ಮುಕಾಶ್ಮೀರದ ಧ್ವಜ ಇಟ್ಟು ಕುಳಿತಿದ್ದರು. ಮೆಹಬೂಬಾ ಹೇಳಿಕೆ ವಿರುದ್ಧ ಈಗಾಗಲೇ ಜಮ್ಮುಕಾಶ್ಮೀರದ ಅನೇಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗೇ ಪಿಡಿಪಿಯ ಮಿತ್ರಪಕ್ಷವೆನಿಸಿರುವ ನ್ಯಾಶನಲ್​ ಕಾನ್ಫರೆನ್ಸ್​ ಕೂಡ ಅಂತರ ಕಾಯ್ದುಕೊಂಡಿದೆ.

    ಇದೀಗ ಹೊರನಡೆದ ಮೂವರು ನಾಯಕರು, ಮುಫ್ತಿ ಅವರ ಮಾತಿನಿಂದ ಮುಜುಗರ ಆಗಿದೆ. ಇಲ್ಲಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪಕ್ಷವನ್ನೇ ತೊರೆಯುವ ಕಠಿಣ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಜಮ್ಮುಕಾಶ್ಮೀರದಲ್ಲಿ ಕಿಡಿ ಹೊತ್ತಿಸಿದ ಮೆಹಬೂಬಾ ಮುಫ್ತಿ; ಪ್ರತಿಭಟನಾ ನಿರತ ಮಹಿಳೆಯ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts