More

    ತೆಲಂಗಾಣದ 28 ಕಾರ್ವಿುಕರು ಜೀತ ಮುಕ್ತ

    ಗದಗ: ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿರುವ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಜೀತಕ್ಕಿದ್ದ ತೆಲಂಗಾಣ ರಾಜ್ಯದ 28 ಕಾರ್ವಿುಕರನ್ನು ಜಿಲ್ಲಾಡಳಿತ ಜೀತದಿಂದ ಮುಕ್ತಗೊಳಿಸಿದೆ. ಎಲ್ಲರನ್ನೂ ಬುಧವಾರ ರಾತ್ರಿಯೇ ಬಸ್ ಮೂಲಕ ಸ್ವಗ್ರಾಮಕ್ಕೆ ಕಳಿಸಿಕೊಟ್ಟಿತು.

    ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿರುವ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ತೆಲಂಗಾಣದ ಕಾರ್ವಿುಕರನ್ನು ಜೀತಕ್ಕಿಟ್ಟು ಕೆಲಸ ನಡೆಸುತ್ತಿದ್ದಾರೆ ಎಂದು ತೆಲಂಗಾಣ ರಾಜ್ಯದ ರಾಷ್ಟ್ರೀಯ ಆದಿವಾಸಿ ಐಕ್ಯತಾ ಸಂಘದ ಚೇರ್ಮನ್ ವಾಸುದೇವ ರಾವ್ ಫೆ. 2ರಂದು ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ದೂರು ಸಲ್ಲಿಸಿದ್ದರು.

    ದೂರಿನ ಹಿನ್ನೆಲೆಯಲ್ಲಿ, ಗದಗ ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ, ಪೊಲೀಸ್ ಸಿಬ್ಬಂದಿ, ಕಾರ್ವಿುಕ ಇಲಾಖೆಯ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಎನ್​ಜಿಒ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ತನಿಖೆ ನಡೆಸಿದರು.

    ಈ ಸಂದರ್ಭದಲ್ಲಿ ಮಲ್ಲಸಮುದ್ರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ವಿುಕರನ್ನು ವಿಚಾರಿಸಿದ ಮೇಲೆ ಗುತ್ತಿಗೆದಾರ 28 ಜನರನ್ನು ಜೀತಕ್ಕಿಟ್ಟುಕೊಂಡಿದ್ದು ಬೆಳಕಿಗೆ ಬಂದಿದೆ. ಎಲ್ಲ 28 ಕಾರ್ವಿುಕರು ತೆಲಂಗಾಣ ರಾಜ್ಯದ ಮೆಹಬೂಬ್​ನಗರ, ವಿಕಾರಾಬಾದ್ ಮತ್ತು ಕರ್ನಲ್ ಜಿಲ್ಲೆಗಳ ಮೂಲದವರಾಗಿದ್ದಾರೆ. ಕಟ್ಟಡ ಕಾಮಗಾರಿ ಗುತ್ತಿಗೆ ಪಡೆದಿರುವ ತೆಲಂಗಾಣದ ರಾಜ್ಯದ ಪೆದ್ದಮಂಡದಿ ಮಂಡಲ ಮೂಲದ ಗುತ್ತಿಗೆದಾರ ನರಸಿಂಹ ಘಟ್ನಾಖಾನಪೂರ ಎಂಬುವರು ಕಾರ್ವಿುಕರಿಗೆ ಮುಂಗಡ ಹಣ ಪಾವತಿಸಿ ಕೆಲಸಕ್ಕಾಗಿ ಕರೆದುಕೊಂಡು ಬಂದಿದ್ದರು ಎಂದು ವಿಚಾರಣೆ ಸಮಯದಲ್ಲಿ ಗೊತ್ತಾಗಿದೆ.

    ಗದಗ ತಾಲೂಕಿನ ಮಲ್ಲಸಮುದ್ರ ಬಳಿ ಜಿಲ್ಲಾಸ್ಪತ್ರೆಗೆ ಸಂಬಂಧಿಸಿದಂತೆ ಕಟ್ಟಡ ಕಾಮಗಾರಿ ನಡೆದಿದ್ದು, ಇಲ್ಲಿ ಕೆಲಸ ಮಾಡಲು ತೆಲಂಗಾಣದಿಂದ ಕಾರ್ವಿುಕರನ್ನು ಕರೆತರಲಾಗಿತ್ತು. ಕಾರ್ವಿುಕರು ಗುತ್ತಿಗೆದಾರರಿಂದ ತಲಾ 30 ಸಾವಿರ ರೂ.ದಿಂದ 1 ಲಕ್ಷ ರೂ. ವರೆಗೆ ಮುಂಗಡ ಹಣ ಪಡೆದಿದ್ದರು. ಈ ಕುರಿತು ಒಪ್ಪಂದವನ್ನೂ ಮಾಡಿಕೊಳ್ಳಲಾಗಿತ್ತು.

    ಜೀತದಿಂದ ಮುಕ್ತಗೊಳಿಸಿ ಬಿಡುಗಡೆ ಪತ್ರದೊಂದಿಗೆ ಬುಧವಾರ ರಾತ್ರಿಯೇ ಎಲ್ಲ 28 ಕಾರ್ವಿುಕರನ್ನು ಬಸ್ಸಿನ ಮೂಲಕ ಸ್ವಗ್ರಾಮಕ್ಕೆ ಕಳಿಸಿಕೊಡಲಾಯಿತು. ಕಾರ್ವಿುಕರೆಲ್ಲರೂ ಮೆಹಬೂಬನಗರ ತಲುಪಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು.

    ತೆಲಂಗಾಣ ಮೂಲದವರಾದ ಎಲ್ಲ 28 ಕಾರ್ವಿುಕರನ್ನು ಮುಕ್ತಿಗೊಳಿಸಲಾಗಿದ್ದು, ಗುತ್ತಿಗೆದಾರನ ವಿರುದ್ಧ ಜೀತ ಪದ್ಧತಿ ಅಧಿನಿಯಮ 1976ರ ಪ್ರಕಾರ ಕ್ರಮ ಜರುಗಿಸಲಾಗಿದೆ. ಜಿಲ್ಲಾಡಳಿತದ ವತಿಯಿಂದ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಕೂಲಿಕಾರ್ವಿುಕರನ್ನು ಸುರಕ್ಷಿತವಾಗಿ ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಯಿತು. ಅಲ್ಲದೆ, ತೆಲಂಗಾಣ ರಾಜ್ಯ ಮೆಹಬೂಬ್ ನಗರ ಜಿಲ್ಲಾಧಿಕಾರಿ ಅವರಿಗೆ ಸಹ ಮಾಹಿತಿ ನೀಡಲಾಗಿದೆ.
    ರಾಯಪ್ಪ ಹುಣಸಗಿ, ಉಪವಿಭಾಗಾಧಿಕಾರಿ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts