More

    ದೆಹಲಿ ಹಿಂಸಾಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ 24 ಮಂದಿ ಬಂಧನ

    ನವದೆಹಲಿ: ಕಳೆದ ವಾರದಿಂದ ಹಿಂಸಾಚಾರದಲ್ಲಿ ನಲುಗಿದ್ದ ದೆಹಲಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಂಚುತ್ತಿದ್ದ 24 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಇದಕ್ಕೂ ಮುನ್ನ ಹೀಗೆ ವದಂತಿಗಳನ್ನು ಹಬ್ಬಿಸುತ್ತಿದ್ದ ಇಬ್ಬರನ್ನು ಭಾನುವಾರ ವಶಕ್ಕೆ ಪಡೆದಿದ್ದರು. ಕಳೆದ ನಾಲ್ಕು ದಿನಗಳಿಂದ ಹಿಂಸಾಚಾರದಲ್ಲಿ ಬೆಂದು ಹೋಗಿದ್ದ ದೆಹಲಿಗೆ ಈ ವದಂತಿಗಳಿಂದಾಗಿ ಮತ್ತೆ ಭಯದ ವಾತಾವರಣವಿತ್ತು.

    ಈಶಾನ್ಯ ದೆಹಲಿಯಲ್ಲಿ ಆಯುಧಗಳನ್ನು ಹಿಡಿದ ಜನ ಬೀದಿಗಿಳಿದು ಜನರ ಪ್ರಾಣ, ಆಸ್ತಿಪಾಸ್ತಿಗಳ ಹರಣಕ್ಕೆ ಕಾರಣವಾಗಿದ್ದರು. ಹಿಂಸಾಚಾರದಲ್ಲಿ 44 ಮಂದಿ ಮೃತಪಟ್ಟಿದ್ದರು. ಅದೆಷ್ಟೋ ಆಸ್ತಿಗಳ ಹಾನಿಯಾಗಿತ್ತು.

    ಹಿಂಸಾಚಾರ ಸಂಬಂಧ ಸುಳ್ಳು ಸುದ್ದಿಗಳನ್ನು ಹರಡದಂತೆ, ಸಾಮಾಜಿಕ ಜಾಲತಾಣಗಳನ್ನು ಇಂತಹ ಕೆಲಸಕ್ಕೆ ಬಳಸದಂತೆ ಹಲವು ಹಿರಿಯ ಪೊಲೀಸ್​​ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.

    ಅಲ್ಲದೆ ಸಾಮಾಜಿಕ ಜಾಲತಾಣಗಳ ಮೇಲೆ ಗಮನವಿಟ್ಟಿದ್ದು, ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಟ್ವಿಟರ್​ನಲ್ಲಿಯೂ ಎಚ್ಚರಿಕೆ ನೀಡಿದ್ದರು.

    ವದಂತಿಗಳಿಂದಾಗಿ ಇಲ್ಲಿನ ನಿವಾಸಿಗಳಲ್ಲಿ ಆತಂಕ ಉಂಟಾಗಿತ್ತು. ಅವರು ಪೊಲೀಸರ ಸಹಾಯವಾಣಿಗೆ ಕರೆ ಮಾಡಿ ಆತಂಕದ ಬಗ್ಗೆ ತಿಳಿಸಿದ್ದರು. ದೆಹಲಿಯ 7 ಮೆಟ್ರೋ ನಿಲ್ದಾಣಗಳನ್ನು ಈ ಸಂಬಂಧ ಬಂದ್​ ಮಾಡಲಾಗಿತ್ತು, ಆದರೆ ಕೊನೆಯ ಹಂತದಲ್ಲಿ ಇವು ಕಾರ್ಯ ನಿರ್ವಹಿಸುತ್ತಿವೆ.

    ಆಡಳಿತರೂಢ ಪಕ್ಷ ಆಪ್ ಮುಖಂಡರು ಮತ್ತು ಬಿಜೆಪಿಯ ಹಲವು ಮುಖಂಡರು “ದೆಹಲಿ ಶಾಂತವಾಗಿದೆ. ಯಾವ ವದಂತಿಗೂ ಕಿವಿಗೊಡಬೇಡಿ” ಎಂದು ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts