More

    ಪೇಟಿಎಂ ಉದ್ಯೋಗಿಗಳಲ್ಲಿ ಕೊರನಾ ವೈರಸ್​ ಪತ್ತೆ: ಭಾರತದಲ್ಲಿ 29ಕ್ಕೇರಿದ ಸೋಂಕಿತರ ಸಂಖ್ಯೆ

    ನವದೆಹಲಿ: ಹರಿಯಾಣ ಗುರುಗ್ರಾಮದ ಪೇಟಿಎಂ(Paytm) ಉದ್ಯೋಗಳಲ್ಲಿ ಮಾರಕ ಕೊರೊನಾ ವೈರಸ್​ ಸೋಂಕು ಇರುವುದು ಬುಧವಾರ ಧೃಢಪಟ್ಟಿದೆ. ಈ ಮೂಲಕ ಭಾರತದಲ್ಲಿ ಪತ್ತೆಯಾದ ಕೊರೊನಾ ವೈರಸ್​ ಪ್ರಕರಣಗಳು 29ಕ್ಕೇರಿದೆ.

    ಇತ್ತೀಚೆಗಷ್ಟೇ ಹೆಚ್ಚು ಕೊರೊನಾ ವೈರಸ್​ ಪೀಡಿತ ಇಟಲಿ ಪ್ರವಾಸವನ್ನು ಮುಗಿಸಿ ನಮ್ಮ ಉದ್ಯೋಗಿಗಳು ತವರಿಗೆ ಮರಳಿದ್ದರು ಎಂದು ಪೇಟಿಎಂ ತಿಳಿಸಿದೆ. ಅಂದಹಾಗೆ ವಿಶ್ವಸಂಸ್ಥೆ ಕೊರೊನಾ ವೈರಸ್​ಗೆ ಕೋವಿಡ್​-19(Covid-19) ಎಂದು ಹೆಸರಿಸಿದೆ.

    ಪೇಟಿಎಂ ಭಾರತದ ಹೆಚ್ಚು ಜನಪ್ರಿಯ ಡಿಜಿಟಲ್​ ಪಾವತಿ ಬ್ಯಾಂಕ್​ಗಳಲ್ಲಿ ಮೂಂಚೂಣಿಯಲ್ಲಿದೆ. ಇದೀಗ ತನ್ನ ಉದ್ಯೋಗಿಗಳಲ್ಲಿ ಕೊರೊನಾ ಕಂಡುಬಂದಿರುವುದರಿಂದ ಉತ್ತರ ಪ್ರದೇಶದ ನೋಯ್ಡಾ ಮತ್ತು ಹರಿಯಾಣದ ಗುರುಗ್ರಾಮದಲ್ಲಿರುವ ಕಚೇರಿಗಳನ್ನು ಎರಡು ದಿನಗಳವರೆಗೆ ಬಂದ್​ ಮಾಡಿ, ಶುಚಿಗೊಳಿಸಲು ಪೇಟಿಎಂ ಆದೇಶಿಸಿದೆ. ಇದರೊಂದಿಗೆ ಪೇಟಿಎಂ ತನ್ನ ಉದ್ಯೋಗಿಗಳಿಗೆ ಮುಂದಿನ ಕೆಲ ದಿನಗಳವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚಿಸಿದೆ.

    ಈ ಬಗ್ಗೆ ಮಾತನಾಡಿರುವ ಪೇಟಿಎಂ ವಕ್ತಾರ, ಇಟಲಿ ಪ್ರವಾಸ ಮುಗಿಸಿ ಬಂದವರಿಗೆ ಸೋಂಕು ತಗುಲಿದೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅವರ ಕುಟುಂಬಕ್ಕೆ ಸಂಪೂರ್ಣವಾಗಿ ನೆರವಾಗುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೆ, ಉದ್ಯೋಗಿಗಳಿಗೆ ಮುಂಜಾಗ್ರತ ಕ್ರಮಕ್ಕೂ ಸೂಚಿಸಲಾಗಿದೆ.

    ಸೋಮವಾರ ಇಟಲಿಯಿಂದ ಮರಳಿದ ಪೇಟಿಎಂ ಉದ್ಯೋಗಿಗಳು ಸದ್ಯ ಸಫ್ದಾರ್​ಜಂಗ್​ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರನ್ನು ಬುಧವಾರದಂದು ಆಸ್ಪತ್ರಗೆ ಕರೆದೊಯ್ಯಲಾಯಿತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts