ನವದೆಹಲಿ: 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ಗೆ 31 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಇಂದು ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.
ಲಷ್ಕರ್ ಈ ತೈಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ಗೆ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ಆತನಿಗೆ ಸಂಬಂಧಿಸಿದ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದೆ. ಮಾತ್ರವಲ್ಲ ಆತ ಅನಧಿಕೃತವಾಗಿ ಕಟ್ಟಿರುವ ಮಸೀದಿ ಹಾಗೂ ಮದರಸಗಳನ್ನು ಕೂಡ ವಶಕ್ಕೆ ಪಡೆಯುವಂತೆ ಆದೇಶ ನೀಡಲಾಗಿದೆ.
70 ವರ್ಷದ ಹಫೀಜ್ ಉಗ್ರ ಸಂಘಟನೆಗಳಿಗೆ ಹಣ ನೀಡುತ್ತಿದ್ದ ಹಲವು ಕೇಸುಗಳಿಗೆ ಸಂಬಂಧಿಸಿದಂತೆ ಈಗಾಗಲೇ ಕೆಲವು ಶಿಕ್ಷೆಗಳನ್ನು ವಿಧಿಸಲಾಗಿದ್ದು, 2020ರಲ್ಲಿ ಈತನನ್ನು 15 ವರ್ಷಗಳ ಜೈಲುಶಿಕ್ಷೆಗೆ ಗುರಿ ಮಾಡಲಾಗಿತ್ತು.
ಮುಂಬೈನಲ್ಲಿ 2008ರ ನವೆಂಬರ್ 26ರಂದು ನಡೆದು ಉಗ್ರದಾಳಿಯಲ್ಲಿ 166 ಮಂದಿ ಸಾವಿಗೀಡಾಗಿದ್ದು, 238 ಜನರು ಗಾಯಗೊಂಡಿದ್ದರು. ಹಫೀಜ್ ಸಯೀದ್ನನ್ನು 2019ರಲ್ಲಿ ಬಂಧಿಸಲಾಗಿತ್ತು. ಅದಕ್ಕೂ ಮೊದಲು 2001ರಿಂದ ಒಟ್ಟು 8 ಸಲ ಹಫೀಜ್ನನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. (ಏಜೆನ್ಸೀಸ್)
ಅಡವಿಟ್ಟ ಚಿನ್ನ ಕೊಡಲ್ಲ ಎಂದ ಅಧಿಕಾರಿ; ಬ್ಯಾಂಕ್ ಎದುರೇ ವಿಷ ಕುಡಿಯಲು ಮುಂದಾದ ರೈತ
ಭೀಕರ ಅಪಘಾತ; ಮಗುಚಿ ಬಿದ್ದ ಲಾರಿ, ಒಬ್ಬ ಸ್ಥಳದಲ್ಲೇ ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ..