More

    ವರ್ಲ್ಡ್​​ ಅಥ್ಲೆಟಿಕ್ಸ್​​ನಲ್ಲಿ ಭಾರತಕ್ಕೆ ಎರಡನೇ ಪದಕ: ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಅಮಿತ್​​ ಕುಮಾರ್​

    ನೈರೋಬಿ: ಭಾರತೀಯ ಕ್ರೀಡಾಪಟುಗಳ ಯಶೋಗಾಥೆ ಒಲಿಂಪಿಕ್ಸ್​​ಗೇ ಸೀಮಿತವಾಗಿಲ್ಲ. ಇದೀಗ ಕೀನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ ವರ್ಲ್ಡ್​ ಅಥ್ಲೆಟಿಕ್ಸ್​ ಅಂಡರ್ 20 ಚ್ಯಾಂಪಿಯನ್​​ಶಿಪ್ಸ್​​ನಲ್ಲೂ ನಮ್ಮ ಕ್ರೀಡಾಪಟುಗಳು ಪದಕಗಳನ್ನು ಗಳಿಸುತ್ತಿದ್ದಾರೆ.

    ಇಂದು ನಡೆದ 10,000 ಮೀಟರ್​ ರೇಸ್​ ವಾಕ್​ನಲ್ಲಿ ಭಾರತದ ಅಮಿತ್​ ಕುಮಾರ್​ ಎರಡನೇ ಸ್ಥಾನ ಗಳಿಸಿ, ಬೆಳ್ಳಿ ಪದಕ ಗೆದ್ದಿದ್ದಾರೆ. ನೈರೋಬಿಯ ಕಸರನಿ ಕ್ರೀಡಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 42 ನಿಮಿಷ 17:94 ಸೆಕೆಂಡುಗಳ ಸಮಯದಲ್ಲಿ ಅವರು, ನಡಿಗೆ ಸ್ಪರ್ಧೆಯನ್ನು ಪೂರ್ಣಗೊಳಿಸಿದ್ದಾರೆ. ಕೀನ್ಯಾದ ಹರಿಸ್ಟೋನ್​ ವಾನ್ಯೋನ್ಯಿ ಚಿನ್ನದ ಪದಕ ಗೆದ್ದರೆ, ಪೌಲ್​ ಮೆಕ್​ಗ್ರತ್​ ಕಂಚು ಗಳಿಸಿದರು.

    ಇದನ್ನೂ ಓದಿ: ಒಲಿಂಪಿಕ್ಸ್ ಪದಕ ವಿಜೇತನಿಗೆ ಗೌರವ, ಆರ್ಮಿ ಕ್ರೀಡಾಂಗಣಕ್ಕೆ ‘ನೀರಜ್ ಚೋಪ್ರ’ ಹೆಸರು

    ಈ ಚ್ಯಾಂಪಿಯನ್​​ಶಿಪ್ಸ್​​ನಲ್ಲಿ ಇದು ಭಾರತಕ್ಕೆ ಲಭಿಸಿರುವ ಎರಡನೇ ಪದಕವಾಗಿದೆ. ಬುಧವಾರ ಆರಂಭವಾದ ಕ್ರೀಡಾಕೂಟದಲ್ಲಿ ಮೊದಲನೇ ದಿನವೇ ಭಾರತದ ಮಿಕ್ಸಡ್​ ರಿಲೇ ತಂಡವು ಮೂರನೇ ಸ್ಥಾನ ಗಳಿಸಿ, ಕಂಚಿನ ಪದಕ ಗೆದ್ದಿತ್ತು. (ಏಜೆನ್ಸೀಸ್)

    ತಾಯ್ನಾಡಿಗೆ ಹೊರಟ ಭಾರತೀಯರನ್ನು ವಿಚಾರಣೆಗೆ ಕರೆದೊಯ್ದ ತಾಲಿಬಾನ್​!

    Good News: ಮಕ್ಕಳಿಗೂ ಬಂತು ಕರೊನಾ ಲಸಿಕೆ! ಸೂಜಿರಹಿತ ‘ಜೈಕೋವಿ-ಡಿ’ ತುರ್ತುಬಳಕೆಗೆ ಅನುಮೋದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts