More

    ಹಾಲಿ ಮತ್ತು ಮಾಜಿ ಯೋಧರಿಗೆ ಕರೊನಾ ಸೋಂಕು; ದೆಹಲಿಯಲ್ಲಿ ಚಿಕಿತ್ಸೆ

    ನವದೆಹಲಿ: ಹಾಲಿ ಮತ್ತು ಮಾಜಿ ಯೋಧರಿಗೆ ಕರೊನಾ ಸೋಂಕು ತಗುಲಿದೆ. ಇವರೆಲ್ಲರೂ ದೆಹಲಿಯ ಸೇನಾಪಡೆ ಸಂಶೋಧನೆ ಮತ್ತು ರೆಫೆರಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಟ್ಟು 24 ಜನರಿಗೆ ಸೋಂಕು ತಗುಲಿರುವುದು ಮಂಗಳವಾರ ಖಚಿತವಾಯಿತು. ತಕ್ಷಣವೇ ಅವರೆಲ್ಲರನ್ನೂ ಬೇಸ್​ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನಾಪಡೆ ಮೂಲಗಳು ತಿಳಿಸಿವೆ.

    ಇವರೆಲ್ಲರೂ ದೆಹಲಿಯ ಕಂಟೋನ್ಮೆಂಟ್​ ಏರಿಯಾದಲ್ಲಿ ವಾಸವಾಗಿದ್ದರು. ಸೇನಾಪಡೆ ಆಸ್ಪತ್ರೆಯ ಕ್ಯಾನ್ಸರ್​ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರೆಲ್ಲರನ್ನೂ ತಕ್ಷಣವೇ ಐಸೋಲೇಷನ್​ ವಾರ್ಡ್​ಗಳಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಆಸ್ಪತ್ರೆಯ ಸಿಬ್ಬಂದಿಗೆ ಯಾರಿಗೂ ಸೋಂಕು ತಗುಲಿಲ್ಲ ಎಂಬುದು ಖಚಿತವಾಗಿರುವುದಾಗಿ ಸೇನಾಪಡೆ ಮೂಲಗಳು ಹೇಳಿವೆ.

    ಇದನ್ನೂ ಓದಿ: ದೆಹಲಿಯಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ವ್ಯಾಟ್​ ದರ ಹೆಚ್ಚಳ

    ಭಾರತೀಯ ಸೇನಾಪಡೆಯಲ್ಲಿ ಮಾರ್ಚ್​ನಲ್ಲೇ ಕೆಲ ಯೋಧರಿಗೆ ಕರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿನ ಬಗ್ಗೆ ಎಚ್ಚರದಿಂದ ಇರುವಂತೆ ಸೇನಾಪಡೆ ಅಧಿಕಾರಿಗಳು ಸೇನೆಯ ಎಲ್ಲ ಘಟಕಗಳಿಗೂ ಸೂಚನೆ ನೀಡಿತ್ತು.

    ಜಮ್ಮು ಮತ್ತು ಕಾಶ್ಮೀರದ ಮೂವರು ಛಾಯಾಗ್ರಾಹಕರಿಗೆ ಪುಲಿಟ್ಜರ್​ ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts