More

    ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ 24 ಮೀನುಗಾರರ ರಕ್ಷಣೆ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಬಿರುಗಾಳಿಯಿಂದ ಅಪಾಯಕ್ಕೆ ಸಿಲುಕಿದ್ದ 24 ಮೀನುಗಾರರನ್ನು ಮಂಗಳೂರು ಕೋಸ್ಟ್ ಗಾರ್ಡ್ ನೌಕೆಯ ಮೂಲಕ ರಕ್ಷಿಸಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ಹೊನ್ನಾವರ ತೀರದಿಂದ ಸುಮಾರು 15 ಕಿಮೀ ಆಳ ಸಮುದ್ರದಲ್ಲಿ ನೇತ್ರಾಣಿ ನಡುಗಡ್ಡೆ ಸಮೀಪ ಕಮರುಲ್ ಬಾಹರ್ ಎಂಬ ಮೀನುಗಾರಿಕೆ ಬೋಟ್ ಗುರುವಾರದಿಂದ ಅಪಾಯಕ್ಕೆ ಸಿಕ್ಕಿಹಾಕಿಕೊಂಡಿತ್ತು.

    ಇಂಜಿನ್ ಗೆ ಹಾನಿಯಾಗಿತ್ತು. ಬೋಟ್ ಮುಳುಗುವ ಹಂತದಲ್ಲಿತ್ತು. ಬೋಟ್ ನಲ್ಲಿದ್ದ 24 ಮೀನುಗಾರರು ರಕ್ಷಣೆಗೆ ಮೊರೆ ಇಟ್ಟಿದ್ದರು. ಮಂಗಳೂರಿನಿಂದ ವಿಶೇಷ ನೌಕೆಯ ಮೂಲಕ ಆಗಮಿಸಿದ ಕೋಸ್ಟ್ ಗಾರ್ಡ್ ಅಧಿಕಾರಿಗಳು ಎಲ್ಲ ಮೀನುಗಾರರನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ.

    ಇದನ್ನೂ ಓದಿ: ಕರ್ಕಶ ಹಾರ್ನ್ ಬಾರಿಸುತಿದ್ದ ಚಾಲಕನನ್ನು ಬೆನ್ನತ್ತಿದ ಕೆ.ಆರ್.ಪುರಂ ಸಂಚಾರ ಪೊಲೀಸರಿಗೆ ಕಾದಿತ್ತು ಸರ್ಪ್ರೈಸ್!

    ಉತ್ತರ ಕನ್ನಡ ಎಸ್ ಪಿ ಶಿವ ಪ್ರಕಾಶ ದೇವರಾಜು ಜಾಲತಾಣಗಳ ಮೂಲಕ ಕೋಸ್ಟ್ ಗಾರ್ಡ್ ಗೆ ಧನ್ಯವಾದ ತಿಳಿಸಿದ್ದಾರೆ.

    ಭಾರಿ ಮಳೆ: ಗುರುವಾರದಿಂದ ಉತ್ತರ ಕನ್ನಡ ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತಿದೆ.‌ ಕಾರವಾರದಲ್ಲಿ ಶುಕ್ರವಾರ 60 ಮಿಮೀಗೂ ಅಧಿಕ ಮಳೆಯಾಗಿದೆ. ಸೆ.12 ರವರೆಗೂ ಜಿಲ್ಲೆಯಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.‌

    ಅಪ್ಪ ಗಿಫ್ಟ್​ ನೀಡಿದ್ದ ವಿಸ್ಕಿ ಬಾಟಲಿ ಮಾರಿ ಮನೆ ಕಟ್ಟಿಸಿದ: ಅಚ್ಚರಿಯಾಯ್ತಾ? ಈ ಸ್ಟೋರಿ ಓದಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts