More

    22 ರಂದು ಕನಿಷ್ಟ ಐದು ದೀಪಗಳನ್ನು ಬೆಳಗಿಸಿ

    ಮುದ್ದೇಬಿಹಾಳ: ಅಯೋಧ್ಯೆಯ ರಾಮ ಮಂದಿರದಲ್ಲಿ ಜ.22 ರಂದು ಪ್ರತಿಷ್ಠಾಪಿಸಲ್ಪಡುವ ರಾಮನ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಅಂದು ಸಂಜೆ ಪ್ರತಿಯೊಬ್ಬ ರಾಮ ಭಕ್ತರು ಕನಿಷ್ಠ 5 ದೀಪಗಳನ್ನು ಬೆಳಗಿಸಬೇಕು. ಉತ್ತರದ ಕಡೆಗೆ ಮುಖ ಮಾಡಿ ಆರತಿ ಬೆಳಗಬೇಕು ಎಂದು ಸಂಘ ಪರಿವಾರದ ಜಿಲ್ಲಾ ಸಂಘ ಸಂಚಾಲಕ ರಾಮಸಿಂಗ್ ಹಜೇರಿ ಹೇಳಿದರು.

    ಪಟ್ಟಣದ ಮಾರುತೇಶ್ವರ ದೇವಸ್ಥಾನದಲ್ಲಿ ಭಾನುವಾರ ಅಯೋಧ್ಯೆಯ ಶ್ರೀರಾಮ ಮಂತ್ರಾಕ್ಷತೆಯ ವಿಶೇಷ ಪೂಜೆ, ಮಂತ್ರಾಕ್ಷತೆಯ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

    ತಾಲೂಕು ವಿಶ್ವ ಹಿಂದು ಪರಿಷತ್ತಿನ ಅಧ್ಯಕ್ಷ ಶಿವಯೋಗೆಪ್ಪ ರಾಂಪುರ, ಬಿಜೆಪಿ ಹಿರಿಯ ಮುಖಂಡ ಪ್ರಭು ಕಡಿ, ಎಬಿವಿಪಿ ಹಿರಿಯ ಕಾರ್ಯಕರ್ತ ಉದಯಸಿಂಗ್ ರಾಯಚೂರು ಮಾತನಾಡಿ, ಪ್ರತಿಯೊಬ್ಬರೂ ತಮಗೆ ವಿತರಿಸಲಾಗುತ್ತಿರುವ ಪವಿತ್ರ ಮಂತ್ರಾಕ್ಷತೆ, ಶ್ರೀರಾಮನ ಭಾವಚಿತ್ರವನ್ನು ಮನೆಯ ಜಗುಲಿಯ ಮೇಲಿಟ್ಟು ಪೂಜಿಸಬೇಕು ಎಂದರು.

    ಬಜಾರ್ ಹನುಮಾನ ಮಂದಿರದಲ್ಲಿ ಮಂತ್ರಾಕ್ಷತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂತ್ರಾಕ್ಷತೆಯನ್ನು ಪಲ್ಲಕ್ಕಿಯಲ್ಲಿರಿಸಿ ಮಂಗಲವಾದ್ಯಗಳೊಂದಿಗೆ ಕಿಲ್ಲಾಗಲ್ಲಿಯ ಕೊಳ್ಳದ ರಂಗ (ಕಿಲ್ಲಾ ಹನುಮಾನ ಮಂದಿರ) ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು.

    ರಾಮ ಭಜನೆ ನಂತರ ಪ್ರತಿ ಮನೆಗೆ ಮಂತ್ರಾಕ್ಷತೆ, ರಾಮನ ಪೋಟೋ, ಕರಪತ್ರ ವಿತರಿಸಲಾಯಿತು. ಬಸವನಗರ, ವೀರೇಶನಗರ, ಕುಂಬಾರ ಓಣಿ, ಕಿಲ್ಲಾಗಲ್ಲಿಯ ಮನೆ ಮನೆಗೆ ಮಂತ್ರಾಕ್ಷತೆ ಮುಟ್ಟಿಸುವ ಕಾರ್ಯ ನೆರವೇರಿಸಲಾಯಿತು. ರಾಮ ಭಜನೆಯಲ್ಲಿ 2 ವರ್ಷದ ಬಾಲಕಿ ದೇವಿಕಾ ರಾಯಚೂರ ಬಾಲ ರಾಮನ ವೇಷಧಾರಿಯಾಗಿ ಗಮನ ಸಳೆದಳು. ಬಿಜೆಪಿ ಮುದ್ದೇಬಿಹಾಳ ಮಂಡಲದ ನಿಕಟಪೂರ್ವ ಅಧ್ಯಕ್ಷ ಡಾ.ಪರಶುರಾಮ ಪವಾರ ಸಾಮೂಹಿಕ ರಾಮ ತಾರಕ ಮಂತ್ರೋದ್ಘೋಷಣೆ ನಡೆಸಿದರು.

    ಅರ್ಚಕರಾದ ಸಂತೋಷ ಹೂಗಾರ, ಸುರೇಶ ಆಚಾರ್ಯ, ಹುನಗುಂದ ಆಚಾರ್ಯ, ಪುರಸಭೆ ಸದಸ್ಯ ಚನ್ನಪ್ಪ ಕಂಠಿ, ಪುರಸಭೆಯ ಮಾಜಿ ಸದಸ್ಯ ರಾಜು ಬಳ್ಳೊಳ್ಳಿ, ಶಂಕರ ಕಡಿ, ವಿಎಚ್‌ಪಿ ತಾಲೂಕು ಘಟಕದ ಉಪಾಧ್ಯಕ್ಷ ವೀರೇಶ ಢವಳಗಿ, ವಿಎಚ್‌ಪಿ ನಗರ ಕಾರ್ಯದರ್ಶಿ ಹಣಮಂತ ಕಲ್ಯಾಣಿ, ಪ್ರಮುಖರಾದ ಮಾಣಿಕಚಂದ ದಂಡಾವತಿ, ಶರಣು ಸಜ್ಜನ, ಸಂತೋಷ ಬಾವೂರ, ಹರೀಶ ಬೇವೂರ, ಅಶೋಕ ಸಜ್ಜನ, ಗುರುರಾಜ ಕಡಿ, ಮಲ್ಲು ಚೌಧರಿ, ನಿಂಗರಾಜ ಮಹೀಂದ್ರಕರ, ಸಂಪತ್ ಪ್ಯಾಟಿಗೌಡರ, ವಾಸು ಪೋರವಾಲ, ಅಪ್ಪಾಜಿ ಮೋಟಗಿ, ಸಂಪತ್ ಅಂಗಡಿ, ಕಿರಣ್ ಹಳ್ಳೂರ, ಶಿವು ಸಿದ್ದಾಪುರ, ಅಶೋಕ ರಾಠೋಡ, ಸಂಜಯ ಬಾಗೇವಾಡಿ ಇತರರಿದ್ದರು. ಕಿಲ್ಲಾಗಲ್ಲಿ, ಕುಂಬಾರ ಓಣಿ, ವೀರೇಶ ನಗರದ ಮಹಿಳೆಯರು ಆರತಿ ಹಿಡಿದು ಮೆರವಣಿಗೆಯಲ್ಲಿ ಸಾಗಿಬಂದು ಎಲ್ಲರಿಗೂ ಮಂತ್ರಾಕ್ಷತೆ ವಿತರಿಸಿದರು.

    ಬಸವ ನಗರದಲ್ಲಿರುವ ಅಂಬಾ ಭವಾನಿ ದೇವಸ್ಥಾನದಲ್ಲಿಯೂ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ಪ್ರತಿ ಮನೆಗೆ ವಿತರಿಸಲಾಯಿತು. ಜ್ಞಾನ ಭಾರತಿ ಶಾಲೆಯ ಗುರುಮಾತೆಯರಾದ ಲೀಲಾ ಭಟ್, ಶಾಂತಾ ಭಟ್ ಮಾತಾಜಿ, ಮುಖ್ಯಾಧ್ಯಾಪಕ ರಾಮಚಂದ್ರ ಹೆಗಡೆ, ಯಶವಂತ ಕಲಾಲ, ಶಂಕರ ಡಮನಾಳ, ಶ್ರೀಕಾಂತ ಹಿರೇಮಠ, ಕೃಷ್ಣ ಪೂಜಾರಿ, ಕುಬೇರ ಮಿರಜಕರ, ಕಮಲವ್ವ ಡಮನಾಳ, ಲಕ್ಷ್ಮೀ ತಾಡಪತ್ರಿ, ಭಾರತಿ ಮಿರಜಕರ, ಲಕ್ಷ್ಮೀ ಬಡಿಗೇರ, ನೇತಾಜಿ ಭೋಸಲೆ, ಶಿವು ಬಿಜಾಪುರ, ಹಣಮಂತ ನಲವಡೆ, ರಾಘು ಘಾಟಗೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts