More

    ಮೂರು ಕ್ಷೇತ್ರಗಳ ಉಪ ಚುನಾವಣೆ: 22.57 ಲಕ್ಷ ಮಂದಿಗೆ ಮತದಾನದ ಹಕ್ಕು…

    ಬೆಂಗಳೂರು: ಬೆಳಗಾವಿ ಲೋಕಸಭೆ, ಬಸವ ಕಲ್ಯಾಣ ಹಾಗೂ ಮಸ್ಕಿ ವಿಧಾನಸಭೆ ಉಪ ಚುನಾವಣೆಯಲ್ಲಿ 22,57,469 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು, ಒಟ್ಟು ಮತದಾರರ ಪೈಕಿ 11,36,293 ಪುರುಷ, 11,21,101 ಮಹಿಳೆ ಮತ್ತು 75 ಇತರ ಮತದಾರರಿದ್ದಾರೆ.

    ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ 18,11,642 ಮತದಾರರಿದ್ದರೆ, ಬಸವಕಲ್ಯಾಣದಲ್ಲಿ 2,39,473 ಮತ್ತು ಮಸ್ಕಿ (ಪರಿಶಿಷ್ಟ ಪಂಗಡ)ದಲ್ಲಿ 2,06,354 ಮತದಾರರಿದ್ದಾರೆ. ಬೆಳಗಾವಿಯಲ್ಲಿ 12,209, ಬಸವಕಲ್ಯಾಣ 2079 ಮತ್ತು ಮಸ್ಕಿಯಲ್ಲಿ 2400 ವಿಶೇಷ ಚೇತನ ಮತದಾರರಿದ್ದಾರೆ. ಬೆಳಗಾವಿಯಲ್ಲಿ 2064, ಬಸವಕಲ್ಯಾಣದಲ್ಲಿ 264, ಮಸ್ಕಿಯಲ್ಲಿ 231 ಮತಗಟ್ಟೆ ಸ್ಥಾಪಿಸಲಾಗುತ್ತದೆ. ಈ ಮೂರೂ ಕ್ಷೇತ್ರಗಳಿಗೆ 8052 ಬ್ಯಾಲೆಟ್ ಯುನಿಟ್, 7018 ಕಂಟ್ರೋಲ್ ಯುನಿಟ್ ಮತ್ತು 6,366 ವಿ.ವಿ. ಪ್ಯಾಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ದೂರು ನಿರ್ವಹಣೆಗೆ 1950 ಸಹಾಯವಾಣಿ ಸಕ್ರಿಯಗೊಳಿಸಲಾಗಿದೆ. ಜನಸಾಮಾನ್ಯರು 1800 4255 1950ಗೆ ಕರೆ ಅಡಿ ದೂರು ದಾಖಲಿಸಬಹುದಾಗಿದೆ.

    ಚುನಾವಣಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ನೀತಿ ಸಂಹಿತೆ ಹಾಗೂ ಚುನಾವಣೆ ವೆಚ್ಚ ಉಲ್ಲಂಘನೆಗಳ ಬಗ್ಗೆ ದೂರುಗಳನ್ನು ಸಿ-ವಿಜಿಲ್ ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಾಯಿಸಿಕೊಳ್ಳಬಹುದು. ಸುವಿಧಾ ತಂತ್ರಾಂಶದ ಮೂಲಕ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಆನ್‌ಲೈನ್‌ ಮೂಲಕ ನಾಮಪತ್ರ ಸಲ್ಲಿಸಲು ಹಾಗೂ ಚುನಾವಣೆಗೆ ಸಂಬಂಧಿಸಿದ ವಿವಿಧ ರೀತಿಯ ಅನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಾದರಿ ನೀತಿ ಸಂಹಿತೆಯು ಚುನಾವಣೆ ಘೋಷಿಸಿದ ದಿನಾಂಕದಿಂದಲೇ ಜಾರಿಗೆ ಬರುತ್ತದೆ. ಕೋವಿಡ್-19ನ ಮಾರ್ಗಸೂಚಿ ಅನ್ವಯ ಉಪ ಚುನಾವಣೆ ನಡೆಸಲಾಗುತ್ತದೆ ಎಂದು ಮುಖ್ಯಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

    ರಾಜ್ಯ ರಸ್ತೆ ಸಾರಿಗೆ ನೌಕರರಿಂದ ಮತ್ತೆ ಮುಷ್ಕರ; ಬೇಡಿಕೆ ಈಡೇರದ ಕಾರಣಕ್ಕೆ ನಿರ್ಧಾರ

    ಕರೊನಾ ಲಸಿಕೆ ಪಡೆದ ಎರಡು ಗಂಟೆಯಲ್ಲಿ ವೃದ್ಧೆ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts