More

    26ಕ್ಕೆ ಉಂಡೆ ಕೊಬ್ಬರಿ ಖರೀದಿ ಮುಕ್ತಾಯ

    ಅರಸೀಕೆರೆ: ಬೆಂಬಲ ಬೆಲೆಯಲ್ಲಿ ನಫೆಡ್ ಮೂಲಕ ಉಂಡೆ ಕೊಬ್ಬರಿ ಖರೀದಿಸಲಾಗುತ್ತಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರಕ್ರಿಯೆ ಜು.26 ಬುಧವಾರ ಮುಕ್ತಾಯವಾಗಲಿದೆ. ಇದಕ್ಕೂ ಮುನ್ನ ಜು.25ರಂದು ತಮ್ಮಲ್ಲಿರುವ ದಾಸ್ತಾನು ಮಾರಾಟ ಮಾಡಬಹುದು ಎಂದು ಖರೀದಿ ಕೇಂದ್ರದ ಅಧಿಕಾರಿ ಜಯಶಂಕರ್ ತಿಳಿಸಿದ್ದಾರೆ.

    ಪ್ರಸ್ತುತ 4.5 ಸಾವಿರ ರೈತರಿಂದ ಅಂದಾಜು 1.80 ಲಕ್ಷ ಚೀಲ ಅಂದರೆ, 72 ಸಾವಿರ ಕ್ವಿಂಟಾಲ್ ಉಂಡೆ ಕೊಬ್ಬರಿ ಖರೀದಿಸಲಾಗಿದೆ. ಹೆಸರು ನೋಂದಣಿ ಮಾಡಿಸಿರುವ 300 ರೈತರು ಈವರೆಗೂ ಮಾರುಕಟ್ಟೆಗೆ ಕೊಬ್ಬರಿ ತರಲು ಮುಂದಾಗಿಲ್ಲ. ಬೆಂಬಲ ಬೆಲೆ ಪ್ರಯೋಜನ ಪಡೆದುಕೊಳ್ಳುವ ದೃಷ್ಟಿಯಿಂದ ನಿಗದಿತ ಕಾಲ ಮಿತಿಯಲ್ಲಿ ತೆಂಗು ಬೆಳೆಗಾರರು ಕೊಬ್ಬರಿ ಮಾರಾಟ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts