More

    21 ಸಾವಿರ ರೂಪಾಯಿ ದಂಡ ವಸೂಲಿ

    ಶಿರಸಿ: ನಗರದಲ್ಲಿ ದಿನದಿಂದ ದಿನಕ್ಕೆ ಕೋವಿಡ್- 19 ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ವಿಶೇಷ ತಂಡ ರಚಿಸಿ, ಕೋವಿಡ್ ನಿಯಮ ಅನುಸರಿಸದವರಿಗೆ ದಂಡ ಹಾಕಿ ಎಚ್ಚರಿಕೆ ನೀಡುತ್ತಿದ್ದಾರೆ. ನಗರದಲ್ಲಿ ಮಾಸ್ಕ್ ಧರಸಿದೆ ಓಡಾಡುತ್ತಿರುವರು ಹಾಗೂ ಅಂಗಡಿಕಾರರಿಗೆ ನಗರ ಠಾಣೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

    ಕಳೆದ ಒಂದು ವಾರದಿಂದ 400ಕ್ಕೂ ಹೆಚ್ಚು ಜನರಿಗೆ 21,800 ರೂಪಾಯಿ ದಂಡ ವಿಧಿಸಲಾಗಿದೆ. ಸಾರ್ವಜನಿಕರಲ್ಲಿ ಕರೊನಾ ಬಗ್ಗೆ ತಿಳಿವಳಿಕೆ ಹಾಗೂ ಮಾಸ್ಕ್ ಧರಿಸುವುದರಿಂದ ಆಗುವ ಉಪಯೋಗದ ಬಗ್ಗೆ ಮಾಹಿತಿ ನೀಡುವ ಕೆಲಸವನ್ನೂ ಮಾಡುತ್ತಿದ್ದಾರೆ. ಈಗಾಗಲೇ ಶಿರಸಿ ನಗರದಲ್ಲಿ ಅಂದಾಜು 1300 ಜನರು ಕರೊನಾ ಸೋಂಕಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಇದೀಗ ಸ್ವಯಂ ಪ್ರೇರಿತವಾಗಿ ದಂಡವನ್ನು ವಿಧಿಸುತ್ತಿದೆ. ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ದಂಡ ವಿಧಿಸುವ ಕಾರ್ಯ ಮಾಡುತ್ತಿದ್ದರೆ, ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಸೇವಕರು ಈ ಕಾಯಕ ಕೈಗೊಂಡಿದ್ದಾರೆ.

    ನಗರದಲ್ಲಿ ನಿತ್ಯ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್​ಪಿ ಮಾರ್ಗದರ್ಶನದಲ್ಲಿ ದಂಡ ಹಾಕುವ ಕೆಲಸ ಮಾಡುತ್ತಿದ್ದೇವೆ. ಇದೇ ರೀತಿ ಸಾರ್ವಜನಿಕರು ನಿರ್ಲಕ್ಷ್ಯ ತೋರಿದರೆ ಮತ್ತಷ್ಟು ಕಠಿಣ ಕ್ರಮಗಳನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಲಿದೆ.
    | ಜಿ.ಟಿ. ನಾಯಕ ಡಿಎಸ್​ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts