More

    ಜೂನ್​ 1ರಿಂದ ದೇಶದಲ್ಲಿ ರೈಲು ಸಂಚಾರವೂ ಸಾಮಾನ್ಯ ಸ್ಥಿತಿಗೆ

    ನವದೆಹಲಿ: ಲಾಕ್​ಡೌನ್​ 4.0 ಮೇ 31ಕ್ಕೆ ಕೊನೆಗೊಂಡ ಮರುದಿನವೇ ಅಂದರೆ ಜೂನ್​ 1ರಿಂದ ದೇಶಾದ್ಯಂತ ರೈಲು ಸಂಚಾರವೂ ಸಾಮಾನ್ಯ ಸ್ಥಿತಿಗೆ ಮರಳುವ ಸಾಧ್ಯತೆ ಹೆಚ್ಚಾಗಿದೆ.

    ಭಾರತೀಯ ರೈಲ್ವೆ ಐಆರ್​ಸಿಟಿಸಿ ಮೂಲಕ ಜೂನ್​ 1ರಿಂದ 200 ರೈಲುಗಳ ಸಂಚಾರ ಆರಂಭಿಸಲಿದ್ದು, ಇವುಗಳಲ್ಲಿ ಟಿಕೆಟ್​ ಮುಂಗಡ ಕಾಯ್ದಿರಿಸುವಿಕೆಗೆ ಅವಕಾಶ ಮಾಡಿಕೊಡುವುದಾಗಿ ರೈಲ್ವೆ ಸಚಿವ ಪಿಯೂಷ್​ ಗೋಯೆಲ್​ ಟ್ವೀಟ್​ ಮಾಡಿದ್ದಾರೆ.

    ಈ ರೈಲುಗಳು ನಾನ್​ ಎಸಿ ಸೆಕೆಂಡ್​ ಕ್ಲಾಸ್​ ರೈಲುಗಳಾಗಿರಲಿವೆ. ಇವುಗಳಲ್ಲಿ ಎಲ್ಲರಿಗೂ ಸಂಚರಿಸಲು ಮುಕ್ತ ಅವಕಾಶ ಇರಲಿದೆ. ಶ್ರಮಿಕ್​ ವಿಶೇಷ ರೈಲುಗಳ ಹೊರತಾಗಿ ಈ ರೈಲುಗಳು ಸಂಚರಿಸಲಿವೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts