More

    22 ಕೊಳಚೆ ಪ್ರದೇಶ ಘೊಷಣೆ

    ಹಾವೇರಿ: ಶಿಗ್ಗಾಂವಿ ಪುರಸಭೆ ವ್ಯಾಪ್ತಿಯ 7, ಬಂಕಾಪುರ ಪುರಸಭೆಯ 10 ಹಾಗೂ ಸವಣೂರ ಪುರಸಭೆ ವ್ಯಾಪ್ತಿಯ 5 ಪ್ರದೇಶಗಳನ್ನು ಕೊಳಚೆ ಪ್ರದೇಶಗಳೆಂದು ಸರ್ಕಾರ ಹೊಸದಾಗಿ ಘೊಷಿಸಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಶಿಗ್ಗಾಂವಿ ವಿಧಾನಸಭೆ ಮತಕ್ಷೇತ್ರದ ಒಟ್ಟು 22 ಪ್ರದೇಶಗಳನ್ನು ಕೊಳಚೆ ಪ್ರದೇಶ ಎಂದು ಘೊಷಿಸಿದಂತಾಗಿದೆ. ಪ್ರತಿ ಪ್ರದೇಶದಲ್ಲಿ 1 ಸಾವಿರಕ್ಕಿಂತ ಹೆಚ್ಚು ಮನೆಗಳನ್ನು ಸರ್ಕಾರ ನಿರ್ವಿುಸಿಕೊಡಲಿದೆ. ಇದರಿಂದ 10 ಸಾವಿರಕ್ಕೂ ಅಧಿಕ ಜನರು ನಿರ್ಮಲ ವಾತಾವರಣದಲ್ಲಿ ಜೀವನ ನಡೆಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

    ಶಿಗ್ಗಾಂವಿ ಪುರಸಭೆ ವ್ಯಾಪ್ತಿ ಜನತಾ ಪ್ಲಾಟ್ (ಹಳೆಯ ಆಶ್ರಯ ಬಡಾವಣೆ), ಕುಂಚಿಕೊರವರ ಓಣಿ, ಮೌಲಾಲಿ ಗುಡ್ಡ, ಹಳೆಯ ಆಶ್ರಯ ಬಡಾವಣೆ, ರಾಜೀವನಗರ, ಕಾರಡಗಿ ಹಾಗೂ ಜನತಾ ಪ್ಲಾಟ್, ಮೆಹಬೂಬನಗರ ಆಯ್ಕೆಯಾಗಿವೆ. ಬಂಕಾಪುರ ಪುರಸಭೆ ವ್ಯಾಪ್ತಿಯ ಮಂಡಾಲ ಮೊಹಲ್ಲಾ ಓಣಿ, ಡೋರ ಓಣಿ, ಹರಿಜನಕೇರಿ ಓಣಿ, ಕನೋಜಗೇರಿ ಓಣಿ, ಮೊಮಿನ ಮೊಹಲ್ಲಾ ಓಣಿ, ಜಮಾದಾರ ಓಣಿ, ಒಡ್ಡರ ಓಣಿ, ಪಟವೇಗಾರ ಓಣಿ, ರಾಯಚೂರ ಓಣಿ, ಮಂಜುನಾಥ ನಗರ ಹಾಗೂ ಮಟಗಾರ ಓಣಿ ಆಯ್ಕೆಯಾಗಿವೆ. ಸವಣೂರ ಪುರಸಭೆ ವ್ಯಾಪ್ತಿಯ ಶುಕ್ರವಾರಪೇಟ ಓಣಿ, ದುಖಾನದಾರ ಓಣಿ, ಖಾದರಭಾಗ ಓಣಿ, ಹುಜರೇ ಓಣಿ, ಕಮಾಲ ಬಂಗಡಿ ಓಣಿ ಆಯ್ಕೆಯಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts