More

    214 ಪಾಸಿಟಿವ್, 107 ಜನ ಗುಣ

    ಹಾವೇರಿ: ಜಿಲ್ಲೆಯಲ್ಲಿ ಕರೊನಾ ನಾಗಾಲೋಟ ಮುಂದುವರಿದಿದ್ದು ಭಾನುವಾರ 214 ಜನರಿಗೆ ಕೋವಿಡ್-19 ದೃಢಪಟ್ಟಿದೆ. 107 ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

    ಈವರೆಗೆ 6,772 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 4,904 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಭಾನುವಾರ ಒಂದು ಮರಣ ಪ್ರಕರಣ ಸೇರಿ 130 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ.

    1,738 ಸಕ್ರಿಯ ಪ್ರಕರಣಗಳಿವೆ. 1,219 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಹಾಗೂ 519 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್​ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

    ಬ್ಯಾಡಗಿಯಲ್ಲಿ 16, ಹಾನಗಲ್ಲ 21, ಹಾವೇರಿ 69, ಹಿರೇಕೆರೂರ 28, ರಾಣೆಬೆನ್ನೂರ 47, ಸವಣೂರ 18, ಶಿಗ್ಗಾಂವಿಯಲ್ಲಿ 15 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣವಾದ ಬ್ಯಾಡಗಿಯ 26, ಹಿರೇಕೆರೂರ 3, ರಾಣೆಬೆನ್ನೂರ 55, ಶಿಗ್ಗಾಂವಿ 23 ಜನರು ಬಿಡುಗಡೆ ಹೊಂದಿದ್ದಾರೆ. ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೇನ್ಮೆಂಟ್ ಜೋನ್ ಹಾಗೂ ಬಫರ್ ಜೋನ್ ಆಗಿ ಘೊಷಿಸಲಾಗಿದೆ. ಆಯಾ ತಾಲೂಕು ದಂಡಾಧಿಕಾರಿಗಳನ್ನು ಇನ್ಸಿಡೆಂಟಲ್ ಕಮಾಂಡರ್ ಆಗಿ ನೇಮಿಸಲಾಗಿದೆ.

    ಮೃತರ ಮಾಹಿತಿ: ಸವಣೂರ ತಾಲೂಕಿನ ಜಲ್ಲಾಪುರ ಗ್ರಾಮದ 73 ವರ್ಷದ ಪುರುಷ ಮೃತಪಟ್ಟಿದ್ದು, ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ.

    ಸೋಂಕು ನಿಯಂತ್ರಣಕ್ಕೆ ಸ್ವಯಂ ಜಾಗೃತಿ ಅಗತ್ಯ

    ಹಾನಗಲ್ಲ ತಾಲೂಕಿನಲ್ಲಿ ಕರೊನಾ ಪ್ರಕರಣಗಳು ದಿನದಿಂದ-ದಿನಕ್ಕೆ ಹೆಚ್ಚಾಗುತ್ತಲಿವೆ. ಸೋಂಕು ನಿಯಂತ್ರಣಕ್ಕೆ ಸ್ವಯಂ ಜಾಗೃತಿ ಮುಖ್ಯ. ಒಬ್ಬರಿಂದ ಒಬ್ಬರೂ ಅಂತರ ಕಾಯ್ದುಕೊಳ್ಳಬೇಕು. ಗುಂಪು-ಗುಂಪಾಗಿರುವುದನ್ನು ನಿಯಂತ್ರಿಸಬೇಕು ಎಂದು ಶಾಸಕ ಉದಾಸಿ ಮನವಿ ಮಾಡಿದ್ದಾರೆ. ಪ್ರಕಟಣೆ ನೀಡಿರುವ ಅವರು, ತಾಲೂಕಿನಲ್ಲಿ ಇದುವರೆಗೆ 616 ಪ್ರಕರಣ ದಾಖಲಾಗಿದ್ದು, 458 ಜನ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಒಟ್ಟು 12 ಸಾವು ಸಂಭವಿಸಿವೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗೆ ಆಕ್ಸಿಜನ್ ಮತ್ತು ವೆಂಟಿಲೇಟರ್ ಸೌಲಭ್ಯ ಕಲ್ಪಿಸಲಾಗಿದೆ. ಲಕ್ಷಣವಿಲ್ಲದ ಸೋಂಕಿತರು ಮನೆಯಲ್ಲಿಯೇ ಸೂಕ್ತ ಚಿಕಿತ್ಸೆ ಹೊಂದಲು ಆರೋಗ್ಯ ಇಲಾಖೆಯಿಂದ ಅನುಕೂಲ ಕಲ್ಪಿಸಲಾಗಿದೆ. ಇದಲ್ಲದೆ ಸೆ. 3ರಿಂದ ಪಟ್ಟಣದ ವ್ಯಾಪ್ತಿಯಲ್ಲಿ ಮನೆ-ಮನೆಗೆ ತೆರಳಿ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮತ್ತು ಆರ್​ಟಿ-ಪಿಸಿಆರ್ ತಪಾಸಣೆ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಮೊಬೈಲ್ ಟೀಮ್ ಮೂಲಕ ಹಳ್ಳಿಗಳಿಗೂ ಸಂಚರಿಸಲಾಗುತ್ತಿದೆ. ಜನತೆ ಒಂದೆಡೆ ಸೇರಬಾರದು. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಕಡ್ಡಾಯ ಬಳಕೆ ಮಾಡುವ ಜತೆಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಕರ್ತವ್ಯಕ್ಕೆ ಕೈಜೋಡಿಸಬೇಕು ಎಂದು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts