More

    25 ಕೋಟಿ ರೂ.ಆಸ್ತಿಯ ಇ-ಸ್ವತ್ತಿಗೆ 50 ಲಕ್ಷ ರೂ.ಲಂಚ ಕೊಡಿಸಿದ್ದೇನೆ

    ಚಿತ್ರದುರ್ಗ: ಅವರು ಶಾಸಕರಾಗಿದ್ದ(ಗೂಳಿಹಟ್ಟಿ ಶೇಖರ್)ಅವಧಿ,ಬಡಾವಣೆಯೊಂದರ ಇ-ಸ್ವತ್ತಿಗಾಗಿ ಅವರ ಪಾರ್ಟಿ ಪುರಸಭಾ ಅಧ್ಯಕ್ಷರಿಗೆ ನಾ ನೇ 50 ಲಕ್ಷ ರೂ.ಲಂಚ ಕೊಡಿಸಿದ್ದೇನೆ ಎಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.
    ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನನಗೆ ಗೊತ್ತಿದ್ದವರೊಬ್ಬರ ಲೇಔಟ್‌ನ ಇ-ಸ್ವತ್ತಿಗೆ ಆರು ತಿಂಗಳ ಕಾಲ ಸತಾಯಿಸಿದ್ದರು. ಆಗ ನಾನೇ ಹಣ ಕೊಡಿಸಿದ್ದೇನೆ ಎಂದು,ಹಣ ಪಡೆದ ಪುರಸಭೆ ಅಧ್ಯಕ್ಷರ ಹೆಸರನ್ನು ಹೇಳದ ಶಾಸಕರು,ಲಂಚ ಕೊಡಿಸಿದ್ದ ತಪ್ಪಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಏನೂ ಮಾಡುವುದು?
    ಬಡಾವಣೆಗೆ ಹಾಕಿದ್ದ 25 ಕೋಟಿ ರೂ.ಬಂಡವಾಳ ಉಳಿಸಿಕೊಳ್ಳುವುದು ಅನಿವಾರ‌್ಯವಾಗಿತ್ತು. ದುಡ್ಡು ಕೊಟ್ಟಿರುವುದು ಗ್ಯಾರಂಟಿ, ದು ಡ್ದು ಪಡೆದು ಇ-ಸ್ವತ್ತು ಮಾಡಿ ಕೊಟ್ಟಿರುವುದು ಗ್ಯಾರಂಟಿ. ಈ ಬಗ್ಗೆ ಎಲ್ಲಿ ಬೇಕಾದರು ಹೇಳಲು,ಹೇಳಿಸಲು ಸಿದ್ಧ.
    ಪುರಸಭೆ ಅಧ್ಯಕ್ಷರಿಗೆ ಕೊಟ್ಟಿರುವ ಹಣದಲ್ಲಿ ಗೂಳಿಹಟ್ಟಿ ಶೇಖರ್ ಅವರು ಭಾಗಿಯಾಗಿದ್ದಾರೆಯೇ ಎಂಬ ಪ್ರಶ್ನೆಗೆ, ಅವರನ್ನು ಎದುರಿಗೆ ಕರೆಸಿದರೆ ಹೇಳುತ್ತೇನೆ. ಅವರಿಲ್ಲದಾಗ ಹೇಳುವುದು ಒಳ್ಳೆಯದಲ್ಲ. ಅವರ ಕಾಲದಲ್ಲಿ ರಿಯಲ್‌ಎಸೈಟ್ ದಂಧೆ ಯಥೇಚ್ಛ ನಡೆದಿತ್ತು. ಅ ಕ್ರಮ ದಂಧೆಗಳ ಕುರಿತಂತೆ ತಾಕತ್ ಇದ್ದರೇ ಧೈರ್ಯದಿಂದ ಬಹಿರಂಗ ಚರ್ಚೆಗೆ ಬರಲಿ.
    ನನ್ನ ಅವಧಿ ತಪ್ಪಾಗುತ್ತಿದ್ದರೆ ಕ್ಷಮೆ ಕೇಳಲು ಸಿದ್ಧ,ಬರೇ ವಾಯ್ಸ ರೇಕಾರ್ಡ್ ಹರಿಬಿಡುವುದು ಅದ್ಯಾವ ಗಟ್ಟಿತನ?ಅವರ ಕಾಲದಲ್ಲಿ ಜೂಜಾಟ,ಮರಳು ಮೊದಲಾದ ಎಲ್ಲ ತರಹದ ಕೆಟ್ಟ ದಂಧೆಗಳು ನಡೆಯುತ್ತಿದ್ದವು.
    ಅವರ ಮಾತನ್ನು ನಾನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಕೆಸರು ಮೇಲೆ ಕಲ್ಲು ಹಾಕಿ ಸಿಡಿಸಿಕೊಳ್ಳಲು ಬಯಸುವುದಿಲ್ಲ. ಪೊಲೀಸ್ ಠಾಣೆ ಗಳು ಗೂಳಿಹಟ್ಟಿ ಶೇಖರ್ ಕಚೇರಿಗಳಾಗಿದ್ದವು. ನನ್ನ ಅಧಿಕಾರಾವಧಿ ಒಂದೇ,ಒಂದು ಅಕ್ರಮ ದಂಧೆ ನಡೆದಿದುವುದನ್ನು ತೋರಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗೋವಿಂದಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts