More

    ಕೋಚಿಮುಲ್​ ನೇಮಕಾತಿ ಹಗರಣ: ಪ್ರತಿ ಅಭ್ಯರ್ಥಿಯಿಂದ 20- 30 ಲಕ್ಷ ರೂ. ವಸೂಲಿ? ಇಡಿ ಹೇಳಿದ್ದೇನು?

    20-30 lakhs from each candidate in Kochimul recruitment a bribe

    ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಕೋಚಿಮುಲ್​ ಅಧ್ಯಕ್ಷ ಕೆ.ವೈ.ನಂಜೇಗೌಡ ಮತ್ತು ಇತರ ನಾಲ್ವರು ಸದಸ್ಯರ ನೇಮಕಾತಿ ಸಮಿತಿ ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವುದು ಕಂಡುಬಂದಿದೆ ಎಂದು ಇಡಿ(ಜಾರಿ ನಿರ್ದೇಶನಾಲಯ) ಆರೋಪಿಸಿದೆ.

    ಇದನ್ನೂ ಓದಿ: ‘ನಾನೂ ರಾಮ ಭಕ್ತ – ರಾಮಕೋಟಿ ಬರೆಯುತ್ತಿದ್ದೇನೆ’: ಸಚಿವ ಮುನಿಯಪ್ಪ

    ಮಂಡಳಿಯ ನಿರ್ಧಾರದಂತೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶಗಳನ್ನು ನೀಡಲಾಗಿದೆ. ಅಂತಿಮ ಫಲಿತಾಂಶವನ್ನು ಸಾರ್ವಜನಿಕಗೊಳಿಸದೆ ತರಬೇತಿಗೆ ಕಳುಹಿಸಲಾಗಿದೆ ಎಂದು ಇಡಿ ತಿಳಿಸಿದೆ.

    ರಾಜ್ಯದಲ್ಲೇ 2ನೇ ದೊಡ್ಡದಾದ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರತಿ ಸೀಟಿಗೆ 20 ರಿಂದ 30 ಲಕ್ಷ ರೂಪಾಯಿ ಹಣ ಪಡೆಯಲಾಗಿದೆ. ಅವ್ಯವಹಾರದಲ್ಲಿ ಶಾಸಕ ಕೆ.ವೈ. ನಂಜೇಗೌಡ ನೇರ ಭಾಗಿಯಾಗಿದ್ದಾರೆ ಎಂದು ಇಡಿ ಆರೋಪಿಸಿದೆ.

    ಇನ್ನು ಶಾಸಕ ಕೆ.ವೈ ನಂಜೇಗೌಡ ಮತ್ತು ದರಕಾಸ್ತು ಸಮಿತಿ ಸದಸ್ಯರು ಕಂದಾಯ ಅಧಿಕಾರಿಗಳ ಜತೆ ಶಾಮೀಲಾಗಿ ಮಾಲೂರು ತಾಲೂಕಿನಲ್ಲಿ ಒಂದೇ ತಿಂಗಳಲ್ಲಿ ನಾಲ್ಕು ಸಭೆಗಳಲ್ಲಿ ಹಲವರಿಗೆ 150 ಕೋಟಿ ರೂ. ಮೌಲ್ಯದ ಸುಮಾರು 80 ಎಕರೆ ಜಮೀನು ಅಕ್ರಮವಾಗಿ ಮಂಜೂರು ಮಾಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಹಲವು ಮಂದಿ ಲಾಭ ಪಡೆದಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ.

    ಅಷ್ಟೇ ಅಲ್ಲ, ಅನಧಿಕೃತವಾಗಿ ಸರ್ಕಾರಿ ಜಮೀನು ಹಂಚಿಕೆ ಪ್ರಕರಣದಲ್ಲಿ ಕೆ. ವೈ ನಂಜೇಗೌಡ ಮತ್ತಿತರ ಆರೋಪಿಗಳಿಗೆ ಸಂಬಂಧಿಸಿದ 25 ಲಕ್ಷ ರೂ. ನಗದು, 50 ಕೋಟಿ ಮೌಲ್ಯದ ಸ್ಥಿರ ಹಾಗೂ ಚರಾಸ್ತಿಗೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ಇಡಿ ಮಾಹಿತಿ ನೀಡಿದೆ. 150 ಕೋಟಿ ಮೌಲ್ಯದ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್‌ಎ ಕಾಯ್ದೆ 2002 ರಡಿ ಇಡಿ ಅಧಿಕಾರಿಗಳು ಜ.8 ರಂದು ಶೋಧ ಕಾರ್ಯಾಚರಣೆ ನಡೆಸಿದ್ದರು.

    ರಾಮಮಂದಿರ ಯಜ್ಞಕ್ಕೆ ಪ್ರಧಾನಿ ಸಿದ್ಧತೆ: ಧರ್ಮಶಾಸ್ತ್ರ, ಸಂತರ ಮಾರ್ಗದರ್ಶನದಂತೆ ಯಾಮ-ನಿಯಮ ಪಾಲಿಸುವೆ ಎಂದ ಮೋದಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts