More

    ಪಂಚಮಸಾಲಿಗೆ 2ಎ ಮೀಸಲಾತಿ ನ್ಯಾಯಯುತ ಹಕ್ಕು

    ಹೊಳೆಆಲೂರ: ರಾಜ್ಯದಲ್ಲಿ ಒಂದೂವರೆ ಕೋಟಿಯಷ್ಟು ಲಿಂಗಾಯತ ಪಂಚಮಸಾಲಿ ಸಮುದಾಯದವರಿದ್ದಾರೆ. ಈ ಸಮುದಾಯ ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿದೆ. ಆದ್ದರಿಂದ ಸಮಾಜಕ್ಕೆ 2ಎ ಮೀಸಲಾತಿ ಪಡೆಯುವ ನ್ಯಾಯಯುತ ಹಕ್ಕಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ಪಟ್ಟಣದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ವತಿಯಿಂದ ಸೋಮವಾರ ವೀರರಾಣಿ ಕಿತ್ತೂರು ಚನ್ನಮ್ಮ 244ನೇ ಜಯಂತ್ಯುತ್ಸವ ಹಾಗೂ 199ನೇ ವಿಜಯೋತ್ಸವದ ನಿಮಿತ್ತ ಆಯೋಜಿಸಿದ್ದ ಬೃಹತ್ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಮೀಸಲಾತಿ ಹಕ್ಕೊತ್ತಾಯದ ಹೋರಾಟ ಮುಂದುವರಿಸುತ್ತೇವೆ. ಪ್ರಾರಂಭದಿಂದಲೂ ಹೋರಾಟದ ದಿಕ್ಕನ್ನು ಬದಲಿಸುವ ಪ್ರಯತ್ನ ಹಲವರೂ ಮಾಡುತ್ತಿದ್ದರೂ ಸಮುದಾಯದ ಒಗ್ಗಟ್ಟು ಮಾತ್ರವೇ ಅವರಿಗೆ ಉತ್ತರವಾಗಿದೆ. ಸಮುದಾಯದ ಒಗ್ಗಟ್ಟು, ಏಳಿಗೆಗಾಗಿ ನಮ್ಮ ಪ್ರಾಣ ಬಿಡಲು ಸಿದ್ಧ ಎಂದರು.

    ಕೆಪಿಸಿಸಿ ಸಂಯೋಜಕ ಡಾ.ಸಂಗಮೇಶ ಕೊಳ್ಳಿಯವರ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮುದಾಯ ಎಲ್ಲ ತೆರನಾದ ಭಿನ್ನಾಭಿಪ್ರಾಯ ಬದಿಗೆ ಸರಿಸಿ ಹೋರಾಡುವ ಕಾಲ ಬಂದಾಗಿದೆ. ರಾಜ್ಯದಲ್ಲೇ ಬೃಹತ್ ಯುವಶಕ್ತಿ ಹೊಂದಿರುವ ನಾವು, ಅನ್ಯ ಸಮಾಜದ ಸಹಕಾರ, ಗೌರವ, ಪ್ರೀತಿಯೊಂದಿಗೆ ಮುನ್ನೆಲೆಗೆ ಬರಬೇಕಾಗಿದೆ ಎಂದರು.

    ಇದಕ್ಕೂ ಮುನ್ನ ಪಟ್ಟಣದ ಬಾದಾಮಿ ಕ್ರಾಸ್​ನಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೂಡಿಯ ಕಲಾತಂಡದೊಂದಿಗೆ ರಾಣಿ ಚನ್ನಮ್ಮ ಭಾವಚಿತ್ರ ಹಾಗೂ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಮೆರವಣಿಗೆ ನಡೆದು, ಯಚ್ಚರೇಶ್ವರ ಮಠದ ಆವರಣಕ್ಕೆ ಆಗಮಿಸಿತು.

    ಮಲ್ಲಿಕಾರ್ಜುನ ಹಿರೇಕೊಪ್ಪ, ಸಂಗಪ್ಪ ದುಗ್ಗಲದ ಮಾತನಾಡಿದರು. ನೀಲಮ್ಮ ಕಡಬಿನಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುಮಂಗಲಾ ಕಲ್ಲಾಪೂರ, ನಿರ್ಮಲಾ ಪಾಟೀಲ, ಸುಧಾ ಯಲಿಗಾರ, ಕಲ್ಲಪ್ಪ ಬೇಲಿ, ಪ್ರವೀಣ ಜಡಮಳಿ, ಮಂಜುನಾಥ ಮಣ್ಣೂರ, ಮಹೇಶ ಹೆರಕಲ್, ಸಿದ್ದು ಪಾಟೀಲ, ಸರೋಜಮ್ಮ ಬೆನಕಟ್ಟಿ, ಮಹಾಂತೇಶ ಬ್ಯಾಡಗಿ, ಆರ್.ಎಸ್. ಜಾಲಿಹಾಳ, ಎಂ.ಎನ್. ಪಾಯಪ್ಪಗೌಡ್ರ, ಅಯ್ಯಪ್ಪ ಅಂಗಡಿ, ಶರಣಮ್ಮ ಕೇದಾರಿ ಆಗಮಿಸಿದ್ದರು. ಶರಣಪ್ಪಗೌಡ ಮುಲ್ಕೀಪಾಟೀಲ ನಿರೂಪಿಸಿದರು. ಮಹಾಂತೇಶ ಸೊಬರದ, ಸಂತೋಷ ಪಾಯಪ್ಪಗೌಡ್ರ, ಬಸು ಬ್ಯಾಡಗಿ, ಮಲ್ಲು ಕೋಟಿ, ಮಹಾಂತೇಶ ಕೋಟಿ, ರಮೇಶ ಭರಮಗೌಡ್ರ ಇದ್ದರು.

    ಪಟ್ಟಣದ ಪಂಚಮಸಾಲಿ ಯುವ ಘಟಕದ ನೂತನ ಅಧ್ಯಕ್ಷರಾಗಿ ಮಹಾಂತೇಶ ಸೊಬರದ, ಉಪಾಧ್ಯಕ್ಷರಾಗಿ ಬಸು ಬ್ಯಾಡಗಿ, ಕಾರ್ಯದರ್ಶಿಯಾಗಿ ಸಂತೋಷ ಪಾಯಪ್ಪಗೌಡ್ರ ಆಯ್ಕೆಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts