More

    28ಕ್ಕೆ ಅಂಬುತೀರ್ಥ ಅಭಿವೃದ್ಧಿಗೆ ಚಾಲನೆ

    ತೀರ್ಥಹಳ್ಳಿ: ತಾಲೂಕಿನ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾದ ಶರಾವತಿ ನದಿಯ ಮೂಲಸ್ಥಾನ ಅಂಬುತೀರ್ಥದ ಸಮಗ್ರ ಅಭಿವೃದ್ಧಿಗೆ ಜೂ.28ರಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಶಿಲಾನ್ಯಾಸ ನೆರವೇರಿಸುವರು ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

    ತೀಥೋಧ್ಭವಗೊಳ್ಳುವ ಶ್ರೀ ರಾಮೇಶ್ವರ ದೇವರ ಗರ್ಭಗುಡಿ ಸೇರಿ ಸಮುದಾಯ ಭವನ, ಎರಡು ಕೊಳಗಳ ಅಭಿವೃದ್ಧಿ ದೇವಸ್ಥಾನ ಹಿಂಭಾಗದ ಗುಡ್ಡಕ್ಕೆ ರಕ್ಷಣಾಗೋಡೆ ಮುಂತಾದ ಕಾಮಗಾರಿಗಳ ನೀಲಿನಕ್ಷೆ ಸಿದ್ಧವಾಗಿದೆ. ಸುಮಾರು 25 ಕೋಟಿ ರೂ. ವೆಚ್ಚವಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಕಾರ್ಯಕ್ರಮದಲ್ಲಿ ಧಾರ್ವಿುಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಭಾಗವಹಿಸುವರು ಎಂದರು.

    ತಾಲೂಕಿನ ಬಹುದಿನದ ಬೇಡಿಕೆಯಾಗಿದ್ದ ಈ ಕಾರ್ಯಕ್ಕೆ ಕೆ.ಎಸ್.ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಈಗಾಗಲೇ ಆರ್ಥಿಕ ನೆರವು ಘೊಷಿಸಿದ್ದಾರೆ. ಉಳಿದಂತೆ ಹಿಂದು ಧಾರ್ವಿುಕ ದತ್ತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಕಿರು ನೀರಾವರಿ ಇಲಾಖೆ ಅನುದಾನ ದೊರೆಯಲಿದೆ ಎಂದು ಹೇಳಿದರು.

    ಕ್ಷೇತ್ರದ ಅಭಿವೃದ್ಧಿಗೆ ಶಿವಮೊಗ್ಗದ ಅ.ಪ.ರಾಮಭಟ್ಟರ ಶ್ರಮವೂ ಅಪಾರ. 1.50 ಕೋಟಿ ರೂ. ವೆಚ್ಚದಲ್ಲಿ ಇಲ್ಲಿನ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಶರಾವತಿ ನದಿಯ ಮೊದಲ ಸೊಬಗಿನ ಜಲಪಾತ ಅಚ್ಚಕನ್ಯೆ ಫಾಲ್ಸ್​ಗೆ ಹೋಗುವ ರಸ್ತೆ ಅಭಿವೃದ್ಧಿಗೆ 1.35 ಕೋಟಿ ರೂ. ಮಂಜೂರಾಗಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

    ತಹಸೀಲ್ದಾರ್ ಡಾ. ಎಸ್.ಬಿ.ಶ್ರೀಪಾದ, ಜಿಪಂ ಸದಸ್ಯೆ ಅಪೂರ್ವಾ ಶರಧಿ, ನೊಣಬೂರು ಗ್ರಾಪಂ ಅಧ್ಯಕ್ಷ ಧರಣೇಶ್, ತಾಪಂ ಸದಸ್ಯರಾದ ಚಂದವಳ್ಳಿ ಸೋಮಶೇಖರ್, ಪ್ರಶಾಂತ್ ಕುಕ್ಕೆ, ನಾಗೇಂದ್ರ ಭಟ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts