More

    23ರಿಂದ ಕಿತ್ತೂರು ಚನ್ನಮ್ಮ ನಾಟಕ

    ಬೆಳಗಾವಿ: ಇಲ್ಲಿನ ಕ್ಲಬ್ ರಸ್ತೆಯ ಸಿಪಿಇಡಿ ಮೈದಾನದಲ್ಲಿ ಫೆ.23 ಮತ್ತು 24ರಂದು ಸಂಜೆ 5.20ರಿಂದ ರಾತ್ರಿ 8.40ಗಂಟೆಯವರೆಗೆ ಸ್ವಾತಂತ್ರೃ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮಮೆಗಾ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ನಗರದ ವಿಜಯಾ ಆರ್ಥೋ ಮತ್ತು ಟ್ರಾಮಾ ಸೆಂಟರ್ (ವಿಒಟಿಸಿ) ನಿರ್ದೇಶಕ ಡಾ.ರವಿ ಬಿ. ಪಾಟೀಲ ತಿಳಿಸಿದರು. ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ರಂಗಾಯಣ ಮತ್ತು ವಿಒಟಿಸಿ ನೇತೃತ್ವದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಹೋರಾಟ ದಿನಗಳನ್ನು ನೆನಪಿಸುವಂತೆ ಈ ನಾಟಕ ನಗರದಲ್ಲಿ ಎರಡು ದಿನಗಳ ಕಾಲ ಪ್ರದರ್ಶನಗೊಳ್ಳಲಿದೆ. ಮೈದಾನದಲ್ಲಿ 20 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.

    ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದರು. ಈ ಮೆಗಾ ನಾಟಕದಲ್ಲಿ ಆನೆ, ಕುದುರೆ, ಒಂಟೆ, ಬೆಳಗಾವಿ, ಸವದತ್ತಿ, ಧಾರವಾಡ ಸೇರಿ ವಿವಿಧ ಜಿಲ್ಲೆಗಳ 300ಜನ ಕಲಾವಿದರು ಇರಲಿದ್ದಾರೆ. ಈಗಾಗಲೇ ನಾಟಕವು ಚಿಕ್ಕೋಡಿ, ಬೈಲಹೊಂಗಲ, ಸವದತ್ತಿ, ರಾಯಬಾಗ ಇತರ ಭಾಗಗಳಲ್ಲಿ ಪ್ರದರ್ಶನಗೊಂಡಿದೆ. ಇದೀಗ ಬೆಳಗಾವಿ ನಗರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕಲಾವಿದರಿಗೆ ವಸತಿ, ಊಟದ ವ್ಯವಸ್ಥೆ ಹಾಗೂ ಪ್ರಾಣಿಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು. ಸಿಪಿಇಡಿ ಮೈದಾನದಲ್ಲಿ ಜರುಗುವ ನಾಟಕ ವೀಕ್ಷಿಸಲು ಗುರುಸಿದ್ದ ಸ್ವಾಮೀಜಿ, ಚಂದ್ರಶೇಖರ ಶ್ರೀ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts