More

    ಕೆಂಭಾವಿಯಲ್ಲಿ 33,901 ಹೆಕ್ಟೇರ್ ಬಿತ್ತನೆ ಗುರಿ

    ವಿಜಯಾಚಾರ್ಯ ಪುರೋಹಿತ ಕೆಂಭಾವಿ
    ರಾಜ್ಯದ ಹಲವೆಡೆ ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು, ಜಿಲ್ಲೆಯಲ್ಲಿಯೂ ಕಳೆದ ಎರಡು ದಿನಗಳಿಂದ ಅಲ್ಪ ಪ್ರಮಾಣದ ಮಳೆ ಸುರಿದಿದೆ. ಕೆಂಭಾವಿ ವಲಯದಲ್ಲಿ ಸೋಮವಾರ ನಸುಕಿನ ಜಾವ 10 ಮಿಮೀ ಮಳೆ ಆಗಿದ್ದು, ಮುಂದಿನ ದಿನಗಳಲ್ಲಿ ಮಳೆ ಬೀಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಮಂಗಳವಾರದಿಂದ ಪಟ್ಟಣ ಸೇರಿ ವಲಯದ ಹಲವು ಗ್ರಾಮಗಳಲ್ಲಿ ರೈತರು ಬಿತ್ತನೆಗೆ ಭೂಮಿ ಹದ ಮಾಡುತ್ತಿದ್ದು ಈ ಬಾರಿ ಅಧಿಕ ಪ್ರಮಾಣದಲ್ಲಿ ಮಳೆ ಬರಬಹುದು ಎಂಬ ವಿಶ್ವಾಸ ರೈತರ ಮೇಲಿದೆ. ಮೃಗಶಿರಾ ಮಳೆ ಪ್ರವೇಶಿಸುವ ಮೊದಲೆ ರೋಹಿಣಿ ಮಳೆ ಅಲ್ಪ ಪ್ರಮಾಣದಲ್ಲಿ ಬಂದ ಹಿನ್ನೆಲೆಯಲ್ಲಿ ರೈತರು ಹತ್ತಿ, ತೊಗರಿ, ಹೆಸರು ಸೇರಿದಂತೆ ಇನ್ನಿತರೆ ಮುಂಗಾರಿ ಬೆಳೆ ಬಿತ್ತನೆಗೆ ತಮ್ಮ ಜಮೀನುಗಳನ್ನು ಹದ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ವರುಣ ಯಾವ ರೀತಿ ರೈತರಿಗೆ ಸಹಕಾರ ನೀಡುತ್ತಾನೆ ಎಂಬುದು ಕಾದು ನೋಡಬೇಕಿದೆ. ಕರೊನಾ ಆಘಾತದಿಂದ ಸಂಕಷ್ಟ ಅನುಭವಿಸಿದ ರೈತರು ಹೋದ ವರ್ಷ ಬೆಳೆದ ಬೆಳೆಗಳನ್ನು ಸರಿಯಾಗಿ ಮಾರಾಟ ಮಾಡದೆ ಬಂದ ಅಲ್ಪ ದರದಲ್ಲೇ ಖಾಸಗಿಯಾಗಿ ಮಾರಾಟ ಮಾಡಿದ್ದು, ಇದರಿಂದ ಕೆಲವು ರೈತರು ಸಾಲದ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ವಲಯದಲ್ಲಿ ಒಟ್ಟು 33,901 ಹೆಕ್ಟೇರ್ ಕೃಷಿ ಭೂ ಪ್ರದೇಶ ಬಿತ್ತನೆ ಗುರಿ ಇದ್ದು, ಅದರಲ್ಲಿ 23,161 ಹೆಕ್ಟೇರ್ ಮಳೆಯಾಧಾರಿತ ಮತ್ತು 10738 ಹೆಕ್ಟೇರ್ ನೀರಾವರಿ ಕೃಷಿ ಭೂಮಿ ಇದೆ. ಪ್ರಸ್ತುತ 17000 ಹೆಕ್ಟೆರ್ ಮಳೆಯಾಧಾರಿತ ಭೂಮಿಯಲ್ಲಿ ತೊಗರಿ, 6500 ಹೆಕ್ಟೇರ್ದಲ್ಲಿ ಹತ್ತಿ ಹಾಗೂ 150 ರಿಂದ 160 ಹೆಕ್ಟೇರ್ ಕೃಷಿ ಭುಮಿಯಲ್ಲಿ ಹೆಸರು ಬಿತ್ತನೆ ನಾಟಿ ಬಹುದಾಗಿದೆ. ಉಳಿದ 4 ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ರೈತರ ಅವಶ್ಯಕತೆಗನುಗುಣವಾಗಿ ಬಿತ್ತನೆ ಕಾರ್ಯ ಪ್ರಾರಂಭವಾಗಲಿದ್ದು, ಈಗ ಎಲ್ಲರ ಚಿತ್ತ ಕೃಷಿ ಇಲಾಖೆಯ ಅಧಿಕಾರಿಗಳನತ್ತ ನೆಟ್ಟಿದೆ. ಈ ಬಾರಿ ಮಳೆ ಪ್ರಮಾಣ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಮುಂಚೆಯೇ ತಿಳಿಸಿದ್ದು, ಮುಂದಿನ ದಿಗಳು ರೈತರಿಗೆ ಯಾವ ರೀತಿಯಾಗಿ ವರದಾನವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts