More

    3 ಕೋಟಿ ರೂ. ಮೌಲ್ಯದ ಮದ್ಯ ಬಿಕರಿ

    ಹಾವೇರಿ: ಬರೋಬ್ಬರಿ 42 ದಿನಗಳ ನಂತರ ಮದ್ಯದಂಗಡಿಗಳು ಆರಂಭಗೊಂಡಿದ್ದು, ಮೊದಲ ದಿನ ಸೋಮವಾರ ಜಿಲ್ಲೆಯಲ್ಲಿ ಭರ್ಜರಿ ಮದ್ಯ ಮಾರಾಟ ನಡೆದಿದೆ.

    ಜಿಲ್ಲೆಯಲ್ಲಿ ಸಿಎಲ್-2 ಹಾಗೂ ಎಂಎಸ್​ಐಎಲ್ ಸೇರಿ ಒಟ್ಟು 104 ಮಳಿಗೆಗಳಲ್ಲಿ ಸೋಮವಾರದಿಂದ ಮದ್ಯ ಮಾರಾಟ ಆರಂಭಗೊಂಡಿತ್ತು. ಮೊದಲ ದಿನ 2,65,35,528 ರೂ. ಮೌಲ್ಯದ 8,292ಲೀಟರ್ ಐಎಂಎಲ್ ಮದ್ಯ, 28,32,883 ರೂ. ಮೌಲ್ಯದ 1,889 ಲೀಟರ್ ಬಿಯರ್ ಮಾರಾಟವಾಗಿದೆ. ಜಿಲ್ಲೆಯಲ್ಲಿ ಈ ಮೊದಲು ದಿನವೊಂದಕ್ಕೆ ಮಾರಾಟವಾಗುತ್ತಿದ್ದ ಮದ್ಯಕ್ಕಿಂತ ಸೋಮವಾರ ಅಂದಾಜು ಮೂರುಪಟ್ಟು ಹೆಚ್ಚು ಮಾರಾಟವಾಗಿದೆ.

    ಸ್ಟಾಕ್ ಖಾಲಿ…: ಜಿಲ್ಲೆಯ ಬಹುತೇಕ ಅಂಗಡಿಗಳಲ್ಲಿ ಕೆಲ ಬ್ರ್ಯಾಂಡ್​ಗಳ ಮದ್ಯ ಸೋಮವಾರವೇ ಖಾಲಿಯಾಗಿದೆ. ಅಲ್ಪಸ್ವಲ್ಪ ಉಳಿದ ಮದ್ಯವನ್ನು ಮಂಗಳವಾರ ಗ್ರಾಹಕರು ಅನಿವಾರ್ಯವಾಗಿ ಖರೀದಿಸಿದರು. ಮಂಗಳವಾರ ಮದ್ಯದಂಗಡಿಗಳ ಮುಂದೆ ಸರದಿ ಸಾಲು ಅಷ್ಟಾಗಿ ಕಂಡು ಬರಲಿಲ್ಲ.

    ಜಿಲ್ಲೆಯಲ್ಲಿ ಮದ್ಯದಂಗಡಿಗಳ ಮಾಲೀಕರು ಬೇಡಿಕೆ ಸಲ್ಲಿಸಿದಂತೆ ಕೆಎಸ್​ಬಿಸಿಎಲ್ ಡಿಪೋದಿಂದ ಮದ್ಯ ಪೂರೈಸಲಾಗುತ್ತಿದೆ. ಮುಂದಿನ 3ರಿಂದ 4ದಿನಕ್ಕಾಗುವಷ್ಟು ಸ್ಟಾಕ್ ಇದೆ. ಹೊಸ ಬೇಡಿಕೆಗೆ ಹೊಸ ದರವನ್ನು ನಿಗದಿಗೊಳಿಸಲಾಗಿದೆ. ಕೆಲ ತಾಂತ್ರಿಕ ತೊಂದರೆಯಿಂದ ಪೂರೈಕೆಗೆ ಅಡ್ಡಿಯಾಗಿತ್ತು. ಮಂಗಳವಾರದಿಂದ ಆದ್ಯತೆಯ ಮೇಲೆ ಮದ್ಯ ಪೂರೈಸಲಾಗಿದ್ದು, ಎಲ್ಲಿಯೂ ಕೊರತೆ ಕಂಡು ಬಂದಿಲ್ಲ.

    | ಡಾ. ಮಹಾದೇವಿಬಾಯಿ, ಅಬಕಾರಿ ಇಲಾಖೆ ಉಪ ಆಯುಕ್ತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts