More

    24ಗಂಟೆಯಲ್ಲಿ ಮುಕ್ರಂಖಾನ್ ಬಂಧನವಾಗಲಿ


    ಲಬುರಗಿ: ಹಿಜಾಪ್ ಪರ ಪ್ರತಿಭಟನೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಮುಖಂಡ ಮುಕ್ರಂಖಾನ್ ಬಂಧಿಸುವಂತೆ ಒತ್ತಾಯಿಸಿ ಸೇಡಂ ಹೊರವಲಯದಲ್ಲಿ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಅಪಾರ ಹಿಂದುಪರ ಕಾರ್ಯಕರ್ತರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

    ಸುಮಾರು ೨ ಗಂಟೆವರೆಗೂ ರಸ್ತೆಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು. ಪೊಲೀಸರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕರ್ತರು, ಎಸ್‌ಪಿ ಅವರು ಸ್ಥಳಕ್ಕೆ ಭೇಟಿ ನೀಡುವಂತೆ ಪಟ್ಟು ಹಿಡಿದರು.

    ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ರಾಜ್ಯದ ವಿವಿಧೆಡೆ ಮುಕ್ರಂಖಾನ್ ತಳಿಗಳಿದ್ದು, ಅವರೆಲ್ಲರಿಗೂ ಇಂದಿನ ಪ್ರತಿಭಟನೆ ಪಾಠವಾಗಲಿದೆ. ಪೊಲೀಸರ ನಿರ್ಲಕ್ಷ್ಯದಿಂದಲೇ ರಾಜ್ಯದಾದ್ಯಂತ ಹಿಜಾಬ್ ಪ್ರಕರಣ ಹಬ್ಬಿದೆ. ಕೂಡಲೇ ಮುಕ್ರಂಖಾನ್ ಅವರನ್ನು ಬಂಧಿಸಬೇಕು, ಇಲ್ಲದಿದ್ದರೆ ಮುಂದಾಗುವ ಎಲ್ಲ ಅವಘಡಗಳಿಗೆ ಪೊಲೀಸ್ ಇಲಾಖೆಯೇ ಹೊಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
    ಬಳಿಕ ಎಸ್‌ಪಿ ಇಶಾ ಪಂತ್ ಅವರು ಸ್ಥಳಕ್ಕಾಗಮಿಸಿ, ೨೪ ಗಂಟೆಯಲ್ಲಿ ಮುಕ್ರಂಖಾನ್ ಅವರನ್ನು ಬಂಧಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.

    ಗಂಗಾಧರ ಕುಲಕಣಿ, ರಾಜಶೇಖರ ನೀಲಂಗಿ ಸೇರಿ ಸಹಸ್ರಾರು ಹಿಂದುಪರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

    ಫೆ.೮ರಂದು ಸೇಡಂನಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಕ್ರಂಖಾನ್ ವಿವಾದಾತ್ಮಕ ಮಾತನಾಡಿದ್ದು, ಇಲ್ಲಿವರೆಗೂ ಬಂಧಿಸಿಲ್ಲ. ಅಲ್ಲದೆ ಪ್ರಕರಣವೂ ದಾಖಲಿಸಿಕೊಂಡಿಲ್ಲ. ಕೊನೆಯದಾಗಿ ನಮ್ಮ ಕಾರ್ಯಕರ್ತರು ಮಧ್ಯ ರಾತ್ರಿ ೩ ಗಂಟೆವರೆಗೂ ಠಾಣೆ ಎದುರು ಪ್ರತಿಭಟನೆ ಮಾಡಿದಾಗ ದೂರು ದಾಖಲಿಸಿಕೊಳ್ಳಲಾಗಿದೆ. ಇದ್ಯಾವ ಸರ್ಕಾರ, ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ ? ಕೇಸ್ ದಾಖಲಾಗಿ ೨೪ ತಾಸುಗಳಾದರು ಬಂಧನವಾಗಿಲ್ಲ. ನಿಮ್ಮ ಕೈಲಿ ಅರೆಸ್ಟ್ ಮಾಡಲು ಆಗದಿದ್ದರೆ ಹೇಳಿ? ನಮ್ಮ ಕಾರ್ಯಕರ್ತರು ಎಲ್ಲವನ್ನು ನೋಡಿಕೊಳ್ಳುತ್ತಾರೆ.
    | ಗಂಗಾಧರ ಕುಲಕರ್ಣಿ, ರಾಜ್ಯ ಕಾರ್ಯದರ್ಶಿ, ಶ್ರೀರಾಮ ಸೇನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts