More

    ಚಿನ್ನ, ಗಿಫ್ಟ್ ಆಸೆಗೆ 3.59 ಲಕ್ಷ ರೂ. ಕಳೆದುಕೊಂಡ ಮಹಿಳೆ

    ಶಿವಮೊಗ್ಗ: ಬಂಗಾರ ಮತ್ತು ಉಡುಗೊರೆ ಕಳುಹಿಸುವ ನೆಪದಲ್ಲಿ ಮಹಿಳೆಗೆ 3.59 ಲಕ್ಷ ರೂ. ವಂಚನೆ ಮಾಡಲಾಗಿದೆ.

    ವಿದೇಶದ ನಂಬರ್‌ನಿಂದ ವಾಟ್ಸ್‌ಆ್ಯಪ್ ಮೂಲಕ ಮಹಿಳೆಗೆ ವ್ಯಕ್ತಿಯೊಬ್ಬ ಸಂದೇಶ ಕಳುಹಿಸಿದ್ದ. ಆನಂತರ ಇಬ್ಬರ ನಡುವೆ ಚಾಟಿಂಗ್ ಮುಂದುವರಿದಿತ್ತು. ಬಳಿಕ ಆತ ವ್ಯಾಪಾರದಲ್ಲಿ ಒಳ್ಳೆಯ ಲಾಭ ಬಂದಿದ್ದು ಬಂಗಾರ ಮತ್ತು ಹಣವನ್ನು ಗಿಫ್ಟ್ ಮೂಲಕ ಕಳುಹಿಸುವುದಾಗಿ ಹೇಳಿದ್ದ. ಮಹಿಳೆ ಕೂಡ ಅದಕ್ಕೆ ಸಮ್ಮತಿಸಿದ್ದಳು.
    ಆನಂತರ ಕೋರಿಯರ್ ಏಜೆಂಟ್ ಎಂದು ಹೇಳಿಕೊಂಡು ಮತ್ತೊಬ್ಬ ಮಹಿಳೆಗೆ ಕರೆ ಮಾಡಿ ಪಾರ್ಸೆಲ್ ಬಂದಿರುವ ವಿಚಾರ ತಿಳಿಸಿದ್ದ. ಅದಕ್ಕೆ ಸರ್ವಿಸ್ ಮತ್ತು ಕಸ್ಟಮ್ಸ್ ಶುಲ್ಕ ಪಾವತಿಸಬೇಕಾಗುತ್ತದೆ ಎಂದಿದ್ದ.
    ಪಾರ್ಸೆಲ್‌ನಲ್ಲಿ ಬಂಗಾರ ಮತ್ತು ಹಣ ಕಳುಹಿಸಿರಬಹುದೆಂದು ನಂಬಿದ್ದ ಮಹಿಳೆ, ಆತ ಹೇಳಿದ್ದ ಖಾತೆಗೆ 3,59,200 ರೂ. ಪಾವತಿಸಿದ್ದರು. ಆದರೆ ಬಳಿಕ ತಾನು ಮೋಸ ಹೋಗಿರುವ ಬಗ್ಗೆ ಅರಿವಾಗಿದ್ದು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts