More

    ಸಹಾಯ ಮಾಡಿದವರ ಸ್ಮರಿಸುವುದು ಮಾನವನ ಕರ್ತವ್ಯ

    ಬಸವಕಲ್ಯಾಣ: ಕಷ್ಟದ ದಿನಗಳಲ್ಲಿ ಸಹಾಯ ಮಾಡಿದವರನ್ನು ನೆನಪಿಸುವುದು ಮಾನವನ ಕರ್ತವ್ಯ. ಅಂಥದರಲ್ಲೂ ನಿವೃತ್ತ ಶಿಕ್ಷಕ ನೀಲಕಂಠಯ್ಯ ಅವರ ಜೀವನ ಸರ್ವರಿಗೂ ಆದರ್ಶವಾಗಿದೆ ಎಂದು ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದೇವರು ಕೊಂಡಾಡಿದರು.

    ಶಿವಪುರ ಗ್ರಾಮದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಅನುಭವ ಮಂಟಪದ ೨೮ನೇ ತಿಂಗಳ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ನಮ್ಮ ಮಠದಲ್ಲಿ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ್ದು, ದೊಡ್ಡವರಾದ ಮೇಲೆ ಶ್ರೀಮಠವನ್ನು ಮರೆಯುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
    ನಿವೃತ್ತ ಶಿಕ್ಷಕ ನೀಲಕಂಠಯ್ಯ ನಮ್ಮ ಮಠದ ವಿದ್ಯಾರ್ಥಿ. ೪೦ ವರ್ಷದ ಹಿಂದೆ ಪಾಲಕರಿಲ್ಲದ ಇವರನ್ನು ಮಠದಲ್ಲಿ ಇಟ್ಟುಕೊಂಡು ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಯಿತು. ಇವರು ಈ ಉಪಕಾರವನ್ನು ಇಂದಿಗೂ ನೆನೆಯುತ್ತಾರೆ. ಲಿಂಗೈಕ್ಯ ಶ್ರೀ ಡಾ.ಚನ್ನಬಸವ ಪಟ್ಟದೇವರು ಮಾರ್ಗದರ್ಶನದಂತೆ ಕಾಯಕನಿಷ್ಠೆಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.

    ನೇತೃತ್ವ ವಹಿಸಿದ್ದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ನಡೆ-ನುಡಿ ಒಂದಾಗಿಸಿಕೊಂಡಿರುವ ನೀಲಕಂಠಯ್ಯ ಅವರ ನಿವೃತ್ತಿ ಜೀವನ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

    ಪ್ರಾಚಾರ್ಯ ಸುರೇಶ ಅಕ್ಕಣ್ಣ ಮಾತನಾಡಿ, ಮಕ್ಕಳ ಮೇಲೆ ಬಹಳ ಪ್ರೀತಿ-ವಿಶ್ವಾಸ ಹೊಂದಿರುವ ನೀಲಕಂಠಯ್ಯ ಸೇವೆ ಸಲ್ಲಿಸಿದ ಎಲ್ಲ ಕಡೆ ಮಕ್ಕಳು ಸ್ಮರಿಸುತ್ತಾರೆ ಎಂದರು.

    ಜಿಲ್ಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ ಪತಂಗೆ ಮಾತನಾಡಿದರು. ಪ್ರಮುಖರಾದ ಗುರುನಾಥ ಗಡ್ಡೆ, ಸಂತೋಷ ಅಕ್ಕಣ್ಣ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಮೇತ್ರೆ, ಶಿವರಾಜ ಮಾಶೆಟ್ಟೆ, ರಮೇಶ ರಾಜೋಳೆ, ಶಂಕರ ಜಮಾದಾರ, ವಿವೇಕ ನಾಗರಾಳೆ, ಶಾಮರಾಮ ಸಿಂಗ್, ಪ್ರೊ.ಎಸ್.ಜಿ. ಕರಣೆ, ಚಂದ್ರಪ್ಪ ಗುಂಗೆ, ಸುಲೋಚನಾ ಮಾಮಾ, ಗಣಪತಿ ಕಾಸ್ತೆ ಉಪಸ್ಥಿತರಿದ್ದರು. ನೀಲಕಂಠಯ್ಯ ಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಲಾವಿದ ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts