More

    2023ರ ಮೊದಲಾರ್ಧದಲ್ಲಿ 100 ಕೋಟಿ ರೂ. ಗಳಿಕೆ ಕಂಡ ಭಾರತೀಯ ಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ

    ನವದೆಹಲಿ: 6 ತಿಂಗಳನ್ನು ಕಳೆಯುವ ಮೂಲಕ 2023ರ ಅರ್ಧ ದಾರಿಯನ್ನು ನಾವು ಮುಗಿಸಿದ್ದು, ಇನ್ನು 6 ತಿಂಗಳನ್ನು ಮುಗಿಸುವ ಮೂಲಕ ವರ್ಷವನ್ನು ಪೂರ್ಣಗೊಳಿಸುತ್ತೇವೆ. ಈ ನಡುವೆ 2023ರ ಮೊದಲಾರ್ಧದಲ್ಲಿ ಬಿಡುಗಡೆಗೊಂಡ ಭಾರತೀಯ ಚಿತ್ರಗಳು ಮೈಲಿಗಲ್ಲು ಸಾಧಿಸಿರುವುದು ಇದೀಗ ಇಂಡಿಯನ್​​ ಫಿಲಂ ಇಂಡಸ್ಟ್ರಿಗೆ ಸಂತಸವನ್ನು ನೀಡಿದೆ.

    ಇದನ್ನೂ ಓದಿ: ಗುಣಮಟ್ಟದ ವಿದ್ಯುತ್ ಪೂರೈಸುಂತೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ

    ವರದಿಯ ಪ್ರಕಾರ 2023ರ ಪ್ರಾರಂಭದಲ್ಲಿ ಬಿಡುಗಡೆಗೊಂಡ ಟಾಲಿವುಡ್ ಚಿತ್ರರಂಗದ ವಾಲ್ಟೇರ್ ವೀರಯ್ಯ, ವೀರ ಸಿಂಹ ರೆಡ್ಡಿ, ದಸರಾ ಮತ್ತು ವಿರೂಪಾಕ್ಷ ಚಿತ್ರಗಳು 100 ಕೋಟಿ ಗಳಿಕೆಯನ್ನು ತಲುಪವಲ್ಲಿ ಯಶಸ್ವಿಯಾಗಿವೆ. ಈ ನಾಲ್ಕೂ ಚಿತ್ರಗಳು ಆಯಾ ಸ್ಟಾರ್ ನಟರ ವೃತ್ತಿಜೀವನದಲ್ಲಿ ದೊಡ್ಡ ಹಿಟ್ ತಂದುಕೊಟ್ಟಿದೆ. ತಮಿಳು ಚಿತ್ರರಂಗ ವರಿಸು, ತುನಿವು ಮತ್ತು ಪೊನ್ನಿಯಿನ್ ಸೆಲ್ವನ್ 2 ಚಿತ್ರಗಳು ಸಹ 100 ಕೋಟಿ ಗಳಿಕೆ ಕಂಡಿವೆ.

    ಬಾಲಿವುಡ್​​ನ ಪಠಾನ್, ತೂ ಜೂಥಿ ಮೈನ್ ಮಕ್ಕರ್, ಭೋಲಾ, ಕಿಸಿ ಕಾ ಭಾಯಿ ಕಿಸಿ ಕಿ ಜಾನ್, ದಿ ಕೇರಳ ಸ್ಟೋರಿ, ಜರಾ ಹಟ್ಕೆ ಜರಾ ಬಚ್ಕೆ, ಮತ್ತು ಸತ್ಯ ಪ್ರೇಮ್ ಕಿ ಕಥಾ ಚಿತ್ರಗಳು ಕೂಡ 100 ಕೋಟಿ ಲಾಭವನ್ನು ಗಳಿಸಿದೆ. ಒಟ್ಟಾರೆ ಈ ಎಲ್ಲಾ ಸಿನಿಮಾಗಳು ವ್ಯಾಪಕ ದಾಖಲೆಯನ್ನು ನಿರ್ಮಿಸಿದ್ದು, ಮುಂದಿನಾರ್ಧದಲ್ಲಿ ಯಾವ ಚಿತ್ರಗಳು ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್). 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts