More

    ಮುರುಘಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣ

    ಚಿತ್ರದುರ್ಗ: ಮುರುಘಾ ಸ್ವಾಮೀಜಿ ವಿರುದ್ಧದ ಪೋಕ್ಸೋ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಬಹುಜನ ಸಮಾಜ ಪಾ ರ್ಟಿ ನೇತೃತ್ವದಲ್ಲಿ ಡಿ.21 ರಂದು ಬೆಳಗ್ಗೆ 11 ಗಂಟೆಗೆ ನಗರದ ಒನಕೆ ಓಬವ್ವ ಸರ್ಕಲ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್‌ಪಿ ರಾಜ್ಯಉಸ್ತುವಾರಿ ಮಾರಸಂದ್ರ ಮುನಿಯಪ್ಪ ಹೇಳಿದರು.

    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಪೋಕ್ಸೋ ಪ್ರಕರಣದ ವಿಚಾರಣೆ ಸರಿಯಾಗಿ ನಡೆಯುತ್ತಿಲ್ಲ. ನಿವೃತ್ತ ಡಿಜಿಪಿ ಗಳಾದ ಶಂಕರ ಬಿದರಿ ಹಾಗೂ ಜ್ಯೋತಿ ಪ್ರಕಾಶ್‌ಮಿರ್ಜಿ ಅವರು ಸ್ಥಳೀಯ ಪೊಲೀಸರ ಮೇಲೆ ಪ್ರಭಾವ ಬೀರುತ್ತಿದ್ದಾರೆ. 2ನೇ ಪೋ ಕ್ಸೋ ಪ್ರಕರಣದ 2ನೇ ದೂರುದಾರೆ,ಸಂತ್ರಸ್ಥೆ ಬಾಲಕಿ ತಾಯಿಯನ್ನು 21 ದಿನಗಳ ಪೊಲೀಸರು ತಮ್ಮ ವಶದಲ್ಲಿ ಇಟ್ಟುಕೊಂಡು ಮಾನಸಿಕ ಹಿಂಸೆ ಕೊಟ್ಟಿದ್ದಾರೆ.

    ಹಣ,ರಾಜಕೀಯ ಹಾಗೂ ಮಠದ ಬಲದೊಂದಿಗೆ ಈ ಕೇಸನ್ನೇ ಮುಚ್ಚಿ ಹಾಕುವ ಪ್ರಯತ್ನವೂ ನಡೆದಿದೆ. ಸಂತ್ರಸ್ಥೆಯರಿಗೆ ರಕ್ಷಣೆ ನೀ ಡದ ಎಸ್ಪಿಯನ್ನು ಸಸ್ಪೆಂಡ್ ಮಾಡಬೇಕು. ಪೋಕ್ಸೋ ಪ್ರಕರಣದ ತಪ್ಪಿತಸ್ಥ ಸ್ವಾಮೀಜಿಗೆ ಗಲ್ಲು ಶಿಕ್ಷೆ ಹಾಗೂ ಉಳಿದ ಆರೋಪಿಗಳಿಗೆ ಜೀವಾ ವಧಿ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.

    ಈ ಪ್ರಕರಣ ಕೋರ್ಟಿನಲ್ಲಿದ್ದು,ತಪ್ಪಿಸ್ಥರಿಗೆ ಗಲ್ಲು ಶಿಕ್ಷೆ,ಜೀವಾವಧಿ ವಿಧಿಸಬೇಕೆಂದು ಹೇಳುವ ಮೂಲಕ ತಾವು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿರುವುದಾಗಿ ಸ್ಪಷ್ಟಪಡಿಸಿದರು. ನ್ಯಾಯಾಂಗ ತನಿಖೆಗೆ ಲಿಂಗಾಯತೇತರ ನ್ಯಾಯಮೂರ್ತಿಗಳನ್ನು ನೇಮಿಸ ಬೇಕು.ಮಠ ದ ಲ್ಲಿದ್ದ ಹೆಣ್ಣುಮಕ್ಕಳು 34 ಹೆಣ್ಣು ಮಕ್ಕಳ ನಾಪತ್ತೆಯಾಗಿದ್ದು,ಇವರಲ್ಲಿ 32 ಬಾಲಕಿಯರು ಈಗ ಎಲ್ಲಿದ್ದಾರೆಂಬುದರ ಬಗ್ಗೆಯೂ ತನಿಖೆಯಾ ಗ ಬೇಕು.

    ಸರ್ಕಾರ ಮಠದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಮೈಸೂರು ಒಡನಾಡಿ ಸಂಸ್ಥೆ ಪ್ರಮುಖರಿಗೆ ರಕ್ಷಣೆ ಒದಗಿಸುವುದು ಸೇರಿ ದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ನಮ್ಮ ಪಾರ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ವಿವಿಧ ಸಂಘಟನೆಗಳು ಬೆಂಬಲಿಸಿರುವ ಈ ಪ್ರತಿಭಟನೆಯಲ್ಲಿ ನಾಲ್ಕೈದು ಸಾವಿರ ಜನರು ಪಾಲ್ಗೊಳ್ಳುತ್ತಿದ್ದಾರೆ.
    ಇಂಥೊಂದು ಹೇಯ ಕೃತ್ಯ ನಡೆದಿದ್ದರೂ ಜನಪ್ರತಿನಿಧಿಗಳು ಹಾಗೂ ಮಠಾಧೀಶರು ಬಾಯಿ ಬಿಟ್ಟಿಲ್ಲವೆಂದು ಅಸಮಾಧಾನ ವ್ಯಕ್ತ ಪಡಿಸಿದರು.

    ಮುಖಂಡರಾದ ಎಂ.ಗೋಪಿನಾಥ್,ಆರ್.ಮುನಿಯಪ್ಪ,ಅಶೋಕ್‌ಚಕ್ರವರ್ತಿ,ಎನ್.ಪ್ರಕಾಶ್,ತಾಳಿಕೆರೆ ಮಂಜುನಾಥ್, ಎಲ್.ಅವಿನಾಶ್,ಹೊಳಿಯಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts