More

    2024 ಪ್ರಯಾಣಿಕ ಸ್ನೇಹಿ ವರ್ಷ: ಹಲವು ಯೋಜನೆ ಜಾರಿಗೊಳಿಸಿದ ಕೆಎಸ್‌ಆರ್‌ಟಿಸಿ

    ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವ ಉದ್ದೇಶದಿಂದ ೨೦೨೪ನ್ನು ‘ಪ್ರಯಾಣಿಕ ಸ್ನೇಹಿ ವರ್ಷ’ ಎಂದು ಘೋಷಿಸಿ ಸೇವೆ ನೀಡುವುದಾಗಿ ಘೋಷಿಸಿದೆ. ಪ್ರತಿ ವರ್ಷವನ್ನು ಒಂದೊಂದು ಉದ್ದೇಶವನ್ನಿಟ್ಟುಕೊಂಡು ಸೇವೆ ನೀಡುತ್ತಿರುವ ನಿಗಮ ೨೦೨೩ನ್ನು ‘ಕಾರ್ಮಿಕ ಕಲ್ಯಾಣ ವರ್ಷ’ ಎಂದು ಘೋಷಿಸಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿತ್ತು. ಅದರಂತೆ ೨೦೨೪ನ್ನು ‘ಪ್ರಯಾಣಿಕ ಸ್ನೇಹಿ ವರ್ಷ’ವೆಂದು ಘೋಷಿಸಿ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಅದಕ್ಕಾಗಿ ಈಗಲೇ ನೀಲಿ ನಕ್ಷೆ ಸಿದ್ಧಪಡಿಸಲಾಗುತ್ತಿದೆ.
    ಅಪಘಾತ ವಿಮೆ ಯೋಜನೆಯಡಿ ೧೨ ಮೃತ ಸಿಬ್ಬಂದಿಯ ಅವಲಂಭಿತರಿಗೆ ತಲಾ ೧ ಕೋಟಿ ರೂ. ವಿಮಾ ಹಣ ನೀಡಲಾಗಿದೆ. ನಿಗಮದ ಸಿಬ್ಬಂದಿ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೊತ್ತವನ್ನು ೩ ರಿಂದ ೫ ಪಟ್ಟು ಹೆಚ್ಚಳ ಮಾಡಿ, ಹೊಸ ಕೋರ್ಸುಗಳನ್ನು ಸೇರ್ಪಡೆಗೊಳಿಸಿ, ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದು ವಿದ್ಯಾ ಚೇತನ ಯೋಜನೆ ಹೆಸರಿನಲ್ಲಿ ೩೩೪೫ ಮಕ್ಕಳಿಗೆ ೧.೬೭ ಕೋಟಿ ರೂ.ವಿದ್ಯಾರ್ಥಿ ವೇತನವನ್ನು ಪಾವತಿಸಲಾಗಿದೆ.
    ಜ.೧ರಿಂದ ಅನ್ವಯವಾಗುವಂತೆ ಅಪಘಾತ ಪರಿಹಾರ ಮೊತ್ತವನ್ನು ೩ ಲಕ್ಷ ರೂ.ನಿಂದ ೧೦ ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಜತೆಗೆ ಪ್ರಸಕ್ತ ವರ್ಷದಲ್ಲಿ ಅಂಬಾರಿ ಉತ್ಸವ, ಐರಾವತ ಕ್ಲಬ್ ಕ್ಲಾಸ್, ಪಲ್ಲಕ್ಕಿ, ಎಲೆಕ್ಟ್ರಿಕ್ ಹಾಗೂ ಸಾಮಾನ್ಯ ಸಾರಿಗೆ ಬಸ್‌ಗಳು ಸೇರಿ ಎರಡು ಸಾವಿರ ಹೊಸ ಬಸ್‌ಗಳನ್ನು ನಿಗಮಕ್ಕೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ‘ನಮ್ಮ ಕಾರ್ಗೋ’ ಟ್ರಕ್ ಸೇವೆಯಲ್ಲಿ ಸದ್ಯ ೨೦ ಟ್ರಕ್‌ಗಳಿದ್ದು, ಅದನ್ನು ೫೦೦ ಟ್ರಕ್‌ಗೆ ಹೆಚ್ಚಿಸಲಾಗುತ್ತದೆ ಎಂದು ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts