More

    ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಟೆಕ್ಕಿಯ ಮೇಲೆ ಹರಿದ ಟ್ರಕ್: ತಮ್ಮನ ಎದುರೇ ಅಕ್ಕನ ದುರಂತ ಸಾವು

    ಚೆನ್ನೈ: ರಸ್ತೆ ಗುಂಡಿ ತಪ್ಪಿಸಲ ಹೋಗಿ ಕೆಳಗೆ ಬಿದ್ದ 22 ವರ್ಷದ ಮಹಿಳಾ ಟೆಕ್ಕಿಯ ಮೇಲೆ ಟ್ರಕ್​ ಹರಿದು ದುರಂತ ಸಾವಿಗೀಡಾಗಿರುವ ಘಟನೆ ಚೆನ್ನೈ ಸಮೀಪದ ಮಧುರವಾಯಲ್​ನಲ್ಲಿ ನಡೆದಿದ್ದು, ಸ್ಥಳದಿಂದ ಪರಾರಿಯಾಗಿರುವ ಟ್ರಕ್ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಮೃತಳನ್ನು ಶೋಭನಾ ಎಂದು ಗುರುತಿಸಲಾಗಿದೆ. ಜೋಹೋ ಹೆಸರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಳು. ಮಂಗಳವಾರ ನೀಟ್ ಕೋಚಿಂಗ್ ತರಗತಿಗೆ ತನ್ನ ಸಹೋದರನನ್ನು ಶಾಲೆಗೆ ಬಿಡಲು ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

    ಹೊಂಡಗಳಿಂದ ಆವೃತವಾಗಿರುವ ಮಧುರವಾಯಲ್‌ನ ಭೀಕರ ರಸ್ತೆಯಲ್ಲಿ ಸಾಗುತ್ತಿದ್ದಾಗ ಗುಂಡಿ ತಪ್ಪಿಸಲು ಹೋಗಿ ಕಾಲು ಜಾರಿ ದ್ವಿಚಕ್ರ ವಾಹನ ಸಮೇತ ಶೋಭನಾ ಕೆಳಗೆ ಬಿದ್ದರು. ಈ ವೇಳೆ ಆಕೆಯ ಹಿಂದೆಯೇ ಸಾಗುತ್ತಿದ್ದ ಎಂ-ಸ್ಯಾಂಡ್ ಸಾಗಿಸುತ್ತಿದ್ದ ಟ್ರಕ್ ಆಕೆಯ ಮೇಲೆ ಹರಿದಿದೆ. ಪರಿಣಾಮ ಶೋಭನಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಕೆಯ ಸಹೋದರ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

    ಘಟನೆಯ ಬೆನ್ನಲ್ಲೇ ಮಾಹಿತಿ ತಿಳಿದ ಪೂನಮಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಶೋಭನಾಳ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಪೋರೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತದ ಬೆನ್ನಲ್ಲೇ ಸ್ಥಳದಿಂದ ಪರಾರಿಯಾಗಿರುವ ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

    ಶೋಭನಾ ಸಾವಿನ ಬಗ್ಗೆ ಟ್ವೀಟ್​ ಮೂಲಕ ಜೋಹೊ ಕಂಪನಿ ಸಿಇಒ ಶ್ರೀಧರ್ ವೆಂಬು ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಶೋಭನಾ ಸಾವಿಗೆ ಹದಗೆಟ್ಟ ರಸ್ತೆಗಳೇ ಕಾರಣ ಎಂದು ದೂರಿದ್ದಾರೆ. ರಸ್ತೆ ಹದಗೆಟ್ಟ ಬಗ್ಗೆ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ ನಂತರ, ಪಾಲಿಕೆ ಅಧಿಕಾರಿಗಳು ಮರಳು ಮತ್ತು ಅವಶೇಷಗಳನ್ನು ತಂದು, ಗುಂಡಿಗಳನ್ನು ಮುಚ್ಚಿ, ಒಂದು ಗಂಟೆಯೊಳಗೆ ಯಂತ್ರದ ಸಹಾಯದಿಂದ ರಸ್ತೆಯನ್ನು ಸಮತಟ್ಟು ಮಾಡಿದ್ದಾರೆ. ಈ ಕೆಲಸವನ್ನು ಮೊದಲೇ ಮಾಡಿದ್ದರೆ ಶೋಭನಾಳ ಪ್ರಾಣ ಉಳಿಯುತ್ತಿತ್ತು ಎಂದು ಜನರು ಅಧಿಕಾರಿಗಳ ನಡೆಯನ್ನು ಟೀಕಿಸುತ್ತಿದ್ದಾರೆ.

    ಕುಟುಂಬಕ್ಕೆ ಆಧಾರವಾಗಿದ್ದ ಮಗಳನ್ನು ಕಳೆದುಕೊಂಡ ಕುಟುಂಬ ಇದೀಗ ದುಃಖ ಸಾಗರದಲ್ಲಿ ಮುಳುಗಿದೆ. (ಏಜೆನ್ಸೀಸ್​)

    ಈ 2 ಪಕ್ಷಗಳ ಬಗ್ಗೆ ಮುಸ್ಲಿಮರಿಗೆ ಎಚ್ಚರವಿರಲಿ… ಮುಂದಿನ ಲೋಕಸಭಾ ಚುನಾವಣೆಗೆ ಬಿಹಾರ ಸಿಎಂ ಹೊಸ ತಂತ್ರಗಾರಿಕೆ

    500 ರೂ. ಡ್ರಾ ಮಾಡಲು ಹೋದ್ರೆ ಸಿಗುತ್ತಿದೆ 2500 ರೂ.! ಎಟಿಎಂನಲ್ಲಿ ಹಣದ ಮಳೆ, ಮುಗಿಬಿದ್ದ ಜನರು

    ನಗರದಲ್ಲಿ ಹೆಚ್ಚಿದ ಪುಂಡರ ಹಾವಳಿ: ರಾತ್ರಿಯಾಗ್ತಿದ್ದಂತೆಯೇ ರಸ್ತೆಗಿಳಿದು ಡೆಡ್ಲಿ ವ್ಹೀಲಿಂಗ್, ಅಪಘಾತಕ್ಕೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts