More

    ಸಿಕ್ಕಿ ಬಿದ್ದ ಇಬ್ಬರಿಂದಾಗಿ ಪತ್ತೆಯಾದ್ವು ಕಳವಾಗಿದ್ದ 24 ದ್ವಿಚಕ್ರ ವಾಹನ​ಗಳು!

    ಬೆಂಗಳೂರು: ಇಬ್ಬರೇ ಇಬ್ಬರು ಕಳ್ಳರು ಒಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರಿಂದಾಗಿ ಕಳವಾಗಿದ್ದ 24 ದ್ವಿಚಕ್ರ ವಾಹನಗಳು ಪತ್ತೆಯಾಗಿವೆ. ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ಜೆ.ಪಿ.ನಗರ ಠಾಣೆ ಪೊಲೀಸರು ಸುಮಾರು 16 ಲಕ್ಷ ರೂ. ಮೌಲ್ಯದ 24 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ರಘು ನಾಯ್ಕ ಮತ್ತು ದೌಲತ್‌ಖಾನ್ ಬಂಧಿತರು. ಸಿ.ಪಿ.ಆನಂದ್ ರಾವ್ ಎಂಬುವರು ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆನಂದ ರಾವ್ ಅವರು ನ.12ರ ಮಧ್ಯಾಹ್ನ ಸುಮಾರು 3 ಗಂಟೆಯ ಸಮಯದಲ್ಲಿ ತಮ್ಮ ದ್ವಿಚಕ್ರ ವಾಹನ ಹೋಂಡ ಆ್ಯಕ್ಟಿವಾವನ್ನು ಜೆ.ಪಿ ನಗರ 3ನೇ ಹಂತದ ಮಾಂಡೊವಿ ಶೋ ರೂಮ್ ಪಕ್ಕದಲ್ಲಿ ನಿಲ್ಲಿಸಿ, ಕಾರಿನ ವಿಮೆ ಕಟ್ಟಲು ಹೋಗಿದ್ದರು. ನಂತರ ವಾಪಸ್ ಬಂದು ನೋಡಿದ್ದಾಗ ದ್ವಿಚಕ್ರ ವಾಹನ ಕಳ್ಳತನವಾಗಿರುವುದು ಗೊತ್ತಾಗಿತ್ತು. ಈ ಸಂಬಂಧ ಜೆ.ಪಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಪ್ಪಳ, ಗದಗ, ರಾಯಚೂರು, ವಿಜಯನಗರ ಮತ್ತು ಇನ್ನಿತರ ಜಿಲ್ಲೆಗಳಿಂದ ವಾಹನಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು. ವಿವಿಧ ಕಡೆಗಳಲ್ಲಿ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್, ಬಜಾಜ್ ಪಲ್ಸರ್, ಅವೆಂಜರ್, ಹೋಂಡ ಆ್ಯಕ್ಟಿವಾ, ಹೋಂಡ ಡಿಯೋ, ಹೋಂಡ ಶೈನ್, ಟಿವಿಎಸ್ ಎಕ್ಸ್‌ಎಲ್ ಸೇರಿ ವಿವಿಧ ಕಂಪನಿಗಳ 16 ಲಕ್ಷ ರೂ. ಬೆಲೆ ಬಾಳುವ 24 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿಕ್ಕಿ ಬಿದ್ದ ಇಬ್ಬರಿಂದಾಗಿ ಪತ್ತೆಯಾದ್ವು ಕಳವಾಗಿದ್ದ 24 ದ್ವಿಚಕ್ರ ವಾಹನ​ಗಳು!

    ಆರೋಪಿಗಳು ಬೆಳ್ಳಂದೂರಿನ ಕಾರ್ಮಿಕರ ಶೆಡ್‌ನಲ್ಲಿ ನೆಲೆಸಿದ್ದರು. ಆರೋಪಿಗಳು ಈ ಹಿಂದೆ ಪ್ರಕರಣವೊಂದರಲ್ಲಿ ಬೆಳ್ಳಂದೂರು ಠಾಣೆ ಪೊಲೀಸರಿಂದ ಬಂಧನವಾಗಿದ್ದರು. ಇಬ್ಬರೂ ವೃತ್ತಿಪರ ಕಳ್ಳರಾಗಿದ್ದು, ಮೋಜಿನ ಜೀವನ ನಡೆಸಲು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದರು. ಈ ಹಿಂದೆ ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಗಳು ಜಾಮೀನು ಪಡೆದು ಹೊರಬಂದು ಮತ್ತೆ ತಮ್ಮ ಹಳೇ ಚಾಳಿ ಮುಂದುವರಿಸಿದ್ದರು. ಕದ್ದ ದ್ವಿಚಕ್ರ ವಾಹನಗಳನ್ನು ಉತ್ತರ ಕರ್ನಾಟಕದ ಹಳ್ಳಿಗಳಿಗೆ ತೆಗೆದುಕೊಂಡು ಹೋಗಿ ಪರಿಚಿತರಿಗೆ ಕಡಿಮೆ ಹಣಕ್ಕೆ ಮಾರಾಟ ಮಾಡುತ್ತಿದ್ದರು. ತಿಂಗಳ ಬಳಿಕ ದಾಖಲೆ ನೀಡುತ್ತೇವೆ. ಬಳಿಕ ಉಳಿದ ಹಣ ಕೊಡಿ ಎಂದು ಹೇಳುತ್ತಿದ್ದರು. ನಂತರ ಆರೋಪಿಗಳು ಆ ಕಡೆಗೆ ಹೋಗುತ್ತಿರಲಿಲ್ಲ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಕೊಪ್ಪಳದಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡಿಕೊಂಡು ನಗರಕ್ಕೆ ಬಂದಿದ್ದರು. ಈ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

    ನಿವೃತ್ತ ಸರ್ಕಾರಿ ನೌಕರರೇ ಹುಷಾರು.. ಇದು ‘ಲೈಫ್’ ಪ್ರಶ್ನೆ: ವಂಚನಾ ಜಾಲದ ಬಗ್ಗೆ ಎಚ್ಚರಿಕೆ..

    ಕೇಶ ಕಸಿಯಿಂದಾಗಿ ಪ್ರಾಣ ಕಳ್ಕೊಂಡ!; ಇಬ್ಬರು ಸರ್ಜನ್ ಸೇರಿ ನಾಲ್ವರ ಬಂಧನ..

    ‘ನನ್ನ ಗಂಡ ಯಾವತ್ತೂ ಮಗನನ್ನು ನೋಡಬಾರದು, ಮಗನ ಹತ್ತಿರ ಬರಬಾರದು’ ಅಂತ ಕೇಸ್ ಹಾಕಬಹುದೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts