More

    25 ಸಾವಿರ ಜನಕ್ಕೆ ಭೋಜನ ವ್ಯವಸ್ಥೆ

    ರಾಯಬಾಗ: ಜನಸಂಕಲ್ಪ ಯಾತ್ರೆಗೆ ಜನ ಸೇರುತ್ತಿಲ್ಲ ಎನ್ನುತ್ತಿರುವ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗೆ ರಾಯಬಾಗದಲ್ಲಿ ಸೇರಿರುವ ಜನರೇ ಸಾಯಾಗಿದ್ದಾರೆ. ಮಾಧ್ಯಮ ಮಿತ್ರರು ಇದನ್ನು ಕಾಂಗ್ರೆಸ್​ ಪಕ್ಷ ನೋಡುವಂತೆ ತೋರಿಸಬೇಕೆಂದು ವೇದಿಕೆಗೆ ಆಗಮಿಸುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದ ಜನಸ್ತೋಮದ ಕಡೆ ಕೈ ಮಾಡಿ ಹೇಳಿದರು.

    ವೇದಿಕೆ ಕಾರ್ಯಕ್ರಮಕ್ಕಿಂತ ಮುನ್ನ ಪಟ್ಟಣದ ಅಂಬೇಡ್ಕರ್​ ವೃತ್ತದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅಂಬೇಡ್ಕರ್​ ವೃತ್ತದಿಂದ ತಾಲೂಕು ಕ್ರೀಡಾಂಗಣದವರೆಗೆ ಏರ್ಪಡಿಸಿದ್ದ ಬೈಕ್​ ರ್ಯಾಲಿಗೆ ಸಿಎಂ ಚಾಲನೆ ನೀಡಿದರು. ಸುಮಾರು 25 ಸಾವಿರಕ್ಕಿಂತ ಹೆಚ್ಚು ಜನರು ಜನಸಂಕಲ್ಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಬಂದಿದ್ದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಮಾರಂಭದಲ್ಲಿ ಪೌರ ಕಾರ್ಮಿಕರನ್ನು ಸತ್ಕರಿಸಲಾಯಿತು.

    ರಾಯಬಾಗ, ಚಿಂಚಲಿ, ಕಬ್ಬೂರ ಮತ್ತು ಕಂಕಣವಾಡಿ ಪ.ಪಂ.ವ್ಯಾಪ್ತಿಯ ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರ ವಿತರಿಸಲಾಯಿತು. ಕಟ್ಟಡ ಕಾರ್ಮಿಕರಿಗೆ ಕಿಟ್​ ವಿತರಿಸಲಾಯಿತು. ವಿಧಾನ ಪರಿಷತ್​ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ರಮೇಶ ಕತ್ತಿ, ಶಶಿಕಾಂತ ನಾಯಿಕ, ಬಿಜೆಪಿ ರಾಯಬಾಗ ಮಂಡಲ ಅಧ್ಯಕ್ಷ ಬಸವರಾಜ ಡೊಣವಾಡೆ, ದುಂಡಪ್ಪ ಭೆಂಡವಾಡೆ, ಭರತೇಶ ಬನವಣೆ, ಮಹೇಶ ಭಾತೆ, ಸದಾನಂದ ಹಳಿಂಗಳಿ, ಅಣ್ಣಾಸಾಹೇಬ ಖೆಮಲಾಪೂರೆ, ಸದಾಶಿವ ೂರ್ಪಡೆ, ರಾಜಶೇಖರ ಖನದಾಳೆ, ಅಪ್ಪಾಸಾಬ ಬ್ಯಾಕೂಡೆ, ಕೆ.ಎಂ.ಮಡಿವಾಳ, ಸುರೇಶ ಬೆಲ್ಲದ, ಅರುಣ ಐಹೊಳೆ ಸೇರಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಇದ್ದರು. ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ ಸ್ವಾಗತಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts