More

    ಮುಂದಿನ ವರ್ಷ 217 ಹೊಸ ಇಮೋಜಿ😇😱🤔🤦‍♂️

    ಎಂದೆಂದೂ ಕಂಡರಿಯದ ರೀತಿಯಲ್ಲಿ ಈ ವರ್ಷ ಕರೊನಾ ಜಗತ್ತಿನಾದ್ಯಂತ ದಾಳಿ ಇಟ್ಟಿದೆ. ಲಾಕ್​ಡೌನ್​, ಸೀಲ್​ಡೌನ್​, ಐಸೊಲೇಷನ್​ಗಳಲ್ಲಿ ಅಸಂಖ್ಯಾತ ಮಂದಿ ಬಂಧಿಯಾಗಿರುವಾಗ ಇಲ್ಲಿ ಮಾತ್ರ ಹೊಸ ಹೊಸ ಭಾವನೆಗಳು ಬಿಡುಗಡೆ ಆಗಿವೆ.

    ಈ ಕರೊನಾಘಾತದ ನಡುವೆಯೂ ಅದೇನದು ಹೊಸ ಭಾವನೆ ಎಂದು ಅಚ್ಚರಿ ಆಗಬೇಡಿ. ಇದು ಮುಖಭಾವ/ಸನ್ನೆಗಳ ವಿಷಯ, ಅರ್ಥಾತ್​ ಇಮೋಜಿಗಳ ಮ್ಯಾಟರ್​. ಹೌದು.. ಕೋವಿಡ್​ 19 ಹಾವಳಿ ಮಧ್ಯೆಯೂ ಈ ವರ್ಷ ಇದುವರೆಗೆ 117 ಹೊಸ ಇಮೋಜಿಗಳು ಬಿಡುಗಡೆ ಆಗಿವೆಯಂತೆ. ಆ ಮೂಲಕ ಸದ್ಯ ಚಲಾವಣೆಯಲ್ಲಿರುವ ಇಮೋಜಿಗಳ ಸಂಖ್ಯೆ 3,136ಕ್ಕೆ ತಲುಪಿದೆ.

    ಮತ್ತೊಂದೆಡೆ ಈ ಕರೊನಾ ಯಾವಾಗ ಮುಗಿಯಲಿದೆ, ಮುಂದಿನ ವರ್ಷ ಮಾಮೂಲಿನಂತೆಯೇ ಇರಲಿದೆಯೇ? ಎಂಬ ಯಾವ ವಿಷಯಗಳ ಬಗ್ಗೆಯೂ ಸ್ಪಷ್ಟತೆ ಇಲ್ಲ. ಆದರೆ ಇಮೋಜಿಗಳ ವಿಷಯದಲ್ಲಿ ಹಾಗಿಲ್ಲ. ಏಕೆಂದರೆ ಮುಂದಿನ ವರ್ಷ ಹೊಸದಾಗಿ 217 ಇಮೋಜಿಗಳು ಲೋಕಾರ್ಪಣೆ ಆಗಲಿವೆಯಂತೆ. ಇಮೋಜಿಗಳ ಕುರಿತು ನಡೆದ ಇಂಥದ್ದೊಂದು ಅಧ್ಯಯನ ವರದಿಯನ್ನು ವರ್ಲ್ಡ್​ ಎಕಾನಮಿಕ್ ಫೋರಂ ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

    ಮಾತ್ರವಲ್ಲ ಒಂದು ದಿನದಲ್ಲಿ ಎಷ್ಟು ಎಮೋಜಿಗಳ ಬಳಕೆ ಆಗುತ್ತದೆ ಎಂಬುದರ ಬಗ್ಗೆಯೂ ಇದು ಲೆಕ್ಕಾಚಾರ ಮಾಡಿದೆ. ಸದ್ಯದ ಅಂಕಿ-ಅಂಶಗಳ ಪ್ರಕಾರ ಒಂದು ದಿನಕ್ಕೆ ಬರೀ ಫೇಸ್​ಬುಕ್​ ಹಾಗೂ ಫೇಸ್​ಬುಕ್​ ಮೆಸೆಂಜರ್​ಗಳಲ್ಲೇ 500 ಕೋಟಿ ಇಮೋಜಿಗಳ ಬಳಕೆ ಆಗುತ್ತಿದೆ. 1995ರಲ್ಲಿ 76 ಇಮೋಜಿಗಳಿಂದ ಇದುವರೆಗೆ ಇಮೋಜಿಗಳು ಸಾಗಿ ಬಂದ ಹಾದಿಯನ್ನೂ ಇದು ಸಂಖ್ಯೆಗಳ ಲೆಕ್ಕದಲ್ಲಿ ಪ್ರಕಟಿಸಿದೆ. ಮಾತ್ರವಲ್ಲ 2021ರಲ್ಲಿ ಎಷ್ಟು ಇಮೋಜಿಗಳು ಇರಲಿವೆ ಎಂಬುದನ್ನು ಅಂದಾಜಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts