More

    26/11ರ ಮುಂಬೈ ದಾಳಿ ಮಾಸ್ಟರ್​ಮೈಂಡ್ ಹಫೀಜ್​ ಸಯ್ಯದ್​ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದ ಪಾಕಿಸ್ತಾನ ಕೋರ್ಟ್​

    ಇಸ್ಲಮಾಬಾದ್: ಉಗ್ರರಿಗೆ ಹಣಕಾಸು ಸಹಾಯ ಮಾಡುತ್ತಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಮಾತ್​ ಉದ್​ ದಾವಾ ಮುಖ್ಯಸ್ಥ ಹಫೀಜ್​ ಸಯ್ಯದ್​ಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿ ಪಾಕಿಸ್ತಾನ ನ್ಯಾಯಾಲಯ ಆದೇಶ ನೀಡಿದೆ.

    26/11ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಆಗಿರುವ ಹಫೀಜ್​ ಸಯ್ಯದ್​ ಹಾಗೂ ಆತನ ಸಹಚರರು ಉಗ್ರ ಸಂಘಟನೆಗಳಿಗೆ ಆರ್ಥಿಕ ಸಹಾಯ ಮಾಡುವುದಕ್ಕೆ ಸಂಬಂಧಪಟ್ಟಂತೆ ಇರುವ ಒಟ್ಟು ಆರು ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಲು ಮಂಗಳವಾರ ಒಪ್ಪಿಗೆ ನೀಡಿತ್ತು. ವಿಚಾರಣೆ ಪೂರ್ತಿಯಾದ ಬಳಿಕ ತೀರ್ಪು ಇಂದು ತೀರ್ಪು ನೀಡಿದೆ.

    ಹಫೀಜ್​ ಸಯ್ಯದ್​ ವಿರುದ್ಧ ಇದ್ದ ಆರು ಪ್ರಕರಣಗಳಲ್ಲಿ ಎರಡರಲ್ಲಿ ಆತ ಅಪರಾಧಿ ಎಂಬುದು ಕೋರ್ಟ್​ ವಿಚಾರಣೆ ವೇಳೆ ಸಾಬೀತಾಗಿದೆ.

    ಹಫೀಜ್​ ಸಯ್ಯದ್​ ಹಾಗೂ ಆತನ ಸಹಚರರ ವಿರುದ್ಧ ಡಿಸೆಂಬರ್​ 11ರಂದು ಆ್ಯಂಟಿ ಟೆರರಿಸಂ ಕೋರ್ಟ್​ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಅಂದಿನಿಂದಲೂ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts